Tag: MCC Polls

ಕೇವಲ 8 ಮತಗಳ ಅಂತರದ ಗೆಲುವು!
ಮೈಸೂರು

ಕೇವಲ 8 ಮತಗಳ ಅಂತರದ ಗೆಲುವು!

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ 58ರಲ್ಲಿ ಕೇವಲ 8 ಮತಗಳ ಅಂತರದಲ್ಲಿ ಬಿಜೆಪಿಯ ಆರ್.ಕೆ. ಶರತ್ ಕುಮಾರ್ ಗೆಲುವು ಸಾಧಿಸಿದ್ದು, ಇದು ಅತ್ಯಂತ ಕಡಿಮೆ ಅಂತರದ ಗೆಲುವಾಗಿದೆ. ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿ.ಪಿ. ಮಂಜುನಾಥ್ ಅಳಿಯನೂ ಆದ ಆರ್.ಕೆ.ಶರತ್‍ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ, ಕಾಂಗ್ರೆಸ್‍ನ ಹೆಚ್.ಸಿ.ಕೃಷ್ಣಕುಮಾರ್ ಸಾಗರ್ 1770 ಮತಗಳನ್ನುಗಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದರು. ಅದೇ ರೀತಿ ವಾರ್ಡ್ 19ರಲ್ಲಿ…

ಮೈಸೂರು ಪಾಲಿಕೆಗೆ ಪುನರಾಯ್ಕೆಗೊಂಡ 8 ಹಾಲಿ ಸದಸ್ಯರು
ಮೈಸೂರು

ಮೈಸೂರು ಪಾಲಿಕೆಗೆ ಪುನರಾಯ್ಕೆಗೊಂಡ 8 ಹಾಲಿ ಸದಸ್ಯರು

September 4, 2018

ಮೈಸೂರು: ಹಾಲಿ ಪಾಲಿಕೆ ಸದಸ್ಯರಲ್ಲಿ 8 ಮಂದಿ ಪುನ ರಾಯ್ಕೆಯಾಗಿದ್ದಾರೆ. ಮಾಜಿ ಮೇಯರ್ ಅಯೂಬ್ ಖಾನ್: ಕಾಂಗ್ರೆಸ್‍ನ ಮಾಜಿ ಮೇಯರ್ ಅಯೂಬ್ ಖಾನ್ 13ನೇ ವಾರ್ಡ್ (ಉದಯಗಿರಿ) ನಲ್ಲಿ ಸತತ 4ನೇ ಬಾರಿ ಪುನರಾಯ್ಕೆಯಾಗಿ ದ್ದಾರೆ. ಅವರು ಜೆಡಿಎಸ್‍ನ ಮೊಹಮ್ಮದ್ ಷರೀಫ್ ಅವರನ್ನು 1142 ಮತಗಳ ಅಂತರ ದಿಂದ ಸೋಲಿಸಿದ್ದಾರೆ. ಎಸ್.ಬಿ.ಎಂ.ಮಂಜು: ಕಳೆದ ಉಪ ಚುನಾ ವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ (ಹಳೇ ವಾರ್ಡ್ 32- ಸಿ.ಮಹದೇಶ್ ಅವರ ಸದ ಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ತೆರವಾದ…

ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಇಂದು ಮತ ಎಣಿಕೆ
ಮೈಸೂರು

ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಇಂದು ಮತ ಎಣಿಕೆ

September 3, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳಿಗೆ ಶುಕ್ರವಾರ ನಡೆದ ಮತದಾನದ ಎಣಿಕಾ ಕಾರ್ಯ ಸೋಮ ವಾರ (ಸೆ.3) ಬೆಳಿಗ್ಗೆ 8ರಿಂದ ಪಡುವಾರ ಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆರಂಭ ಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಪಾಲಿಕೆಯ ಆಡಳಿತ ಯಾರ ಪಾಲಿಗೆ ಒಲಿಯಲಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ. ಮೈಸೂರು ನಗರ ವ್ಯಾಪ್ತಿಯ ಎಲ್ಲಾ 65 ವಾರ್ಡುಗಳ ಮತಯಂತ್ರಗಳನ್ನು ಮಹಾರಾಣಿ ವಾಣಿಜ್ಯ ಕಾಲೇಜಿನ 4 ಸ್ಟ್ರಾಂಗ್ ರೂಂಗಳಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, 13 ನೋಡಲ್ ಅಧಿಕಾರಿ…

ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ
ಮೈಸೂರು

ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ

September 2, 2018

ಮೈಸೂರು: ಶುಕ್ರವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕಾ ಕಾರ್ಯವು ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಎಲ್ಲಾ 13 ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲು ತೆಗೆದು ಇವಿಎಂಗಳನ್ನು ಹೊರಗೆ ತೆಗೆಯುವರು. ಪ್ರತೀ ಚುನಾವಣಾಧಿಕಾರಿಗಳ ವ್ಯಾಪ್ತಿಗೆ 5ರಂತೆ ಒಟ್ಟು 65 ಟೇಬಲ್‍ಗೆ ವ್ಯವಸ್ಥೆ ಮಾಡಿದ್ದು, ಪ್ರತೀ ಟೇಬಲ್‍ಗೆ ಮೂವರು…

ಸಮುದಾಯಗಳ ನಡುವೆ ದ್ವೇಷಾಸೂಯೆ ಉಂಟು ಮಾಡಿ ರಾಜಕೀಯ ಲಾಭ ಗಳಿಸುವ ಯತ್ನ
ಮೈಸೂರು

ಸಮುದಾಯಗಳ ನಡುವೆ ದ್ವೇಷಾಸೂಯೆ ಉಂಟು ಮಾಡಿ ರಾಜಕೀಯ ಲಾಭ ಗಳಿಸುವ ಯತ್ನ

September 2, 2018

ಮೈಸೂರು ನಗರಪಾಲಿಕೆ ವಾರ್ಡ್ ನಂ.35ರಲ್ಲಿ ಅಹಿತಕರ ಘಟನೆ ಮೈಸೂರು: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 35 ಸಾತಗಳ್ಳಿ ಮೊದಲ ಹಂತಕ್ಕೆ ಸಂಬಂಧಿಸಿದಂತೆ ಕಲ್ಯಾಣ ಗಿರಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಬಳಿ ಶುಕ್ರ ವಾರ ಸಂಜೆ ನಡೆದ ಅಹಿತಕರ ಘಟನೆ ಹಿಂದೆ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿ ರಾಜ ಕೀಯ ಲಾಭ ಪಡೆಯುವ ದುರುದ್ದೇಶವಿದೆ ಎಂದು ಬಿಜೆಪಿ ಮುಖಂಡರೂ ಆದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದರು. ಮೈಸೂರಿನ ತ್ರಿವೇಣಿ ವೃತ್ತದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ…

ಮೈಸೂರು ಮಹಾ ನಗರಪಾಲಿಕೆ ಚುನಾವಣೋತ್ತರ ಘಟನೆ 4ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ
ಮೈಸೂರು

ಮೈಸೂರು ಮಹಾ ನಗರಪಾಲಿಕೆ ಚುನಾವಣೋತ್ತರ ಘಟನೆ 4ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ

September 2, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 4ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಹೇಶ್ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆದಿದೆ. ಮತದಾನ ಮುಗಿದ ನಂತರ ಬೆಂಬಲಿಗರಾದ ರವಿ ಮತ್ತು ದಿನೇಶ್‍ರೊಂದಿಗೆ ವಾರ್ಡಿನ ಭೈರವೇಶ್ವರ ನಗರದಲ್ಲಿ ಚುನಾವಣೆ ಸಂಬಂಧ ಚರ್ಚಿಸುತ್ತಾ ಕುಳಿತಿದ್ದಾಗ ರಾತ್ರಿ 10.30 ಗಂಟೆ ವೇಳೆಗೆ ಬೈಕ್‍ನಲ್ಲಿ ಬಂದ ದೀಪಕ್ ಗೌಡ, ಮಲ್ಲಿಕಾರ್ಜುನ ಹಾಗೂ ಇತರರು ಏಕಾಏಕಿ ದಾಳಿ ನಡೆಸಿ ಹಲ್ಲೆ ಮಾಡಿ ಪರಾರಿಯಾದರು ಎಂದು ಮಹೇಶ್ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮೂಗು,…

ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ
ಮೈಸೂರು

ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ

September 1, 2018

ಮೈಸೂರು: ಮತಗಟ್ಟೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನೂರಾರು ಜನರಿದ್ದ ಗುಂಪು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಮೈಸೂ ರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 35ನೇ ವಾರ್ಡ್‍ನಲ್ಲಿ ನಡೆದಿದೆ. ಬಿಜೆಪಿ ಮುಖಂಡರಾದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡ ಸಂದೇಶ್, ಕಾರ್ಯಕರ್ತರಾದ ಸಮರ್ಥ್, ಚರಣ್, ಗೋವಿಂದ್, ಮಂಜು ಹಾಗೂ ಪ್ರಭು ಅವರ ಮೇಲೆ ಹಲ್ಲೆ ನಡೆದಿದ್ದು, ಇವರಲ್ಲಿ ನಾಲ್ವರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಕಾವೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ…

ಶಾಂತಿಯುತ ಶೇ.50.01ರಷ್ಟು ಮತದಾನ
ಮೈಸೂರು

ಶಾಂತಿಯುತ ಶೇ.50.01ರಷ್ಟು ಮತದಾನ

September 1, 2018

ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲದೆ ಇನ್ನಿತರೆ ಸಣ್ಣಪುಟ್ಟ ಪಕ್ಷಗಳಲ್ಲದೆ ಪಕ್ಷೇತರರು ಸ್ಪರ್ಧಿಸಿರುವುದರಿಂದ ಸಹಜವಾಗಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಮತದಾನದ ವೇಳೆ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತಗಟ್ಟೆ ಬಳಿ ಮತದಾರನ ಓಲೈಕೆಗೆ ಯತ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಗೆ ಪ್ರಾರಂಭದ ಒಂದು ಗಂಟೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅರ್ಧ ತಾಸು ಕೆಲ ಬೂತ್‍ಗಳಲ್ಲಿ ಒಂದೇ…

ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ

September 1, 2018

ಮೈಸೂರು:  ಪಾಲಿಕೆ ಮಿನಿ ಸಮರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿ ಗಳ ಭವಿಷ್ಯವೀಗ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳಲ್ಲಿ ಭದ್ರವಾಗಿದೆ. ಇಂದು ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಮತದಾರ ತನ್ನ ತೀರ್ಪನ್ನು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ದಾಖಲಿಸಿದ್ದಾನೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 393 ಅಭ್ಯರ್ಥಿಗಳ ಅದೃಷ್ಟ ಸೆಪ್ಟೆಂಬರ್ 3ರಂದು ಬಹಿರಂಗಗೊಳ್ಳಲಿದೆ. ಮೈಸೂರು ಮಹಾನಗರಪಾಲಿಕೆಯ ಒಟ್ಟು 815 ಮತಗಟ್ಟೆಗಳಲ್ಲಿ ದಾಖಲಾದ ಮತಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ತಮ್ಮ ದೃಢೀಕರಣದೊಂದಿಗೆ ಆಯಾ ಚುನಾವಣಾಧಿಕಾರಿಗಳು ಸೀಲ್ ಮಾಡಿದ ಇವಿಎಂಗಳನ್ನು…

ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ

September 1, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 7,98,690 ಮತದಾರರ ಪೈಕಿ 3,99,428 ಮಂದಿ ಹಕ್ಕು ಚಲಾಯಿಸಿದ್ದು, ಶೇಕಡಾ 50.01ರಷ್ಟು ಮತದಾನ ನಡೆದಿದೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಯರಗನಹಳ್ಳಿ, ಅಂಬೇಡ್ಕರ್ ಕಾಲೋನಿ 36ನೇ ವಾರ್ಡ್‍ನಲ್ಲಿ ಶೇ.65.83ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,057 ಮತದಾರರ ಪೈಕಿ 6,621 ಮಂದಿ ಮತ ಚಲಾಯಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಂಡಿ ಮೊಹಲ್ಲಾ 24ನೇ ವಾರ್ಡ್‍ನಲ್ಲಿ ಅತೀ ಕಡಿಮೆ ಎಂದರೆ 36.80ರಷ್ಟು ಮತದಾನ ನಡೆದಿದ್ದು, ಅಲ್ಲಿನ…

1 2 3 4 6
Translate »