ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ

September 1, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 7,98,690 ಮತದಾರರ ಪೈಕಿ 3,99,428 ಮಂದಿ ಹಕ್ಕು ಚಲಾಯಿಸಿದ್ದು, ಶೇಕಡಾ 50.01ರಷ್ಟು ಮತದಾನ ನಡೆದಿದೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಯರಗನಹಳ್ಳಿ, ಅಂಬೇಡ್ಕರ್ ಕಾಲೋನಿ 36ನೇ ವಾರ್ಡ್‍ನಲ್ಲಿ ಶೇ.65.83ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,057 ಮತದಾರರ ಪೈಕಿ 6,621 ಮಂದಿ ಮತ ಚಲಾಯಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಂಡಿ ಮೊಹಲ್ಲಾ 24ನೇ ವಾರ್ಡ್‍ನಲ್ಲಿ ಅತೀ ಕಡಿಮೆ ಎಂದರೆ 36.80ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,918 ಮತದಾರರ ಪೈಕಿ 4,385 ಮಂದಿ ಮತ ಚಲಾಯಿಸಿದ್ದಾರೆ.

ಬೆಳಿಗ್ಗೆ 7ರಿಂದ 9 ಗಂಟೆವರೆಗೆ ನಡೆದ ಮತದಾನ ದಲ್ಲಿ ಎನ್.ಆರ್.ಕ್ಷೇತ್ರಕ್ಕೊಳಪಟ್ಟ ಕೆಸರೆ 9ನೇ ವಾರ್ಡ್ ನಲ್ಲಿ ಅತೀ ಹೆಚ್ಚು ಅಂದರೆ 1,294 ಮಂದಿ ಮತ ಚಲಾಯಿಸಿದ್ದರು. ಈ ವಾರ್ಡ್‍ನಲ್ಲಿ ಅಂತಿಮವಾಗಿ ಶೇ.58.15ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,947 ಮತದಾರರ ಪೈಕಿ 7,529 ಮಂದಿ ಮತ ಚಲಾಯಿಸಿದ್ದರು. ಹಾಗೆಯೇ ಕೆ.ಆರ್.ಕ್ಷೇತ್ರಕ್ಕೊಳಪಟ್ಟ ಕುವೆಂಪುನಗರ ಎಂ-ಬ್ಲಾಕ್ 59ನೇ ವಾರ್ಡ್‍ನಲ್ಲಿ 300 ಮಂದಿ ಮತ ಚಲಾಯಿಸಿದ್ದರು. ಅಂತಿಮವಾಗಿ ಈ ವಾರ್ಡ್‍ನಲ್ಲಿ ಶೇ.38.47ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,775 ಮತದಾರರ ಪೈಕಿ 4,530 ಮಂದಿ ಮತ ಚಲಾಯಿಸಿದ್ದರು.

ಹೆಬ್ಬಾಳು ಲಕ್ಷ್ಮೀಕಾಂತನಗರ 1ನೇ ವಾರ್ಡ್‍ನಲ್ಲಿ ಶೇ.48.56ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,497 ಮತದಾರರ ಪೈಕಿ 7,040 ಮಂದಿ ಮತ ಚಲಾ ಯಿಸಿದ್ದಾರೆ. ಮಂಚೇಗೌಡನಕೊಪ್ಪಲು 2ನೇ ವಾರ್ಡ್‍ನಲ್ಲಿ 53.82ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,530 ಮತದಾರರ ಪೈಕಿ 6,744 ಮಂದಿ ಮತ ಚಲಾಯಿಸಿ ದ್ದಾರೆ. ಲೋಕನಾಯಕ ನಗರ 4ನೇ ವಾರ್ಡ್‍ನಲ್ಲಿ ಶೇ.59 .10ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,186 ಮತದಾರರ ಪೈಕಿ 6,611 ಮಂದಿ ಮತ ಚಲಾಯಿಸಿ ದ್ದಾರೆ. ಕುಂಬಾರಕೊಪ್ಪಲು 5ನೇ ವಾರ್ಡ್‍ನಲ್ಲಿ ಶೇ.54.50 ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,048 ಮತ ದಾರರ ಪೈಕಿ 5,476 ಮಂದಿ ಮತ ಚಲಾಯಿಸಿದ್ದಾರೆ.
ಗೋಕುಲಂ 6ನೇ ವಾರ್ಡ್‍ನಲ್ಲಿ ಶೇ.47.18ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,766 ಮತದಾರರ ಪೈಕಿ 6,966 ಮಂದಿ ಮತ ಚಲಾಯಿಸಿದ್ದಾರೆ. ಮೇಟಗಳ್ಳಿ 7ನೇ ವಾರ್ಡ್‍ನಲ್ಲಿ ಶೇ.60.06ರಷ್ಟು ಮತದಾನ ನಡೆ ದಿದ್ದು, ಅಲ್ಲಿನ 14,097 ಮತದಾರರ ಪೈಕಿ 8,467 ಮಂದಿ ಮತ ಚಲಾಯಿಸಿದ್ದಾರೆ. ಬನ್ನಿಮಂಟಪ ಹುಡ್ಕೋ ಬಡಾವಣೆ 8ನೇ ವಾರ್ಡ್‍ನಲ್ಲಿ ಶೇ.53.24ರಷ್ಟು ಮತ ದಾನ ನಡೆದಿದ್ದು, ಅಲ್ಲಿನ 10,394 ಮತದಾರರ ಪೈಕಿ 5,534 ಮಂದಿ ಮತ ಚಲಾಯಿಸಿದ್ದಾರೆ. ಕೆಸರೆ 9ನೇ ವಾರ್ಡ್‍ನಲ್ಲಿ ಶೇ.58.15ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,947 ಮತದಾರರ ಪೈಕಿ 7,529 ಮಂದಿ ಮತ ಚಲಾಯಿಸಿದ್ದಾರೆ. ರಾಜೀವ್ ನಗರ 10ನೇ ವಾರ್ಡ್‍ನಲ್ಲಿ ಶೇ.49.28ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,105 ಮತದಾರರ ಪೈಕಿ 5,472 ಮಂದಿ ಮತ ಚಲಾಯಿಸಿ ದ್ದಾರೆ.

ಶಾಂತಿನಗರ-ಮಹದೇವಪುರ ರಸ್ತೆ 11ನೇ ವಾರ್ಡ್‍ನಲ್ಲಿ ಶೇ.46ರಷ್ಟು ಮತ ದಾನ ನಡೆದಿದ್ದು, ಅಲ್ಲಿನ 12,276 ಮತದಾರರ ಪೈಕಿ 5,647 ಮಂದಿ ಮತ ಚಲಾಯಿಸಿದ್ದಾರೆ. ಶಾಂತಿ ನಗರ-ಇಂದಿರಾಗಾಂಧಿ ರಸ್ತೆ 12ನೇ ವಾರ್ಡ್‍ನಲ್ಲಿ ಶೇ.49.80 ರಷ್ಟು ಮತದಾನ ನಡೆದಿದ್ದು, ಅಲ್ಲಿನ 10, 888 ಮತದಾರರ ಪೈಕಿ 5,422 ಮಂದಿ ಮತ ಚಲಾಯಿಸಿದ್ದಾರೆ. ಉದಯಗಿರಿ 13ನೇ ವಾರ್ಡ್‍ನಲ್ಲಿ ಶೇ.55.35ರಷ್ಟು ಮತದಾನ ನಡೆದಿದ್ದು, ಅಲ್ಲಿನ 9,785 ಮತದಾರರ ಪೈಕಿ 5,415 ಮಂದಿ ಮತ ಚಲಾಯಿಸಿದ್ದಾರೆ.

ಸತ್ಯನಗರ 14ನೇ ವಾರ್ಡ್‍ನಲ್ಲಿ ಶೇ.57.05ರಷ್ಟು ಮತ ದಾನ ನಡೆದಿದ್ದು, ಅಲ್ಲಿನ 11,146 ಮತದಾರರ ಪೈಕಿ 6,359 ಮಂದಿ ಮತ ಚಲಾಯಿಸಿದ್ದಾರೆ. ರಾಜೇಂದ್ರನಗರ 15ನೇ ವಾರ್ಡ್‍ನಲ್ಲಿ ಶೇ.50.78ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,102 ಮತದಾರರ ಪೈಕಿ 6,653 ಮಂದಿ ಮತ ಚಲಾಯಿಸಿದ್ದಾರೆ. ಸುಭಾಷ್‍ನಗರ 16ನೇ ವಾರ್ಡ್‍ನಲ್ಲಿ ಶೇ.53.72ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,338 ಮತದಾರರ ಪೈಕಿ 6,091 ಮಂದಿ ಮತ ಚಲಾಯಿಸಿದ್ದಾರೆ. ಬನ್ನಿಮಂಟಪ 17ನೇ ವಾರ್ಡ್‍ನಲ್ಲಿ ಶೇ.52.07ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,760 ಮತದಾರರ ಪೈಕಿ 7,686 ಮಂದಿ ಮತ ಚಲಾಯಿಸಿದ್ದಾರೆ.

ಯಾದವಗಿರಿ 18ನೇ ವಾರ್ಡ್‍ನಲ್ಲಿ ಶೇ.47.83ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,815 ಮತದಾರರ ಪೈಕಿ 5,651 ಮಂದಿ ಮತ ಚಲಾಯಿಸಿದ್ದಾರೆ. ಜಯಲಕ್ಷ್ಮೀ ಪುರಂ, ವಿವಿ ಮೊಹಲ್ಲಾ 19ನೇ ವಾರ್ಡ್‍ನಲ್ಲಿ ಶೇ.43.50 ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,114 ಮತದಾರರ ಪೈಕಿ 5,221 ಮಂದಿ ಮತ ಚಲಾಯಿಸಿದ್ದಾರೆ. ವಿಜಯನಗರ 20ನೇ ವಾರ್ಡ್‍ನಲ್ಲಿ ಶೇ.44.04ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,419 ಮತದಾರರ ಪೈಕಿ 5,469 ಮಂದಿ ಮತ ಚಲಾಯಿಸಿದ್ದಾರೆ. ಗಂಗೋತ್ರಿ 21ನೇ ವಾರ್ಡ್‍ನಲ್ಲಿ ಶೇ.41. 09ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,879 ಮತ ದಾರರ ಪೈಕಿ 4,881 ಮಂದಿ ಮತ ಚಲಾಯಿಸಿದ್ದಾರೆ. ಪಡುವಾರಹಳ್ಳಿ 22ನೇ ವಾರ್ಡ್‍ನಲ್ಲಿ ಶೇ.46.58ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,142 ಮತದಾರರ ಪೈಕಿ 6,122 ಮಂದಿ ಮತ ಚಲಾಯಿಸಿದ್ದಾರೆ.

ಸುಬ್ಬ ರಾಯನಕೆರೆ 23ನೇ ವಾರ್ಡ್‍ನಲ್ಲಿ ಶೇ.48.38ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,217 ಮತದಾರರ ಪೈಕಿ 5,427 ಮಂದಿ ಮತ ಚಲಾಯಿಸಿದ್ದಾರೆ. ತಿಲಕ್ ನಗರ 25ನೇ ವಾರ್ಡ್‍ನಲ್ಲಿ ಶೇ.57.50ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,552 ಮತದಾರರ ಪೈಕಿ 7,793 ಮಂದಿ ಮತ ಚಲಾಯಿಸಿದ್ದಾರೆ. ಮೀನಾಬಜಾರ್ 26ನೇ ವಾರ್ಡ್‍ನಲ್ಲಿ ಶೇ.53.04ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,715 ಮತದಾರರ ಪೈಕಿ 6,744 ಮಂದಿ ಮತ ಚಲಾಯಿಸಿದ್ದಾರೆ. ವೀರನಗೆರೆ 27ನೇ ವಾರ್ಡ್‍ನಲ್ಲಿ ಶೇ.59.18ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,870 ಮತದಾರರ ಪೈಕಿ 7,617 ಮಂದಿ ಮತ ಚಲಾಯಿಸಿದ್ದಾರೆ. ಗಾಂಧಿನಗರ 28ನೇ ವಾರ್ಡ್‍ನಲ್ಲಿ ಶೇ.54.82ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,535 ಮತದಾರರ ಪೈಕಿ 5,775 ಮಂದಿ ಮತ ಚಲಾಯಿಸಿದ್ದಾರೆ.

ಎನ್.ಆರ್.ಮೊಹಲ್ಲಾ 29ನೇ ವಾರ್ಡ್‍ನಲ್ಲಿ ಶೇ.60.65ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,047 ಮತದಾರರ ಪೈಕಿ 7,307 ಮಂದಿ ಮತ ಚಲಾ ಯಿಸಿದ್ದಾರೆ. ಕ್ಯಾತಮಾರನಹಳ್ಳಿ 30ನೇ ವಾರ್ಡ್‍ನಲ್ಲಿ ಶೇ.59.52ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,758 ಮತದಾರರ ಪೈಕಿ 6,403 ಮಂದಿ ಮತ ಚಲಾಯಿಸಿದ್ದಾರೆ. ಕೆ.ಎನ್.ಪುರ 31ನೇ ವಾರ್ಡ್‍ನಲ್ಲಿ ಶೇ.56.41ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,146 ಮತದಾರರ ಪೈಕಿ 5,723 ಮಂದಿ ಮತ ಚಲಾಯಿಸಿದ್ದಾರೆ. ಗೌಸಿಯಾನಗರ 32ನೇ ವಾರ್ಡ್‍ನಲ್ಲಿ ಶೇ.53.82ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,991 ಮತದಾರರ ಪೈಕಿ 6,992 ಮಂದಿ ಮತ ಚಲಾಯಿಸಿದ್ದಾರೆ. ಅಜೀಜ್‍ಸೇಠ್ ನಗರ 33ನೇ ವಾರ್ಡ್‍ನಲ್ಲಿ ಶೇ.54.19ರಷ್ಟು ಮತದಾನ ನಡೆದಿದ್ದು, ಅಲ್ಲಿನ 6,690 ಮತದಾರರ ಪೈಕಿ 3,625 ಮಂದಿ ಮತ ಚಲಾಯಿಸಿದ್ದಾರೆ. ಕಲ್ಯಾಣಗಿರಿ 34ನೇ ವಾರ್ಡ್‍ನಲ್ಲಿ ಶೇ.52.05ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,964 ಮತದಾರರ ಪೈಕಿ 7,268 ಮಂದಿ ಮತ ಚಲಾಯಿ ಸಿದ್ದಾರೆ.

ಸಾತಗಳ್ಳಿ ಬಡಾವಣೆ 35ನೇ ವಾರ್ಡ್‍ನಲ್ಲಿ ಶೇ.54.91 ರಷ್ಟು ಮತದಾನ ನಡೆದಿದ್ದು, ಅಲ್ಲಿನ 8,244 ಮತದಾರರ ಪೈಕಿ 4,527 ಮಂದಿ ಮತ ಚಲಾಯಿಸಿದ್ದಾರೆ. ಯರಗನಹಳ್ಳಿ, ಅಂಬೇಡ್ಕರ್ ಕಾಲೋನಿ 36ನೇ ವಾರ್ಡ್‍ನಲ್ಲಿ ಶೇ.65.83ರಷ್ಟು ಮತದಾನ ನಡೆದಿದ್ದು, ಅಲ್ಲಿನ 10.057 ಮತದಾರರ ಪೈಕಿ 6,621 ಮಂದಿ ಮತ ಚಲಾಯಿಸಿದ್ದಾರೆ. ರಾಘ ವೇಂದ್ರನಗರ 37ನೇ ವಾರ್ಡ್‍ನಲ್ಲಿ ಶೇ.47.78ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,398 ಮತದಾರರ ಪೈಕಿ 6,890 ಮಂದಿ ಮತ ಚಲಾಯಿಸಿದ್ದಾರೆ.

ಗಿರಿಯಾಬೋವಿ ಪಾಳ್ಯ 38ನೇ ವಾರ್ಡ್‍ನಲ್ಲಿ ಶೇ.56.38ರಷ್ಟು ಮತದಾನ ನಡೆದಿದ್ದು, ಅಲ್ಲಿನ 8,833 ಮತದಾರರ ಪೈಕಿ 4,980 ಮಂದಿ ಮತ ಚಲಾಯಿಸಿದ್ದಾರೆ. ಗಾಯತ್ರಿಪುರಂ 1ನೇ ಹಂತ 39ನೇ ವಾರ್ಡ್‍ನಲ್ಲಿ ಶೇ.46.18ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,026 ಮತದಾರರ ಪೈಕಿ 6,015 ಮಂದಿ ಮತ ಚಲಾಯಿಸಿದ್ದಾರೆ. ಲಷ್ಕರ್ ಮೊಹಲ್ಲಾ 40ನೇ ವಾರ್ಡ್‍ನಲ್ಲಿ ಶೇ.52.72ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,317 ಮತದಾರರ ಪೈಕಿ 4,493 ಮಂದಿ ಮತ ಚಲಾಯಿಸಿದ್ದಾರೆ. ದೇವರಾಜ ಮೊಹಲ್ಲಾ 41ನೇ ವಾರ್ಡ್‍ನಲ್ಲಿ ಶೇ.54.96ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,513 ಮತದಾರರ ಪೈಕಿ 6,378 ಮಂದಿ ಮತ ಚಲಾಯಿಸಿದ್ದಾರೆ. ಕೆ.ಜಿ.ಕೊಪ್ಪಲು 42ನೇ ವಾರ್ಡ್‍ನಲ್ಲಿ ಶೇ.52.89ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,495 ಮತದಾರರ ಪೈಕಿ 6,608 ಮಂದಿ ಮತ ಚಲಾಯಿಸಿದ್ದಾರೆ.

ಟಿ.ಕೆ.ಬಡಾವಣೆ 43ನೇ ವಾರ್ಡ್‍ನಲ್ಲಿ ಶೇ.52.55 ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,330 ಮತದಾರರ ಪೈಕಿ 5,428 ಮಂದಿ ಮತ ಚಲಾಯಿಸಿದ್ದಾರೆ. ಜನತಾನಗರ 44ನೇ ವಾರ್ಡ್‍ನಲ್ಲಿ ಶೇ.43.40ರಷ್ಟು ಮತದಾನ ನಡೆದಿದ್ದು, ಅಲ್ಲಿನ 16,724 ಮತದಾರರ ಪೈಕಿ 7,258 ಮಂದಿ ಮತ ಚಲಾಯಿಸಿದ್ದಾರೆ. ಶಾರದಾದೇವಿನಗರ 45ನೇ ವಾರ್ಡ್‍ನಲ್ಲಿ ಶೇ.42.88ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,768 ಮತದಾರರ ಪೈಕಿ 5,475 ಮಂದಿ ಮತ ಚಲಾಯಿಸಿದ್ದಾರೆ. ದಟ್ಟಗಳ್ಳಿ 46ನೇ ವಾರ್ಡ್‍ನಲ್ಲಿ ಶೇ.46.28ರಷ್ಟು ಮತದಾನ ನಡೆದಿದ್ದು, ಅಲ್ಲಿನ 9,648 ಮತದಾರರ ಪೈಕಿ 4,465 ಮಂದಿ ಮತ ಚಲಾಯಿಸಿ ದ್ದಾರೆ. ಕುವೆಂಪುನಗರ 47ನೇ ವಾರ್ಡ್‍ನಲ್ಲಿ ಶೇ.38.27 ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,240 ಮತದಾರರ ಪೈಕಿ 4,302 ಮಂದಿ ಮತ ಚಲಾಯಿಸಿದ್ದಾರೆ. ಜಯ ನಗರ 48ನೇ ವಾರ್ಡ್‍ನಲ್ಲಿ ಶೇ.48.88ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,976 ಮತದಾರರ ಪೈಕಿ 5,854 ಮಂದಿ ಮತ ಚಲಾಯಿಸಿದ್ದಾರೆ. ಲಕ್ಷ್ಮೀಪುರಂ 49ನೇ ವಾರ್ಡ್‍ನಲ್ಲಿ ಶೇ.50.16ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,564 ಮತದಾರರ ಪೈಕಿ 7,306 ಮಂದಿ ಮತ ಚಲಾಯಿಸಿದ್ದಾರೆ. ಸುಣ್ಣದಕೇರಿ 50ನೇ ವಾರ್ಡ್‍ನಲ್ಲಿ ಶೇ.48.45ರಷ್ಟು ಮತದಾನ ನಡೆದಿದ್ದು, ಅಲ್ಲಿ 13,844 ಮತದಾರರ ಪೈಕಿ 7,707 ಮಂದಿ ಮತ ಚಲಾಯಿಸಿದ್ದಾರೆ.

ಅಗ್ರಹಾರ 51ನೇ ವಾರ್ಡ್‍ನಲ್ಲಿ ಶೇ.49.74ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,698 ಮತದಾರರ ಪೈಕಿ 6,814 ಮಂದಿ ಮತ ಚಲಾಯಿಸಿದ್ದಾರೆ. ಇಟ್ಟಿಗೆಗೂಡು 52ನೇ ವಾರ್ಡ್‍ನಲ್ಲಿ ಶೇ.41.93ರಷ್ಟು ಮತದಾನ ನಡೆ ದಿದ್ದು, ಅಲ್ಲಿ 12,566 ಮತದಾರರ ಪೈಕಿ 5,269 ಮಂದಿ ಮತ ಚಲಾಯಿಸಿದ್ದಾರೆ. ಕುರುಬಾರಹಳ್ಳಿ 53ನೇ ವಾರ್ಡ್ ನಲ್ಲಿ ಶೇ.47.30ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,985 ಮತದಾರರ ಪೈಕಿ 5,196 ಮಂದಿ ಮತ ಚಲಾ ಯಿಸಿದ್ದಾರೆ. ಗುಂಡೂರಾವ್ ನಗರ 54ನೇ ವಾರ್ಡ್ ನಲ್ಲಿ ಶೇ.51.35ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,674 ಮತದಾರರ ಪೈಕಿ 7,021 ಮಂದಿ ಮತ ಚಲಾಯಿಸಿದ್ದಾರೆ. ಚಾಮುಂಡಿಪುರಂ 55ನೇ ವಾರ್ಡ್‍ನಲ್ಲಿ ಶೇ.47.39ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,528 ಮತದಾರರ ಪೈಕಿ 7,885 ಮಂದಿ ಮತ ಚಲಾಯಿಸಿದ್ದಾರೆ. ಕೃಷ್ಣಮೂರ್ತಿ ಪುರಂ 56ನೇ ವಾರ್ಡ್‍ನಲ್ಲಿ ಶೇ.47.51ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,541 ಮತದಾರರ ಪೈಕಿ 6,434 ಮಂದಿ ಮತ ಚಲಾಯಿಸಿದ್ದಾರೆ. ಕುವೆಂಪುನಗರ ಸಿಐಟಿಬಿ 57ನೇ ವಾರ್ಡ್‍ನಲ್ಲಿ ಶೇ.41.60ರಷ್ಟು ಮತದಾನ ನಡೆ ದಿದ್ದು, ಅಲ್ಲಿನ 14,364 ಮತದಾರರ ಪೈಕಿ 5,976 ಮಂದಿ ಮತ ಚಲಾಯಿಸಿದ್ದಾರೆ. ರಾಮಕೃಷ್ಣನಗರ 58ನೇ ವಾರ್ಡ್‍ನಲ್ಲಿ ಶೇ.48.44ರಷ್ಟು ಮತದಾನ ನಡೆದಿದ್ದು, ಅಲ್ಲಿನ 15,554 ಮತದಾರರ ಪೈಕಿ 7,632 ಮಂದಿ ಮತ ಚಲಾಯಿಸಿದ್ದಾರೆ. ಕುವೆಂಪ ನಗರ ಎಂ-ಬ್ಲಾಕ್ 59ನೇ ವಾರ್ಡ್‍ನಲ್ಲಿ ಶೇ.38.47 ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,775 ಮತ ದಾರರ ಪೈಕಿ 4,530 ಮಂದಿ ಮತ ಚಲಾಯಿಸಿದ್ದಾರೆ.

ಅಶೋಕಪುರಂ 60ನೇ ವಾರ್ಡ್ ನಲ್ಲಿ ಶೇ. 55.46ರಷ್ಟು ಮತದಾನ ನಡೆದಿದ್ದು, ಅಲ್ಲಿನ 11,954 ಮತದಾರರ ಪೈಕಿ 6,630 ಮಂದಿ ಮತ ಚಲಾ ಯಿಸಿದ್ದಾರೆ. ವಿದ್ಯಾರಣ್ಯಪುರಂ 61ನೇ ವಾರ್ಡ್‍ನಲ್ಲಿ ಶೇ.40.17ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,718 ಮತದಾರರ ಪೈಕಿ 5,511 ಮಂದಿ ಮತ ಚಲಾಯಿಸಿ ದ್ದಾರೆ. ವಿಶ್ವೇಶ್ವರನಗರ 62ನೇ ವಾರ್ಡ್‍ನಲ್ಲಿ ಶೇ.47.19 ರಷ್ಟು ಮತದಾನ ನಡೆದಿದ್ದು, ಅಲ್ಲಿನ 13,779 ಮತ ದಾರರ ಪೈಕಿ 6.502 ಮಂದಿ ಮತ ಚಲಾಯಿಸಿ ದ್ದಾರೆ. ಜೆ.ಪಿ.ನಗರ 63ನೇ ವಾರ್ಡ್‍ನಲ್ಲಿ ಶೇ.44.71ರಷ್ಟು ಮತದಾನ ನಡೆದಿದ್ದು, ಅಲ್ಲಿನ 12,983 ಮತದಾರರ ಪೈಕಿ 5,805 ಮಂದಿ ಮತ ಚಲಾಯಿಸಿದ್ದಾರೆ. ಅರ ವಿಂದನಗರ 64ನೇ ವಾರ್ಡ್‍ನಲ್ಲಿ ಶೇ.41.47ರಷ್ಟು ಮತದಾನ ನಡೆದಿದ್ದು, ಅಲ್ಲಿ 11,102 ಮತದಾರರ ಪೈಕಿ 4,604 ಮಂದಿ ಮತ ಚಲಾಯಿಸಿದ್ದಾರೆ.

ಶ್ರೀರಾಂಪುರ 65ನೇ ವಾರ್ಡ್‍ನಲ್ಲಿ ಶೇ.42.02 ರಷ್ಟು ಮತದಾನ ನಡೆದಿದ್ದು, ಅಲ್ಲಿನ 14,224 ಮತ ದಾರರ ಪೈಕಿ 5,977 ಮಂದಿ ಮತ ಚಲಾಯಿಸಿದ್ದಾರೆ.

Translate »