Tag: MCC Polls

ಮೈಸೂರಲ್ಲಿ ವಿಭಿನ್ನ ರೀತಿ ನಾನಾ ಪಕ್ಷಗಳ ಪ್ರಚಾರ ಭರಾಟೆ
ಮೈಸೂರು

ಮೈಸೂರಲ್ಲಿ ವಿಭಿನ್ನ ರೀತಿ ನಾನಾ ಪಕ್ಷಗಳ ಪ್ರಚಾರ ಭರಾಟೆ

August 28, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲೀಗ ಪ್ರಚಾರದ ಭರಾಟೆ ಜೋರಾಗಿದೆ. ಎಲ್ಲೆಂದರಲ್ಲಿ ಆಟೋರಿಕ್ಷಾ ಸೇರಿದಂತೆ ವಿವಿಧ ಪ್ರಚಾರ ವಾಹನಗಳು ಅಭ್ಯರ್ಥಿಗಳ ಭಾವಚಿತ್ರ ಸೇರಿದಂತೆ ಮತದಾನಕ್ಕಾಗಿ ಮನವಿ ಮಾಡುವ ಸಂದೇಶವಿರುವ ಬ್ಯಾನರ್‍ಗಳನ್ನು ಕಟ್ಟಿಕೊಂಡು ಸುತ್ತಾಡುತ್ತಿವೆ. ನಗರದ 65 ವಾರ್ಡ್‍ಗಳಲ್ಲೂ ಅಭ್ಯರ್ಥಿಗಳ ಮನೆ ಮನೆ ಭೇಟಿಯೂ ಕಳೆಗಟ್ಟಿದೆ. ಮತದಾರರ ಮನೆ-ಮನಗಳನ್ನು ಮುಟ್ಟಲು ಅಭ್ಯರ್ಥಿಗಳು ಮುದ್ರಿಸಿರುವ ಕರಪತ್ರಗಳು ಇದೀಗ ನಗರದ ಮನೆ-ಮನೆಗಳಲ್ಲೂ ಮಾತ್ರವಲ್ಲದೆ, ಅಂಗಡಿ-ಮುಂಗಟ್ಟು ಸೇರಿದಂತೆ ವಿಶೇಷವಾಗಿ ಚಹ ಅಂಗಡಿಗಳಲ್ಲಿ ಕಾಣಸಿಗುತ್ತಿವೆ. ಮತದಾರರನ್ನು ಖುದ್ದು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು…

ಎನ್.ಆರ್.ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ
ಮೈಸೂರು

ಎನ್.ಆರ್.ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ

August 28, 2018

ಮೈಸೂರು:  ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಕಾಂiÀರ್i ಬಿರುಸುಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಪ್ರಮುಖ ಹುರಿಯಾಳುಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದು, ಮತದಾರರ ಗಮನ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಎಸ್‍ಡಿಪಿಐ, ಬಿಎಸ್‍ಪಿ ಅಭ್ಯರ್ಥಿಗಳು ಸಹ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ತನ್ವೀರ್‍ಸೇಠ್, ಎಂಎಲ್‍ಸಿ ರಿಜ್ವಾನ್ ಹರ್ಷದ್ ಇನ್ನಿತರ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ…

ದಟ್ಟಗಳ್ಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಸಚಿವ ಜಿ.ಟಿ.ದೇವೇಗೌಡರ ರೋಡ್ ಶೋ
ಮೈಸೂರು

ದಟ್ಟಗಳ್ಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಸಚಿವ ಜಿ.ಟಿ.ದೇವೇಗೌಡರ ರೋಡ್ ಶೋ

August 28, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ದಟ್ಟಗಳ್ಳಿ ವಾರ್ಡ್ ಸಂಖ್ಯೆ 46ರಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ ಪರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ರೋಡ್ ಶೋ ನಡೆಸಿ, ಮತ ಯಾಚಿಸಿದರು. ರಾಜರಾಜೇಶ್ವರಿನಗರ, ದಟ್ಟಗಳ್ಳಿ, ಕನಕದಾಸನಗರ ಸುತ್ತಮುತ್ತ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಅನುಸೂಯ ರಮೇಶ್ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ರೋಡ್‍ಶೋ ಸಂದರ್ಭದಲ್ಲಿ ಸಚಿವರೊಂದಿಗೆ ಪಕ್ಷದ ಯುವ ಕಾರ್ಯಕರ್ತರು ಬೈಕ್‍ಗಳಲ್ಲಿ ತೆರಳಿ ಮತದಾರರ ಗಮನ ಸೆಳೆದರು….

ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ
ಮೈಸೂರು

ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ

August 27, 2018

ಮೈಸೂರು:  ಹಾಲಿ ಕಾರ್ಪೊರೇಟರ್‍ಗಳ ಜಿದ್ದಾಜಿದ್ದಿಗೆ ಮೈಸೂರಿನ 2 ವಾರ್ಡ್‍ಗಳು ಅಖಾಡವಾಗಿವೆ. ನಗರದ 6ನೇ ವಾರ್ಡ್ ಗೋಕುಲಂ ನಲ್ಲಿ ಮೂವರು ಹಾಲಿ ಶಾಸಕರು ಸ್ಪರ್ಧೆಗಿಳಿದಿದ್ದಾರೆ. ಟಿ.ಗಿರೀಶ್‍ಪ್ರಸಾದ್ ಬಿಜೆಪಿ ಯಿಂದ, ಎಸ್‍ಬಿಎಂ ಮಂಜು ಜೆಡಿಎಸ್‍ನಿಂದ ಕಣಕ್ಕಿಳಿದಿದ್ದು, ಬಿಜೆಪಿ ಟಿಕೆಟ್ ಕೈತಪ್ಪಿದ ಎಸ್.ಬಾಲಸುಬ್ರಹ್ಮಣ್ಯ(ಸ್ನೇಕ್ ಶ್ಯಾಮ್) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ದಿನೇಶ್ ಹಾಗೂ ಮತ್ತೋರ್ವ ಪಕ್ಷೇತರ ಜೀವನ್ ಪ್ರಕಾಶ್ ಕಣದಲ್ಲಿದ್ದಾರೆ. ಇನ್ನು 51ನೇ ವಾರ್ಡ್ ಅಗ್ರಹಾರದಲ್ಲಿ ಇಬ್ಬರು ಹಾಲಿ ಕಾರ್ಪೊರೇಟರ್‍ಗಳು ಎದು ರಾಗಿದ್ದಾರೆ. ಬಿಜೆಪಿಯ ಬಿ.ವಿ.ಮಂಜುನಾಥ್ ಇದೇ ವಾರ್ಡ್‍ನಲ್ಲಿ…

ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ

August 27, 2018

ಮೈಸೂರು:  ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಮೈಸೂರಿನ ಮೂರೂ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಚುನಾವಣಾ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿ, ಅಗತ್ಯ ಸಲಹೆ ನೀಡಿದರು. ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಮೈಸೂರು ವಿವಿ ವಿಶ್ರಾಂತ ಕುಲಪತಿ, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್. ರಂಗಪ್ಪ ನಿವಾಸದಲ್ಲಿ ಚಾಮರಾಜ ಕ್ಷೇತ್ರ ಹಾಗೂ ಖಾಸಗಿ ಹೋಟೆಲ್‍ಗಳಲ್ಲಿ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿದ ಜಿಟಿಡಿ, ಪಕ್ಷದ ಎಲ್ಲಾ ಅಭ್ಯರ್ಥಿಗಳು ಪ್ರತಿ ಮನೆಗೆ…

ಮೈಸೂರು ನಗರಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: ಮಾಜಿ  ಸಿಎಂ ಸಿದ್ದರಾಮಯ್ಯ ವಿಶ್ವಾಸ
ಮೈಸೂರು

ಮೈಸೂರು ನಗರಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: ಮಾಜಿ  ಸಿಎಂ ಸಿದ್ದರಾಮಯ್ಯ ವಿಶ್ವಾಸ

August 27, 2018

ಮೈಸೂರು: ಹಲವು ಜನಪ್ರಿಯ ಯೋಜನೆಗಳನ್ನು ಈ ಹಿಂದೆ ನಮ್ಮ ಸರ್ಕಾರ ಅನುಷ್ಟಾನಗೊಳಿಸಿದ್ದರೂ ಬಿಜೆಪಿ ಮಾಡಿದ ಸುಳ್ಳು ಅಪಪ್ರಚಾರದಿಂದ ನಮಗೆ ಹಿನ್ನೆಡೆಯಾಯಿತು. ಆದರೆ ಮೈಸೂರು ನಗರಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನ ಲಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ 5 ವರ್ಷಗಳ ಕಾಲ ಆಡಳಿತ ನಡೆಸಿದ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು…

ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ

August 26, 2018

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಕೆಆರ್ ಕ್ಷೇತ್ರದ ಒಟ್ಟು ಇರುವ 20 ವಾರ್ಡ್‍ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಹೊಂದಿದ್ದು, ಈ ಬಾರಿ ಪಾಲಿಕೆಯಲ್ಲಿ 38ರಿಂದ 40 ಸ್ಥಾನಗಳನ್ನು ಗಳಿಸಿ, ಬಿಜೆಪಿ ಸ್ವಂತ ಶಕ್ತಿ ಮೇಲೆ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವರೂ ಆದ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ರಚನೆಯಾದ ಬಳಿಕ ಈವರೆಗೂ ಬಿಜೆಪಿ ಸ್ವಂತ ಶಕ್ತಿಯಿಂದ ಮೇಯರ್…

ಮೈಸೂರು ಪಾಲಿಕೆ ವಾರ್ಡ್ ನಂ.22ರಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ನಂ.22ರಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ

August 26, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.22ರಲ್ಲಿ ಕಣದಲ್ಲಿ ಇರುವವರು ಇಬ್ಬರೇ ಅಭ್ಯರ್ಥಿಗಳು! ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಿದ್ದ ಈ ವಾರ್ಡಿನಲ್ಲಿ ಇದೀಗ ಜೆಡಿಎಸ್‍ನಿಂದ ನಮ್ರತಾ ರಮೇಶ್ ಹಾಗೂ ಕಾಂಗ್ರೆಸ್‍ನಿಂದ ಡಿ.ಸುಲೋಚನಾ ನಡುವೆ ನೇರ ಹಣಾಹಣಿ. ಬಿಜೆಪಿಯಿಂದ ತೇಜಸ್ವಿನಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಗಳು ಹಿಂದುಳಿದ ವರ್ಗ (ಎ) ಸೇರಿದ್ದರೆ, ಬಿಜೆಪಿಯ ತೇಜಸ್ವಿನಿ ಹಿಂದುಳಿದ ವರ್ಗ (ಬಿ)ಗೆ ಸೇರಿದ್ದರು. ಹಿಂದುಳಿದ ವರ್ಗ (ಎ) ಮಹಿಳೆ ಯಾರೂ ಇಲ್ಲದೇ ಇದ್ದಲ್ಲಿ…

ಮೈಸೂರು ನಗರ ಪಾಲಿಕೆಯಲ್ಲಿ ಬಿಎಸ್‍ಪಿ 7ರಿಂದ 8 ವಾರ್ಡ್‍ನಲ್ಲಿ ಜಯ: ಪಕ್ಷದ ರಾಜ್ಯಾಧ್ಯಕ್ಷ ಪ್ರೊ. ಹರಿರಾಂ ವಿಶ್ವಾಸ
ಮೈಸೂರು

ಮೈಸೂರು ನಗರ ಪಾಲಿಕೆಯಲ್ಲಿ ಬಿಎಸ್‍ಪಿ 7ರಿಂದ 8 ವಾರ್ಡ್‍ನಲ್ಲಿ ಜಯ: ಪಕ್ಷದ ರಾಜ್ಯಾಧ್ಯಕ್ಷ ಪ್ರೊ. ಹರಿರಾಂ ವಿಶ್ವಾಸ

August 26, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದ್ದು, 7ರಿಂದ 8 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ ಉತ್ತಮ ಕಾರ್ಯನಿರ್ವಹಣೆ ನೀಡುವ ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಬಿಎಸ್‍ಪಿ ಪಾಲಿಕೆ ಚುನಾವಣೆಯಲ್ಲಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದೆ. ಟಿಕೆಟ್ ಹಂಚಿಕೆಯಲ್ಲಿ…

ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ
ಮೈಸೂರು

ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ

August 26, 2018

ಮೈಸೂರು: ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಸಾಮಾಜಿಕ ಸೇವಾ ಕಾರ್ಯ, ಅರ್ಹತೆ ನೋಡಿ 3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನಗೆ ವಾರ್ಡಿನ ಮತದಾರರು ಬೆಂಬಲ ನೀಡಬೇಕೆಂದು ಕೆ.ವಿ.ಶ್ರೀಧರ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಾವು ಇದುವರೆಗೂ ಮಾಡಿರುವ ಜನಪರ, ಸೇವಾಕಾರ್ಯ ಜೊತೆಗೆ ತಮ್ಮನ್ನು ಆಯ್ಕೆ ಮಾಡಿದಲ್ಲಿ ಮಾಡುವಂತಹ ಕಾರ್ಯಗಳ ಸಂಬಂಧಿ ಹೊರತಂದಿರುವ ಕರಪತ್ರ ಹಾಗೂ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ 5…

1 2 3 4 5 6
Translate »