ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ
ಮೈಸೂರು

ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ

August 27, 2018

ಮೈಸೂರು:  ಹಾಲಿ ಕಾರ್ಪೊರೇಟರ್‍ಗಳ ಜಿದ್ದಾಜಿದ್ದಿಗೆ ಮೈಸೂರಿನ 2 ವಾರ್ಡ್‍ಗಳು ಅಖಾಡವಾಗಿವೆ. ನಗರದ 6ನೇ ವಾರ್ಡ್ ಗೋಕುಲಂ ನಲ್ಲಿ ಮೂವರು ಹಾಲಿ ಶಾಸಕರು ಸ್ಪರ್ಧೆಗಿಳಿದಿದ್ದಾರೆ. ಟಿ.ಗಿರೀಶ್‍ಪ್ರಸಾದ್ ಬಿಜೆಪಿ ಯಿಂದ, ಎಸ್‍ಬಿಎಂ ಮಂಜು ಜೆಡಿಎಸ್‍ನಿಂದ ಕಣಕ್ಕಿಳಿದಿದ್ದು, ಬಿಜೆಪಿ ಟಿಕೆಟ್ ಕೈತಪ್ಪಿದ ಎಸ್.ಬಾಲಸುಬ್ರಹ್ಮಣ್ಯ(ಸ್ನೇಕ್ ಶ್ಯಾಮ್) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ದಿನೇಶ್ ಹಾಗೂ ಮತ್ತೋರ್ವ ಪಕ್ಷೇತರ ಜೀವನ್ ಪ್ರಕಾಶ್ ಕಣದಲ್ಲಿದ್ದಾರೆ.

ಇನ್ನು 51ನೇ ವಾರ್ಡ್ ಅಗ್ರಹಾರದಲ್ಲಿ ಇಬ್ಬರು ಹಾಲಿ ಕಾರ್ಪೊರೇಟರ್‍ಗಳು ಎದು ರಾಗಿದ್ದಾರೆ. ಬಿಜೆಪಿಯ ಬಿ.ವಿ.ಮಂಜುನಾಥ್ ಇದೇ ವಾರ್ಡ್‍ನಲ್ಲಿ ಪುನರಾಯ್ಕೆ ಬಯಸಿ, ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‍ನಿಂದ ಆಯ್ಕೆ ಆಗಿದ್ದ ಎನ್.ಸುನಿಲ್ ಕುಮಾರ್ ಇದೀಗ ಟಿಕೆಟ್ ವಂಚಿತರಾಗಿದ್ದು, ಪಕ್ಷೇತರರಾಗಿ ಬಿ.ವಿ.ಮಂಜುನಾಥ್‍ಗೆ ಪ್ರತಿಸ್ಪರ್ಧಿಯಾಗಿದ್ದಾರೆ. ಇವರೊಂದಿಗೆ ಬಿಜೆಪಿಯಲ್ಲಿದ್ದ ಮಾಜಿ ಕಾರ್ಪೊರೇಟರ್ ಎಂ.ಡಿ.ಪಾರ್ಥಸಾರಥಿ ಈ ಬಾರಿ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆ ಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಜಿ.ಶ್ರೀನಾಥ್ ಮತ್ತೆ ಅಖಾಡಕ್ಕಿಳಿದಿ ದ್ದಾರೆ. ಹೊಸಬರಾದ ಹೆಚ್.ಎಸ್.ಬಾಲಚಂದ್ರಶಾಸ್ತ್ರಿ, ಎನ್.ರವಿ, ಎಂ.ರಾಘವೇಂದ್ರ, ಎಲ್.ರುದ್ರಮೂರ್ತಿ ಹಾಗೂ ಎಸ್.ಶ್ರೀನಿವಾಸ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಮತ್ತಷ್ಟು ಮಂದಿ ಹಾಲಿ ಸದಸ್ಯರು: ಒಂದೇ ವಾರ್ಡ್‍ನಲ್ಲಿ ಎದುರಾಗಿರುವವರಷ್ಟೇ ಅಲ್ಲದೆ ಅನೇಕ ಹಾಲಿ ಸದಸ್ಯರು ವಿವಿಧ ವಾರ್ಡ್‍ಗಳಲ್ಲಿ ಸ್ಪರ್ಧೆಗಿಳಿದಿದ್ದಾರೆ. ಜೆಡಿಎಸ್ ನಿಂದ ಮೇಯರ್ ಬಿ.ಭಾಗ್ಯವತಿ, ಕೆ.ವಿ.ಮಲ್ಲೇಶ್, ಎಸ್.ಬಾಲು, ಕೆ.ಟಿ.ಚೆಲುವೇಗೌಡ, ಅಶ್ವಿನಿ ಅನಂತ, ಬಿ.ಎಂ.ನಟರಾಜ್, ಇಂದಿರಾ ಮಹೇಶ್, ತಸ್ಲಿಂ, ಬಿಜೆಪಿಯಿಂದ ಶಿವಕುಮಾರ್, ಜೆ.ಎಸ್.ಜಗದೀಶ್, ಕಾಂಗ್ರೆಸ್‍ನಿಂದ ಅಯೂಬ್‍ಖಾನ್, ಪ್ರಶಾಂತ್, ಸುಹೇಲ್‍ಬೇಗ್, ಸಿ.ಎಸ್.ರಜಿನಿ ಅಣ್ಣಯ್ಯ, ಶಿವಮಾದು, ಎಂ.ಕಮಲಾ, ಪಕ್ಷೇತರರಾಗಿ ಮ.ವಿ.ರಾಂಪ್ರಸಾದ್, ಸೀಮಾ ಪ್ರಸಾದ್(ಬಿಜೆಪಿ ಬಂಡಾಯ), ಪುರುಷೋತ್ತಮ್, ಸಮಿನ ಜಬೀನ್(ಕಾಂಗ್ರೆಸ್ ಬಂಡಾಯ), ಹಿರಿಯ ಸದಸ್ಯ ಹೆಚ್.ಎನ್.ಶ್ರೀಕಂಠಯ್ಯ ಮತ್ತಿತರರು ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ.

Translate »