ದಟ್ಟಗಳ್ಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಸಚಿವ ಜಿ.ಟಿ.ದೇವೇಗೌಡರ ರೋಡ್ ಶೋ
ಮೈಸೂರು

ದಟ್ಟಗಳ್ಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಸಚಿವ ಜಿ.ಟಿ.ದೇವೇಗೌಡರ ರೋಡ್ ಶೋ

August 28, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ದಟ್ಟಗಳ್ಳಿ ವಾರ್ಡ್ ಸಂಖ್ಯೆ 46ರಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ ಪರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ರೋಡ್ ಶೋ ನಡೆಸಿ, ಮತ ಯಾಚಿಸಿದರು.

ರಾಜರಾಜೇಶ್ವರಿನಗರ, ದಟ್ಟಗಳ್ಳಿ, ಕನಕದಾಸನಗರ ಸುತ್ತಮುತ್ತ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಅನುಸೂಯ ರಮೇಶ್ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ರೋಡ್‍ಶೋ ಸಂದರ್ಭದಲ್ಲಿ ಸಚಿವರೊಂದಿಗೆ ಪಕ್ಷದ ಯುವ ಕಾರ್ಯಕರ್ತರು ಬೈಕ್‍ಗಳಲ್ಲಿ ತೆರಳಿ ಮತದಾರರ ಗಮನ ಸೆಳೆದರು.
ರ್ಯಾಲಿಯಲ್ಲಿ ಪಕ್ಷದ ಅಭ್ಯರ್ಥಿ ಅನಸೂಯ ರಮೇಶ್ ಸೇರಿದಂತೆ ಪಕ್ಷದ ವಾರ್ಡ್‍ನ ಪ್ರಮುಖ ಜೆಡಿಎಸ್ ಮುಖಂಡರು, ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

Translate »