ಎಂಆರ್‍ಸಿ ನೂತನ ಸ್ಟೀವರ್ಡ್‍ಗಳಾಗಿ ಹೆಚ್. ಕುಸುಮಾಕರ್‍ಶೆಟ್ಟಿ, ಎಲ್. ವಿವೇಕಾನಂದ ಆಯ್ಕೆ
ಮೈಸೂರು

ಎಂಆರ್‍ಸಿ ನೂತನ ಸ್ಟೀವರ್ಡ್‍ಗಳಾಗಿ ಹೆಚ್. ಕುಸುಮಾಕರ್‍ಶೆಟ್ಟಿ, ಎಲ್. ವಿವೇಕಾನಂದ ಆಯ್ಕೆ

August 28, 2018

ಮೈಸೂರು: ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ)ನ ನೂತನ ಸ್ಟೀವರ್ಡ್‍ಗಳಾಗಿ ಹೆಚ್. ಕುಸುಮಾಕರ್ ಶೆಟ್ಟಿ (139 ಮತ), ಎಲ್. ವಿವೇಕಾ ನಂದ (116) ಹಾಗೂ ಆಡಳಿತ ಮಂಡಳಿ ಸಮಿತಿ ಸದಸ್ಯರಾಗಿ ಬಿ.ಎನ್. ಕಾರ್ಯಪ್ಪ (147), ಎಂ.ಸಿ. ಮಲ್ಲಿಕಾರ್ಜುನ್ (102) ಆಯ್ಕೆಯಾಗಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಎಂಆರ್‍ಸಿ ವಾರ್ಷಿಕ ಮಹಾಸಭೆ ನಡೆಯಿತು. ನಂತರ ಖಾಲಿ ಇದ್ದ ಎರಡು ಸ್ಟೀವರ್ಡ್ ಹಾಗೂ ಎರಡು ಆಡಳಿತ ಮಂಡಳಿ ಸಮಿತಿ ಸದಸ್ಯ ಸ್ಥಾನಕ್ಕೆ ಮಧ್ಯಾಹ್ನ ಚುನಾವಣೆ ನಡೆದು, ಮತ ಎಣಿಕೆ ನಂತರ ಫಲಿತಾಂಶವೂ ಪ್ರಕಟವಾ ಯಿತು. ಮತ್ತೊಂದು ಅವಧಿಗೆ ಎಂಆರ್‍ಸಿ ಅಧ್ಯಕ್ಷರಾಗಿ ಜಿ. ವೆಂಕಟೇಶ್ ಮುಂದುವರೆದಿದ್ದಾರೆ. ಸರ್ಕಾರದ ನಾಮಕರಣ ಸದಸ್ಯರಾದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »