ದಟ್ಟಗಳ್ಳಿಯಲ್ಲಿ ಅಂಚೆ ಕಚೇರಿ ಆರಂಭ
ಮೈಸೂರು

ದಟ್ಟಗಳ್ಳಿಯಲ್ಲಿ ಅಂಚೆ ಕಚೇರಿ ಆರಂಭ

November 16, 2018

ಮೈಸೂರು: ಮೈಸೂರಿನ ದಟ್ಟಗಳ್ಳಿ 6ನೇ ಹಂತ ಎ ಬ್ಲಾಕ್ ಕನಕದಾಸ ನಗರ 6ನೇ ಮೇನ್, 7ನೇ ಕ್ರಾಸ್‍ನಲ್ಲಿ ಮನೆ ನಂಬರ್ 3030 ಇಲ್ಲಿ ನೂತನ ಅಂಚೆ ಕಚೇರಿಯನ್ನು ತೆರೆಯಲಾಗಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಬಟವಾಡೆ ಸೇವೆ ಒಳಗೊಂಡ ಈ ಅಂಚೆ ಕಚೇ ರಿಯ ಪಿನ್‍ಕೋಡ್ ಸಂಖ್ಯೆ: 570033 ಆಗಿದೆ. ಮೈಸೂರಿನ ನಿವೇದಿತಾ ನಗರ, ಆನಂದ ನಗರ, ರಾಜಾಜಿ ನಗರ, ಜೆ ಬ್ಲಾಕ್, ಆರ್.ಕೆ.ನಗರ, ರಾಜ ರಾಜೇಶ್ವರಿನಗರ, ಎಂ.ಎಂ.ಜಿ. ಲೇಔಟ್, ದೇವಿಪ್ರಸಾದ್ ಲೇಔಟ್, ರವಿಶಂಕರ್ ಲೇಔಟ್, ಮುಡಾ ನೌಕರರ ಲೇಔಟ್, ಎ, ಬಿ ಬ್ಲಾಕ್ ದಟ್ಟಗಳ್ಳಿ, ಭಾಗ್ಯಮ್ಮ ಬಡಾವಣೆ, ಪೃಥ್ವಿ ಲೇಔಟ್, ಕನಕದಾಸ ನಗರ ಜಿ. ಬ್ಲಾಕ್, ಜೆ.ಬ್ಲಾಕ್, ಎಸ್.ಕುವೆಂಪು ಬಡಾವಣೆ, ಸ್ನೇಹಲೋಕ ಲೇಔಟ್, ಗಿರಿಗೌಡ ಬಡಾವಣೆ, ಆರ್.ಟಿ.ನಗರ, ನಂದೀಶ್ ಪ್ರೀತಮ್ ಬಡಾವಣೆ, ಸೋಮನಾಥನಗರ, ಶಂಕರ್ ಲೇಔಟ್, ಎಂ.ಎಂ.ಜಿ ಲೇಔಟ್-ದಟ್ಟಗಳ್ಳಿ, ಮಹಾಲಕ್ಷ್ಮಿ ಲೇಔಟ್, ಅಭ್ಯುದಯ ಅಪಾರ್ಟ್‍ಮೆಂಟ್, ಬಸವೇಶ್ವರನಗರ, ಶಾರದಾದೇವಿನಗರ, ಟಿ.ಕೆ.ಲೇಔಟ್ ಮತ್ತು ಟೌನ್ ಪ್ಲಾನಿಂಗ್ ಲೇಔಟ್‍ನ ಕೆಲವು ಪ್ರದೇಶಗಳಲ್ಲಿ ಸೇವೆಗಳನ್ನು ಒದಗಿಸಲಿದೆ. ಸಾರ್ವಜನಿ ಕರು ಈ ಕಚೇರಿಯ ಉಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »