ಆಯುರ್ವೇದ ಕುರಿತು ಮೈಸೂರಲ್ಲಿ ಜಾಗೃತಿ ಜಾಥಾ
ಮೈಸೂರು

ಆಯುರ್ವೇದ ಕುರಿತು ಮೈಸೂರಲ್ಲಿ ಜಾಗೃತಿ ಜಾಥಾ

November 16, 2018

ಮೈಸೂರು: ಆಯು ರ್ವೇದದ ನಡಿಗೆ ‘ಆರೋಗ್ಯದ ಕಡೆಗೆ’ ಎಂಬ ಜನ ಜಾಗೃತಿ ಜಾಥಾ ಮೈಸೂರಲ್ಲಿ ನಡೆ ಯಿತು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನ ಜಾಗೃತಿ ಜಾಥಾವನ್ನು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಬಳಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಪ್ರಾಧ್ಯಾಪಕರಾದ ಡಾ.ರಾಜೇಂದ್ರ, ಡಾ.ಮೈತ್ರಿ, ಡಾ.ಉಮಾಶಂಕರ್, ಡಾ. ಆದರ್ಶ್, ಡಾ.ಸಂಜಯ್, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ರೈಲು ನಿಲ್ದಾಣ ಸರ್ಕಲ್, ಮೆಟ್ರೋಪೋಲ್ ಸರ್ಕಲ್, ಕಲಾಮಂದಿರ ರಸ್ತೆ ಮೂಲಕ ಸಾಗಿದ ಜಾಥಾ ಕುಕ್ಕರಹಳ್ಳಿ ಕೆರೆ ಬಳಿಯ ಚಂದ್ರವನದಲ್ಲಿ ಅಂತ್ಯಗೊಂಡಿತು.

Translate »