ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ `ಆಯುರ್ ದರ್ಶನ’
ಮೈಸೂರು

ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ `ಆಯುರ್ ದರ್ಶನ’

November 18, 2018

14 ವಿಭಾಗಗಳ ಗಿಡಮೂಲಿಕೆ ಔಷಧ, ಆಯುರ್ವೇದ ಚಿಕಿತ್ಸೆ ಮೂಲಕ ರೋಗಗಳ ಗುಣಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು
ಮೈಸೂರು:  ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಆವರಣ ದಲ್ಲಿ ರೋಗಗಳ ಗುಣ ಪಡಿಸುವ ಹಾಗೂ ಆಯುರ್ವೇದ ಚಿಕಿತ್ಸೆಯ ಉಪಯೋಗ ಕುರಿತ ವಸ್ತುಪ್ರದರ್ಶನ ಆರಂಭವಾಗಿದೆ. ರಾಷ್ಟ್ರೀಯ ಆಯುರ್ವೇದ ಸಪ್ತಾಹದ ಅಂಗವಾಗಿ ಇಂದು ಆರಂಭವಾದ `ಆಯುರ್ ದರ್ಶನ’ ಮುಕ್ತ ದಿನ ಹಾಗೂ ವಸ್ತು ಪ್ರದರ್ಶನವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಉದ್ಘಾಟಿಸಿದರು.

ಕಾಲೇಜಿನ ಮೂರು ಮಹಡಿಗಳ 10 ಕೊಠಡಿಗಳು ಹಾಗೂ 2 ಸಭಾಂಗಣಗಳಲ್ಲಿ ಆಯುರ್ವೇದÀದ ದ್ರವ್ಯ ಗುಣ, ರಸಶಾಸ್ತ್ರ, ಅಗೋದ ತಂತ್ರ, ರಾಗ ವಿಧಾನ, ಮೌಲಿಕ ಸಿದ್ಧಾಂತ, ಶಾರೀರÀ ರಚನೆ, ಪ್ರಸೂತಿ ತಂತ್ರ, ಕೌಮೊರ್ ಮೃತ್ಯ, ಪಾದಕರಣ, ಶಾಧ್ಯ ತಂತ್ರ ಸೇರಿದಂತೆ 14 ವಿಭಾಗಗಳ ಔಷಧಿ ಚಿಕಿತ್ಸಾ ವಿಧಾನಗಳು, ಔಷಧ ತಯಾರಿಕೆ, ವಿವಿಧ ಔಷಧೀಯ ಸಸ್ಯಗಳನ್ನು ಆಯುರ್ ದರ್ಶನದಲ್ಲಿ ಪ್ರದರ್ಶಿಸಲಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಯುರ್ವೇದ ಪದ್ಧತಿಯ ಔಷಧ, ಚಿಕಿತ್ಸೆ ಪಡೆ ಯುತ್ತಿರುವ ರೋಗಿಗಳು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಸ್ತು ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ. ಕಾಲೇಜಿನ ಪ್ರಾಧ್ಯಾ ಪಕರಾದ ಡಾ.ಕೆ.ಎಸ್.ರಾಧಾಕೃಷ್ಣ, ಆರ್.ರಾವ್, ಡಾ.ಮೈತ್ರಿ, ಡಾ.ಶ್ರೀವತ್ಸ, ಡಾ.ಗೀತಾ ಸೇರಿದಂತೆ ಹಲವು ಬೋಧನಾ ಸಿಬ್ಬಂದಿ, ಆಯುರ್ವೇದ ವಿದ್ಯಾರ್ಥಿಗಳು ಹಾಜರಿದ್ದು, ವಸ್ತು ಪ್ರದರ್ಶನ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ವಿವರಣೆ ನೀಡುತ್ತಿದ್ದಾರೆ.

ಇಂದು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಾಳೆ (ನ.18) ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಸ್ತು ಪ್ರದರ್ಶನ ತೆರೆದಿರುತ್ತದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಗಜಾನನ ಹೆಗ್ಡೆ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

100ಕ್ಕೂ ಹೆಚ್ಚು ಬಗೆಯ ಕಾಯಿಲೆಗಳ ಚಿಕಿತ್ಸೆ, ಮಿನರಲ್ ತಯಾರಿಸುವ ಬಗೆ, ಕಾಲೇ ಜಿನ ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆ, ಶರೀರ ರಚನಾ, ಕಾಯಾಶಾಸ್ತ್ರ, ಪಂಚಕರ್ಮ, ಬೆಟ್ಟದ ನಲ್ಲಿಕಾಯಿ ಉಪಯೋಗದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು, ಆ ಮೂಲಕ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ತಿಳಿಸು ವುದು ವಸ್ತುಪ್ರದರ್ಶನದ ಉದ್ದೇಶವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು. ಪಿಯುಸಿ ನಂತರ ಆಯುರ್ವೇದ ವೈದ್ಯ ಶಿಕ್ಷಣ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಗೊಂದಲ ನಿವಾರಣೆ ಮಾಡುವುದು ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆಯುರ್ ದರ್ಶನದ ಪ್ರಮುಖ ಉದ್ದೇಶ ಎಂದು ಡಾ.ಗಜಾನನ ಹೆಗ್ಡೆ ತಿಳಿಸಿದ್ದಾರೆ.

Translate »