ಮೈಸೂರು: ಮೈಸೂರಿನ ಆರ್‍ಬಿಐ ನೋಟು ಮುದ್ರಣಾಲಯದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ವಿಭಾಗದ ಪೊಲೀಸರು ಬೈಕ್ ರ್ಯಾಲಿ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಬಿಆರ್‍ಬಿಎನ್‍ಎಂಪಿಎಲ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತ ಬೈಕ್ ರ್ಯಾಲಿಗೆ ಸಿಐಎಸ್‍ಎಫ್ ವಿಭಾಗದ ಸಹಾಯಕ ಕಮಾಂಡೆಂಟ್ ಸಂಜಯ್ ಕುಮಾರ್ ಚಾಲನೆ ನೀಡಿದರು. ಆರ್‍ಬಿಐ ಆವರಣದಿಂದ 40ಕ್ಕೂ ಹೆಚ್ಚು ಬೈಕ್‍ಗಳಲ್ಲಿ 80ಕ್ಕೂ ಹೆಚ್ಚು ಮಂದಿ ಪೊಲೀಸರು ರಸ್ತೆ ಸುರಕ್ಷತಾ ನಾಮ ಫಲಕಗಳೊಂದಿಗೆ ಹೊರಟ ಬೈಕ್ ರ್ಯಾಲಿ ರಿಂಗ್ ರಸ್ತೆ ಮೂಲಕ ಮೇಟಗಳ್ಳಿ, ಪಿಕೆ ಸ್ಯಾನಿಟೋರಿಯಂ, ಒಂಟಿಕೊಪ್ಪಲು ತಲು ಪಿತು. ಅಲ್ಲಿಂದ ವಾಪಸ್ ಅದೇ ಮಾರ್ಗ ದಲ್ಲಿ ರ್ಯಾಲಿ ನಡೆಸಿ ಆರ್‍ಬಿಐ ತಲುಪಿತು.
ಮಾರ್ಗದುದ್ದಕ್ಕೂ ಕುಡಿದು ವಾಹನ ಚಾಲನೆ ಮಾಡಬೇಡಿ. ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್ ಕಡ್ಡಾಯ ಧರಿಸಿ. ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ಎಂಬಿತ್ಯಾದಿ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.