ಹೆಸರಾಂತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ  ಅವರಿಗೆ “ಮೌಲ್ಯಯುತ ನಾಗರಿಕ ಪ್ರಶಸ್ತಿ’ ಪ್ರದಾನ
ಮೈಸೂರು

ಹೆಸರಾಂತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ  ಅವರಿಗೆ “ಮೌಲ್ಯಯುತ ನಾಗರಿಕ ಪ್ರಶಸ್ತಿ’ ಪ್ರದಾನ

November 18, 2018

ಮೈಸೂರು: ಮೈಸೂರಿನ ಖ್ಯಾತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ ಅವರಿಗೆ `ಮೌಲ್ಯಯುತ ನಾಗರಿಕ ಪ್ರಶಸ್ತಿ’ ಅನ್ನು ಮೈಸೂರು ಲಿಟರರಿ ಫೋರಂ ಚಾರಿ ಟಬಲ್ ಟ್ರಸ್ಟ್ ಪರವಾಗಿ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ಇಂದು ಪ್ರಧಾನ ಮಾಡಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕೆ.ಬಿ.ಗಣಪತಿ ಅವರು, ಡಾ.ಜಗನ್ನಾಥ್ ಶೆಣೈ ಅವರ ಸಾಮಾಜಿಕ ಸೇವೆ ಶ್ಲಾಘನೀಯ. ಶೆಣೈ ಅವರ ಸಾಮಾಜಿಕ ಕೆಲಸಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದು ಕೈಲಿ ಮಾಡಿದ ದಾನ ಮತ್ತೊಂದು ಕೈಗೆ ತಿಳಿಯದಂತೆ ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುತ್ತಿದೆ ಎಂದು ಬಣ್ಣಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎಂ.ಜಗನ್ನಾಥ ಶೆಣೈ, ಒಳ್ಳೆಯ ಕೆಲಸ ಮಾಡುವವರ ಜೊತೆ ಸದಾ ಕೈಜೋಡಿಸುವೆ. ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್‍ಗೆ ಇದೇ ವೇಳೆ 10 ಲಕ್ಷ ರೂ. ನೆರವು ಘೋಷಿಸಿದರು.

14ನೇ ಹಣಕಾಸು ಆಯೋಗ ಮತ್ತು ಮಾಜಿ ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ಡಾ.ವೈ.ವಿ.ರೆಡ್ಡಿ, ಸುಚ್ಚಿತ ಸಂಜಯ್, ಲೇಖಕ ಅರುಣ್ ರಾಮನ್, ರಯಾನ್ ಇರಾನಿ, ತಂಗಂ ಪಣಕಲ್, ಕಿಟ್ಟಿ ಮಂದಣ್ಣ, ಸಿ.ಹನುಮಂತ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷೆ ಶುಭ ಸಂಜಯ್ ಅರಸ್ ಸ್ವಾಗತಿಸಿದರು. ಉಪಾಧ್ಯಕ್ಷ ಸ್ಯಾಮ್ ಚೆರಿಯಾನ್ ವಂದಿಸಿದರು.

Translate »