ಅಂತಾರಾಷ್ಟ್ರೀಯ ಪೇಟೆಂಟ್‍ನಲ್ಲಿ ತೀರಾ ಹಿಂದುಳಿದ ಭಾರತ
ಮೈಸೂರು

ಅಂತಾರಾಷ್ಟ್ರೀಯ ಪೇಟೆಂಟ್‍ನಲ್ಲಿ ತೀರಾ ಹಿಂದುಳಿದ ಭಾರತ

November 18, 2018

ಮೈಸೂರು: ಅಂತಾರಾಷ್ಟ್ರೀಯ ಪೇಟೆಂಟ್‍ಗೆ ಅರ್ಜಿ ಸಲ್ಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ತೀರಾ ಹಿಂದುಳಿದಿದೆ ಎಂಬುದು ನಿರಾಶಾದಾಯಕ ವಿಚಾರ ಎಂದು ಭಾರತ ಸರ್ಕಾರದ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಎಸ್‍ಜೆಸಿಇ ಆವರಣದಲ್ಲಿ ಶನಿವಾರ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿ ಕೋತ್ಸವ ಭಾಷಣ ಮಾಡಿದ ಅವರು, 2017ರಲ್ಲಿ ವಲ್ರ್ಡ್ ಇಂಟಲೆಕ್ಚುಯಲ್ ಪ್ರಾಪರ್ಟಿ ಆರ್ಗನೈಸೇಷನ್ (ಡಬ್ಲುಐಪಿಒ) ಪ್ರಕಾರ, ಜಗತ್ತಿನಾದ್ಯಂತ ಸಂಶೋಧಕರು ಪೇಟೆಂಟ್ ಸಹಕಾರ ಒಪ್ಪಂದದ ಅಡಿಯಲ್ಲಿ 2,43,500 ಅಂತಾರಾಷ್ಟ್ರೀಯ ಪೇಟೆಂಟ್ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕ ಆಧಾರಿತ ಅಭ್ಯರ್ಥಿಗಳು 56,624 ಅರ್ಜಿ ಸಲ್ಲಿಸಿದ್ದರೆ, ಚೀನಾ- 48882, ಮತ್ತು ಜಪಾನ್ 48208. ಜರ್ಮನಿ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ಕ್ರಮವಾಗಿ 18,982 ಮತ್ತು 15,763 ಅರ್ಜಿಗಳೊಂದಿಗೆ ನಾಲ್ಕನೇ ಮತ್ತು ಐದನೇ ಸ್ಥಾನ ಪಡದಿವೆ. ಆದರೆ ಭಾರತೀಯರು 1,803 ಅರ್ಜಿ ಮಾತ್ರ ಸಲ್ಲಿಸಿ ದ್ದಾರೆ. 13 ಮಿಲಿಯನ್ ಜನಸಂಖ್ಯೆ ಹೊಂದಿರುವ ಭಾರತ ಸಲ್ಲಿಸಿದ ಪೇಟೆಂಟ್‍ಗಳ ಸಂಖ್ಯೆ 51 ಮಿಲಿಯನ್ ಜನಸಂಖ್ಯೆ ಹೊಂದಿರುವ ರಿಪಬ್ಲಿಕ್ ಆಫ್ ಕೊರಿಯಾ ಸಲ್ಲಿಸಿದ ಪೇಟೆಂಟ್ ಗಳ ಪೈಕಿ ಕೇವಲ ಶೆ.10ರಷ್ಟು ಮಾತ್ರ ಎಂದು ವಿಶ್ಲೇಷಿಸಿದರು.

2016-17ರ ಅವಧಿಯಲ್ಲಿ ಒಟ್ಟು 45,444 ಅರ್ಜಿಗಳ ಪೈಕಿ ಅಮೆರಿಕ ಪೇಟೆಂಟ್, ಡಿಸೈನ್ ಮತ್ತು ಟ್ರೇಡ್‍ಮಾರ್ಕ್‍ಗಳ ಪೇಟೆಂಟ್ ಕಚೇರಿಯಲ್ಲಿ ಭಾರತೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಅರ್ಜಿ ಗಳ ಸಂಖ್ಯೆ ಕೇವಲ 13,219 (ಶೇ.29) ಎಂಬುದಾಗಿ ಮತ್ತೊಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ ಎಂದು ಹೇಳಿದರು.

ಸ್ವಾತಂತ್ರ್ಯಾ ನಂತರದ ಭಾರತದ ಬಗ್ಗೆ ಪ್ರಸ್ತಾಪಿಸಿದ ಅವರು, ಸ್ವಾತಂತ್ರ್ಯ ಸಮಯದಲ್ಲಿ 350 ದಶಲಕ್ಷದಷ್ಟಿದ್ದ ದೇಶದ ಜನ ಸಂಖ್ಯೆ ಕಳೆದ ವರ್ಷ 1330 ದಶಲಕ್ಷಕ್ಕೆ ಹೆಚ್ಚಿದೆ. ಪ್ರಸ್ತುತ ಜನಸಂಖ್ಯೆಯನ್ನು ನೋಡಿದರೆ, 2024ರ ಹೊತ್ತಿಗೆ ನಾವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿ ರುವ ರಾಷ್ಟ್ರವಾಗಲಿದ್ದೇವೆ ಎನಿಸುತ್ತದೆ ಎಂದರು.

ಏಳು ದಶಕಗಳ ಹಿಂದೆ ಸಾಕ್ಷರತೆ ಪ್ರಮಾಣ ಕೇವಲ ಶೆ.18 ಇತ್ತು. ನಂತರ ಶೇ.70ರವರೆಗೆ ಏರಿಕೆಯಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ದೇಶದಲ್ಲಿ ತಲಾ ಆದಾಯವು ಸ್ವಾತಂತ್ರ್ಯಾ ಸಮಯದಲ್ಲಿ ಕೇವಲ 250 ರೂ. ಇತ್ತು. ಪ್ರಸ್ತುತ ಭಾರತದ ತಲಾ ಆದಾಯವು ರೂ.1.13 ಲಕ್ಷ ಮತ್ತು ದೆಹಲಿಯಂತಹ ಶ್ರೀಮಂತ ರಾಜ್ಯಗಳಲ್ಲಿ ರೂ.3.29 ಎಂದು ಹೇಳಿದರು.

1947ರಲ್ಲಿ ಭಾರತದ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಕೇವಲ 1362 ಮೆಗಾವ್ಯಾಟ್ ಇದು ದೇಶದ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ಮೂರನೇ ಒಂದು ಭಾಗವನ್ನು ಹೊಂದಿದ ನವೀಕರಿಸಬಹುದಾದ ವಿದ್ಯುತ್ ಸ್ಥಾವರಗಳೊಂದಿಗೆ 345 ಜಿಡಬ್ಲು ಸ್ಥಾಪಿತ ಸಾಮಥ್ರ್ಯ ಹೊಂದಿದೆ. ತಲಾ ವಿದ್ಯುತ್ ಬಳಕೆಯಲ್ಲೂ ಸಹ ಅದ್ಭುತ ಬೆಳವಣಿಗೆಯನ್ನು ಕಂಡಿದೆ. ದೇಶದಲ್ಲಿ ಎಲ್ಲಾ ಹಳ್ಳಿUಳೂ ವಿದ್ಯುದೀಕರಣಗೊಳಿಸಲಾಗಿದೆ. ಇದು ಹೆಮ್ಮೆಯ ವಿಚಾರ ಎಂದರು.

ಕರ್ನಾಟಕದಲ್ಲಿ ಅತ್ಯುತ್ತಮ ಶಿಕ್ಷಕರು: ಕರ್ನಾಟಕದಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ, ಅದರಲ್ಲೂ ವಿಶೇಷವಾಗಿ ತಾಂತ್ರಿಕ ಕಾಲೇಜುಗಳು ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿದ್ದಾರೆ. ಅವರು ನಿಮಗೆ ನೀಡಿದ್ದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ಅಧ್ಯಯನ ಮಾಡಲು ಬಹಳ ಸವಲತ್ತುಗಳಿವೆ. ನೀವು ಇಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಸಜ್ಜಾಗಿದ್ದೀರಿ. ಭವಷ್ಯದ ಯಶಸ್ಸಿನ ದಾರಿ ಯನ್ನು ಕಂಡು ಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Translate »