ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು
ಮೈಸೂರು

ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು

August 22, 2019

ಮೈಸೂರು, ಆ.21(ಪಿಎಂ)- ಭೌಗೋಳಿಕವಾಗಿ ಮಾತ್ರವಲ್ಲದೆ, ಜನಸಮುದಾಯಗಳೂ ಒಳಗೊಂ ಡಂತೆ ಭಾರತದ ಕನಿಷ್ಠ ಇತಿಹಾಸ ಅರಿಯದೇ ಭಾರತ ಸಂವಿಧಾನ ಅರ್ಥೈಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿವಿ ಕಾನೂನು ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಸಂವಿಧಾನ ಓದು’ ಕಾನೂನು ಅರಿವು ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಭಾರತದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠ ಲಿಖಿತ ಸಂವಿಧಾನವಾಗಿದ್ದು, ಇದರ ಬಗ್ಗೆ ಅರಿವು ಮೂಡ ಬೇಕೆಂದರೆ, ಮೊದಲು ಭಾರತ ದೇಶದ ಹಿನ್ನೆಲೆ ತಿಳಿದುಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಭೌಗೋಳಿಕ ವಾಗಿ ತಿಳಿದುಕೊಳ್ಳುವುದು ಮಾತ್ರವಲ್ಲ, ಇಲ್ಲಿನ ಜನ ಸಮುದಾಯಗಳ ಹಿನ್ನೆಲೆಯೊಂದಿಗೆ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಈ ಬಗ್ಗೆ ಆಳವಾದ ಅಧ್ಯಯನ ಮಾಡಬೇಕೆಂದಿಲ್ಲ. ಕನಿಷ್ಠ ಮಟ್ಟದ ತಿಳುವಳಿಕೆ ಇದ್ದರೆ ಸಾಕು ಎಂದು ಹೇಳಿದರು.

ಸ್ವಾತಂತ್ರ್ಯದ ಬಳಿಕ ಇಷ್ಟು ವರ್ಷಗಳಲ್ಲಿ ಶೇ.20 ರಿಂದ 80ರಷ್ಟು ಸಾಕ್ಷರತೆ ಸಾಧಿಸಿದ್ದೇವೆ. ಆದರೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗಿದ್ದೇವೆ. ನೈತಿಕ ಹಾಗೂ ಕಾನೂನುಪ್ರಜ್ಞೆಯ ವ್ಯತ್ಯಾಸ ಅರ್ಥೈಸಿಕೊಳ್ಳು ವಲ್ಲಿ ವಿದ್ಯಾವಂತರು ಸೋಲುತ್ತಿದ್ದಾರೆ. ಶೇ.90ರಷ್ಟು ವಿದ್ಯಾವಂತರೂ ಕಾನೂನು ತಿಳುವಳಿಕೆಯಲ್ಲಿ ಅನಕ್ಷ ರಸ್ಥರಾಗಿದ್ದು, ಈ ಕಾರಣಕ್ಕಾಗಿ `ಸಂವಿಧಾನ ಓದು’ ಅಭಿಯಾನ ಪರಿಣಾಮಕಾರಿ ಆಗಬೇಕಿದೆ ಎಂದರು.

ಪ್ರಪಂಚದ 190 ರಾಷ್ಟ್ರಗಳು ತಮ್ಮದೇ ಸಂವಿಧಾನ ಹೊಂದಿದ್ದು, ಜಗತ್ತಿನಾದ್ಯಂತ ಜನತೆ ಸಂವಿಧಾನ ದಡಿಯ ಆಡಳಿತ ಬಯಸುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ನಾವು ನಮ್ಮ ಸಂವಿಧಾನದ ಬಗ್ಗೆ ಅರಿತುಕೊಳ್ಳು ವುದು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಸಂವಿಧಾನ ಓದಿ, ಅರ್ಥೈಸಿಕೊಂಡು ಪಾಲನೆ ಮಾಡಲು ಮುಂದಾಗ ಬೇಕಿದೆ. ರಾಜರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಭಾರತ, ಸ್ವಾತಂತ್ರ್ಯದ ಬಳಿಕ ಅಖಂಡ ರಾಷ್ಟ್ರವಾಗಿ ಹೊರಹೊಮ್ಮಿತು. 1950ರಲ್ಲಿ ಲಿಖಿತ ಸಂವಿಧಾನ ಒಪ್ಪಿ ಗಣರಾಜ್ಯವಾಯಿತು. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಏನೂ ಸಾಧಿಸಲೇ ಆಗಿಲ್ಲ ಎನ್ನಲಾಗದು. ಶಿಕ್ಷಣ, ಬಡತನ ನಿರ್ಮೂಲನೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಂಡಿ ದ್ದೇವೆ ಎಂದು ಪ್ರತಿಪಾದಿಸಿದರು.

ಎಲ್ಲಾ ಕಾನೂನುಗಳಿಗೂ ಸಂವಿಧಾನ ತಾಯಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳಗೊಂಡಂತೆ ಈವರೆಗೆ ಸುಮಾರು ಎರಡೂವರೆ ಸಾವಿರ ಕಾನೂನು-ಕಾಯ್ದೆ ಗಳನ್ನು ಮಾಡಿದ್ದು, ಇವುಗಳಿಗೆಲ್ಲಾ ಮೂಲ ಭಾರ ತೀಯ ಸಂವಿಧಾನ. ಹೀಗಾಗಿ ಎಲ್ಲಾ ಕಾನೂನುಗಳಿಗೆ ಸಂವಿಧಾನ ತಾಯಿ ಇದ್ದಂತೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ. ಒಂಟಿಗೋಡಿ ಮಾತನಾಡಿ, ನಿವೃತ್ತ ನ್ಯಾ.ಹೆಚ್.ಎನ್. ನಾಗಮೋಹನ್‍ದಾಸ್ ಕಳೆದ 2 ವರ್ಷಗಳಿಂದ ರಾಜ್ಯದ ಉದ್ದಗಲಕ್ಕೂ ಸಂಚರಿಸಿ `ಸಂವಿಧಾನ ಓದು’ ಅಭಿ ಯಾನ ನಡೆಸುತ್ತಿದ್ದಾರೆ. ದೇಶದ ಪ್ರಜೆಗಳಿಗೆ ಸಂವಿ ಧಾನದ ತಿಳುವಳಿಕೆ ಇರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇವರ ಅಭಿಯಾನ ಅತ್ಯಂತ ಮಹತ್ವದ್ದಾ ಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಆಳವಾದ ಅಧ್ಯಯನ ನಡೆಸಿ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿ ಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತ ನಾಡಿ, ನಮ್ಮದು ಅತ್ಯಂತ ಉತ್ಕೃಷ್ಟವಾದ ಸಂವಿಧಾನ. ಇದು ನಮ್ಮ ದೇಶದ ಉಸಿರಾಗಿದ್ದು, ಅದರ ಬಗ್ಗೆ ತಿಳುವಳಿಕೆ ಹೊಂದುವ ಜೊತೆಗೆ ಅದರ ಸಂರಕ್ಷಣೆ ಮತ್ತು ಪೋಷಣೆ ನಮ್ಮ ಕರ್ತವ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಮೈಸೂರು ವಿವಿ ಕಾನೂನು ವಿಭಾಗದ ಡೀನ್ ಮತ್ತು ನಿರ್ದೇಶಕ ಪ್ರೊ.ಸಿ.ಬಸವರಾಜು ಮಾತನಾಡಿ, ದೇಶದ ಪ್ರತಿ ಪ್ರಜೆಯೂ ಸಂವಿಧಾನದ ರೂಪುರೇಷೆಯ ಮೂಲ ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮ ಹಕ್ಕು ಮತ್ತು ಜವಾಬ್ದಾರಿ ಅರಿತುಕೊಳ್ಳಬೇಕು. ಸಂವಿಧಾನ ಕಲ್ಪಿಸಿ ರುವ ಮೂಲಭೂತ ಹಕ್ಕುಗಳು ಇಲ್ಲವಾಗಿದ್ದರೆ ನಮ್ಮ ಬದುಕು ದುಸ್ತರವಾಗುತ್ತಿತ್ತು. ನಮ್ಮದು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂಬುದನ್ನು ಪಾಶ್ಚಿಮಾತ್ಯ ಪರಿಣಿ ತರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ಭಾಗಗಳ ಶಾಲಾ ಶಿಕ್ಷಕರು, ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆ, ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದ್‍ಕುಮಾರ್, ಡಿಸಿಪಿ ಮುತ್ತುರಾಜ್, ಎಸಿಪಿ ಕ್ಷಮಮಿಶ್ರ ಮತ್ತಿತರರು ಹಾಜರಿದ್ದರು.

Translate »