ಮೈಸೂರು,: ಇಂಡೋ ನೇಷ್ಯಾದ ಜಕಾರ್ತನ ಮಹಕಾ ಸ್ಟೋಟ್ರ್ಸ್ ಮಾಲ್‍ನಲ್ಲಿ ನ.21 ರಿಂದ 25ರವರೆಗೆ ನಡೆ ಯುವ ‘15ನೇ ಏಷ್ಯಾ ಪೆಸಿಫಿಕ್ ಶಿಟೋ ರಿಯೋ’ ಕರಾಟೆ ಚಾಂಪಿ ಯನ್‍ಷಿಪ್‍ಗೆ ಮೈಸೂರಿನ ಕರಾಟೆ ಪಟು ದಿಯಾ ಎಸ್.ಅರಸ್ ಆಯ್ಕೆ ಯಾಗಿದ್ದಾರೆ.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ತಾಂತ್ರಿಕ ಸಹಾಯಕ ಬಿ.ಎಸ್.ಶ್ರೀನಾಥ್ ಅರಸ್ ಹಾಗೂ ರೂಪಾ ಎಸ್.ಅರಸ್ ದಂಪತಿ ಪುತ್ರಿ ದಿಯಾ ಎಸ್.ಅರಸ್, ವಿದ್ಯಾವರ್ಧಕ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಹಣೆಯಿಂದ 1 ನಿಮಿಷ ದಲ್ಲಿ 31 ಮಂಗಳೂರು ಹೆಂಚು ಒಡೆದ ದೇಶದ ಅತ್ಯಂತ ಕಿರಿಯ ಹಾಗೂ ಏಕೈಕ ಬಾಲಕಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ರಷ್ಯಾದ ಅನಪಾ ನಗರದಲ್ಲಿ 2016ರಲ್ಲಿ ನಡೆದ `ವಾಕೊ ವಲ್ರ್ಡ್ ಕಪ್ ಡೈಮಂಡ್ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿ ಯನ್‍ಷಿಪ್’ನ 15-16 ವರ್ಷದೊಳಗಿನ ಕೆ-1 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. ‘ವಾಕೊ ಇಂಡಿಯಾ ನ್ಯಾಷನಲ್ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್’ನ ಕೆ-1 ಭಾಗದಲ್ಲಿ ಪ್ರತಿನಿಧಿಸಿ ಚಿನ್ನ ಪದಕ, ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ 5 ಚಿನ್ನ, 3 ಬೆಳ್ಳಿ ಮತ್ತು 1 ಕಂಚು ಪಡೆದಿದ್ದಾರೆ. ಎರಡು ಬಾರಿ ರಾಷ್ಟ್ರ ಮುಕ್ತ ಆಯುಧ ಕಟಾ ಚಾಂಪಿ ಯನ್, 8 ಬಾರಿ ರಾಷ್ಟ್ರ ಕಟಾ ಚಾಂಪಿಯನ್, 5 ಬಾರಿ ರಾಷ್ಟ್ರ ಕುಟೆ ಚಾಂಪಿಯನ್ ಆಗಿದ್ದಾರೆ.
ಕರಾಟೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ದಿಯಾ, ಕರ್ನಾ ಟಕದ ಕರಾಟೆ ಕಟಾ ವಿಭಾಗದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, 2020ರಲ್ಲಿ ಜಪಾನ್‍ನ ಟೋಕಿಯೋದಲ್ಲಿ ನಡೆಯ ಲಿರುವ ಒಲಿಂಪಿಕ್‍ನಲ್ಲಿ ಭಾಗವಹಿ ಸಲು ಪ್ರಯತ್ನ ನಡೆಸುತ್ತಿದ್ದಾರೆ.