ಫೋರ್ಜರಿ ಪ್ರಕರಣ: ವಕೀಲ ನರಸಿಂಹ ಅಯ್ಯಂಗಾರ್‍ಗೆ ಹೈಕೋರ್ಟ್ ಜಾಮೀನು
ಮೈಸೂರು

ಫೋರ್ಜರಿ ಪ್ರಕರಣ: ವಕೀಲ ನರಸಿಂಹ ಅಯ್ಯಂಗಾರ್‍ಗೆ ಹೈಕೋರ್ಟ್ ಜಾಮೀನು

November 18, 2018

ಮೈಸೂರು: ಮಹಿಳಾ ಕಕ್ಷಿದಾರರೊಬ್ಬರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಆದೇಶ ಮೇರೆಗೆ ದೊರೆತ್ತಿದ್ದ ಪರಿಹಾರ ಹಣವನ್ನು ನಕಲಿ ಮೂಲಕ ತಮ್ಮ ಖಾತೆ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ಆರ್.ಜಿ. ನರಸಿಂಹ ಅಯ್ಯಂಗಾರ್ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆÀ ನ.15 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿ, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಮೈಸೂರಿನ ನಾಡನಹಳ್ಳಿ ನಿವಾಸಿ ಎಂ.ಬಿ.ಪಾರ್ವತಿ (ಟಿನಿ ಬಿದ್ದಪ್ಪ) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನರಸಿಂಹ ಅಯ್ಯಂಗಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ಮತ್ತು ಜಾಮೀನು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ, 50 ಸಾವಿರ ರೂ.ಗಳ ವೈಯಕ್ತಿಕ ಬ್ಯಾಂಡ್ ಆಧಾರದ ಮೇಲೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿವರ: ಮೈಸೂರಿನ ನಾಡನಹಳ್ಳಿ ನಿವಾಸಿ ಎಂ.ಬಿ.ಪಾರ್ವತಿ(ಟಿನಿ ಬಿದ್ದಪ್ಪ) ತಮಗೆ ಮಂಜೂರಾಗಿದ್ದ ಸಾಲದ ಹಣದಲ್ಲಿ 20 ಸಾವಿರ ರೂ.ಗಳನ್ನು ತಮ್ಮ ಖಾತೆಯಿಂದ ಡ್ರಾ ಮಾಡಲಾಗಿದೆ ಎಂದು 1993ರಲ್ಲಿ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಅಲಹಾಬಾದ್ ಬ್ಯಾಂಕ್ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ, ಬಡ್ಡಿ ಸಹಿತ 84,600ರೂ. ಹಾಗೂ ನ್ಯಾಯಾಲಯದ ವೆಚ್ಚ 500 ರೂ. ನೀಡಬೇಕೆಂದು 2006ರಲ್ಲಿ ಬ್ಯಾಂಕ್‍ಗೆ ಆದೇಶಿಸಿ, ತೀರ್ಪು ನೀಡಿತ್ತು. ನಂತರ ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯಕ್ಕೆ ಬ್ಯಾಂಕ್, ಮೇಲ್ಮನವಿ ಸಲ್ಲಿಸಿತ್ತಾದರೂ ಅಲ್ಲಿಯೂ ಪಾರ್ವತಿ ಅವರ ಪರ ತೀರ್ಪು ಬಂದಿತ್ತು. ಬಳಿಕ ಬ್ಯಾಂಕ್‍ನಿಂದ ಬಂದ ಪರಿಹಾರದ ಚೆಕ್‍ಗಳಿಗೆ ಪಾರ್ವತಿ ಅವರ ಪರ ವಕಾಲತ್ತು ವಹಿಸಿದ್ದ ವಕೀಲ ನರಸಿಂಹ ಅಯ್ಯಂಗಾರ್ ಫೆÇೀರ್ಜರಿ ಸಹಿ ಮಾಡಿ, ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖ ಲಾಗಿತ್ತು. ಪೆÇಲೀಸರು ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ ನಂತರ ವಿಚಾರಣೆ ನಡೆಸಿದ 1ನೇ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯ, ನರಸಿಂಹ ಅಯ್ಯಂಗಾರ್‍ಗೆ 1 ವರ್ಷ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದನ್ನು ಸ್ಮರಿಸಬಹುದು.

Translate »