ಕೋರ್ಟ್ ಆದೇಶ ಧಿಕ್ಕರಿಸಿದ ಮೈಸೂರು ವಿವಿ: ರಾಷ್ಟ್ರಪತಿ ಮೊರೆ ಹೋದ ಅಧ್ಯಾಪಕ
ಮೈಸೂರು

ಕೋರ್ಟ್ ಆದೇಶ ಧಿಕ್ಕರಿಸಿದ ಮೈಸೂರು ವಿವಿ: ರಾಷ್ಟ್ರಪತಿ ಮೊರೆ ಹೋದ ಅಧ್ಯಾಪಕ

November 18, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರೊಬ್ಬರಿಗೆ, ಪ್ರೊಫೆಸರ್ ಹುದ್ದೆಗೆ ಕಳೆದ 10 ವರ್ಷಗಳಿಂದ ಬಡ್ತಿ ನೀಡದೆ ಸತಾಯಿಸುತ್ತಿರುವ ವಿವಿ ಆಡಳಿತ ಮಂಡಳಿ ವಿರುದ್ಧ ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ.

ಇದಕ್ಕೆ ಸ್ಪಂದಿಸಿರುವ ರಾಷ್ಟ್ರಪತಿಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿದ್ದು, ರಾಷ್ಟ್ರಪತಿಗಳ ಪತ್ರವನ್ನು ಮೈಸೂರು ವಿವಿಗೆ ರವಾನಿಸಿದ್ದಾರೆ. ಮಹಾರಾಜ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ್ ಅವರಿಗೆ, ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡುವಂತೆ 2013ರಲ್ಲೇ ಹೈಕೋರ್ಟ್ ಆದೇಶ ನೀಡಿದ್ದರೂ ಇದರ ಬಗ್ಗೆ ಮೈಸೂರು ವಿವಿ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಬೇಸತ್ತ ವಿಶ್ವನಾಥ್, 2016ರ ಜೂ. 26ರಂದು ಪ್ರೊಫೆಸರ್ ಹುದ್ದೆಗೆ ಪರಿಗಣಿಸಲು ನಿರ್ದೇಶಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಅಲವತ್ತುಕೊಂಡಿದ್ದರು.

ಇದನ್ನು ಪರಿಗಣಿಸಿರುವ ರಾಷ್ಟ್ರಪತಿಗಳು, ಈ ಕೂಡಲೇ ಡಾ.ವಿಶ್ವ ನಾಥ್ ಪರವಾಗಿ ಹೈಕೋರ್ಟ್ ನೀಡಿರುವ ಆದೇಶವನ್ನು ಪರಿಗಣಿಸಿ, ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡಲು ಸಂಬಂಧಪಟ್ಟ ವಿವಿ ಅಧಿಕಾರಿ ಗಳಿಗೆ ಸೂಚಿಸುವಂತೆ ರಾಜ್ಯ ಮುಖ್ಯ ಕಾರ್ಯ ದರ್ಶಿಗೆ 2018ರ ಅ.31 ರಂದು ಪತ್ರ ಬರೆದಿದ್ದಾರೆ. ಇವರು ಇಲ್ಲಿಯ ವರೆಗೆ 12 ಸಂಶೋ ಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದು, 30ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿವಿಧ ದೇಶದ ವಿಚಾರ ಸಂಕಿರಣ ದಲ್ಲಿ ಭಾಗವಹಿಸಿ 150ಕ್ಕೂ ಅಧಿಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು ಪ್ರಕಟಿಸಿರುವ 13 ಪುಸ್ತಕ ಗಳಿಗೆ ಐಎಸ್‍ಬಿಎನ್ ಸಂಖ್ಯೆ ಲಭಿಸಿದೆ. ಅಲ್ಲದೆ, ಯುಜಿಸಿಯ 6.5ಲಕ್ಷ ರೂ. ಅನುದಾನದಲ್ಲಿ ಹಮ್ಮಿಕೊಂ ಡಿದ್ದ ಸಂಶೋಧನಾ ಪ್ರಾಜೆಕ್ಟ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಯುಜಿಸಿ ಪಠ್ಯಪುಸ್ತಕ ಆಯ್ಕೆ ಸಮಿತಿಯಿಂದ ಡಾ.ವಿಶ್ವನಾಥ್ ಪ್ರಕಟಿಸಿರುವ 7 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಆದರೂ ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡುವ ವಿಚಾರದಲ್ಲಿ ಕಳೆದ 10 ವರ್ಷಗಳಿಂದ ಕಾನೂನು ಹೋರಾಟ 50ಕ್ಕೂ ಹೆಚ್ಚು ಬಾರಿ ಕುಲಪತಿ, ಕುಲಸಚಿವ ರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ವಿಶ್ವನಾಥ್ ಅವರಿಗೆ ನ್ಯಾಯ ದೊರಕುವುದೇ ಎಂಬ ಮಾತು ವಿವಿ ಪ್ರಾಧ್ಯಾಪಕರ ವಲಯದಲ್ಲಿ ಕೇಳಿ ಬರುತ್ತಿದೆ.

Translate »