ಮೈಸೂರು ವಿವಿಯ ಪ್ರತಿಷ್ಠೆ ಕಾಪಾಡಿಕೊಂಡು  ಹೋಗುವ ಜವಾಬ್ದಾರಿ ಕುಲಪತಿಗಳ ಮೇಲಿದೆ
ಮೈಸೂರು

ಮೈಸೂರು ವಿವಿಯ ಪ್ರತಿಷ್ಠೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಕುಲಪತಿಗಳ ಮೇಲಿದೆ

December 17, 2018

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಜಿ.ಹೇಮಂತ ಕುಮಾರ್ ಅವರಿಗೆ ಮೈಸೂರು ವಿವಿಯ ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವ ಹೆಚ್ಚಿನ ಜವಾಬ್ದಾರಿ ಇದ್ದು, ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆಂಬ ಭರವಸೆ ಇದೆ ಎಂದು ಗುಲ್ಬರ್ಗ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು.

ಮೈಸೂರಿನ ರಾಜೇಂದ್ರ ಕಲಾಮಂದಿರ ದಲ್ಲಿ ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರೊ.ಜಿ.ಹೇಮಂತ ಕುಮಾರ್ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರು ವಿವಿ ಇಂದು ಕುಲಪತಿ ಗಳನ್ನು ಕೊಡುವ ಯಂತ್ರದಂತಾಗಿದೆ. ಮೈಸೂರು ಗುಣಮಟ್ಟದ ಶಿಕ್ಷಣ, ವೈಜ್ಞಾನಿಕ ವಾತಾವರಣ, ಹೆಚ್ಚಿನ ಶಕ್ತಿ ಇರುವ ಹಾಗೂ ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿವಿ ಕುಲಪತಿಗೂ ಅಷ್ಟೇ ಮಹತ್ವ ವಿದೆ. ಅಂತಹ ವಿವಿಗೆ ಎರಡು ವರ್ಷ ದಿಂದ ಕುಲಪತಿಗಳಿಲ್ಲದೇ ಕೇವಲ ಪ್ರಭಾರ ಕುಲಪತಿಗಳನ್ನೇ ಹೊಂದಿತ್ತು. ಇದೀಗ ಮೈಸೂರು ವಿವಿ ಕುಲಪತಿಯಾಗಿರುವ ಪ್ರೊ.ಹೇಮಂತಕುಮಾರ್ ಅವರಿಗೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಯಾರಿಗೂ ಕೆಟ್ಟದ್ದನ್ನು ಬಯಸದ, ಯಾರಿಗೂ ಕೆಟ್ಟದ್ದನ್ನು ಮಾಡದ, ಎಲ್ಲರೂ ಬೆಳೆಯಬೇಕು ಎಂಬ ಆಶಯ ಹೊಂದಿ ರುವ ಪ್ರೊ.ಜಿ.ಹೇಮಂತಕುಮಾರ್ ಮೈಸೂರು ವಿವಿಯ ಕುಲಪತಿ ಆಗುತ್ತೇ ನೆಂದು ನೆನಸಿದವರೇ ಅಲ್ಲ. ಅವರು ಸಿಕ್ಕಿರುವ ಅವಕಾಶದಲ್ಲಿ ವಿವಿಯ ಜೊತೆಗೆ ತಮ್ಮ ಹೆಸರು ಉಳಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಇಲ್ಲಿನ ಅಗತ್ಯಗಳನ್ನು ಆದ್ಯತೆಯ ಮೇಲೆ ಕೈಗೊಂಡು ಹೆಚ್ಚಿನ ಸಾಧನೆ ಮಾಡುವ ಶಕ್ತಿಯನ್ನು ಭಗವಂತ ಅವರಿಗೆ ನೀಡಲಿ ಎಂದು ಶುಭ ಹಾರೈಸಿದರು.

ಪ್ರೊ.ಜಿ.ಹೇಮಂತಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಚಿದಾನಂದಗೌಡ ಅವರು, 1916ರಲ್ಲಿ ಸ್ಥಾಪನೆಯಾದ ಮೈಸೂರು ವಿವಿ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಇಂತಹ ವಿವಿಯನ್ನು ಮೇಲೆತ್ತುವ ಆಶಯ ಹೊಂದಿ ರುವ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರಿಗೆ ಆರೋಗ್ಯ, ಆರಾಮ, ಆಕಾಶ ವೈಶಾಲ್ಯ, ಆತ್ಮಕ್ಕೆ ಆನಂದ, ಆಯಸ್ಸು ಎಲ್ಲವೂ ದೊರೆಯಲಿ ಎಂದು ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ತಾವು ಇಲ್ಲಿಯವರೆಗೆ ಸಾಗಿ ಬಂದ ಕಷ್ಟ ಸುಖದ ಹಾದಿಯನ್ನು ವಿವರಿಸಿದರು. ಮೈಸೂರು ವಿವಿಗೆ ಕುಲಪತಿಯಾಗುವ ಯೋಗ ಬಂದಿದೆ. ಮೈಸೂರು ವಿವಿಯ ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವ ಹೆಚ್ಚಿನ ಜವಾ ಬ್ದಾರಿ ನನ್ನ ಹೆಗಲ ಮೇಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಹಾ ರಾಜ ಎಜುಕೇಷನ್ ಟ್ರಸ್ಟ್‍ನ ಟ್ರಸ್ಟಿಯಾಗಿದ್ದ ಪ್ರೊ. ಜಿ.ಹೇಮಂತಕುಮಾರ್ ಅವರ ತಾಯಿ ಪೂರ್ಣಿಮಾದೇವಿಯವರ ಪುತ್ಥಳಿಯನ್ನು ಕುಲಪತಿಗಳಿಗೆ ಟ್ರಸ್ಟ್ ವತಿಯಿಂದ ಕೊಡುಗೆ ನೀಡಲಾಯಿತು. ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್. ಮುರಳಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿ ವ್ರತನಂದಜಿ ಮಹಾರಾಜ್, ಗೋಪಾಲ ಸ್ವಾಮಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎ.ಎಸ್. ಚಂದ್ರಶೇಖರ್, ಎಂಇಟಿ ಸಂಸ್ಥಾಪಕ ಕಾರ್ಯದರ್ಶಿ ಪಿ.ವಾಸುದೇವ್ ಇನ್ನಿತ ರರು ಉಪಸ್ಥಿತರಿದ್ದರು.

Translate »