ಸರ್ಕಾರಿ ಜಾಗ ಒತ್ತುವರಿ ಆರೋಪ ಪಾಲಿಕೆಯಿಂದ ನೋಟೀಸ್
ಮೈಸೂರು

ಸರ್ಕಾರಿ ಜಾಗ ಒತ್ತುವರಿ ಆರೋಪ ಪಾಲಿಕೆಯಿಂದ ನೋಟೀಸ್

November 16, 2018

ಮೈಸೂರು: ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕುಂಬಾರಕೊಪ್ಪಲಿನ ಎನ್.ಸ್ವಾಮಿ ಎಂಬುವರಿಗೆ ಜುಲೈ 19ರಂದು ಅಂತಿಮ ನೋಟೀಸ್ ಜಾರಿಗೊಳಿಸಿದ್ದಾರೆ.

2017ರ ಡಿಸೆಂಬರ್ 21ರಂದು ಜಿಲ್ಲಾಧಿಕಾರಿಗಳು ಫೋನ್-ಇನ್ ಕಾರ್ಯಕ್ರಮ ನಡೆಸಿದಾಗ ಕುಂಬಾರಕೊಪ್ಪಲು ಗ್ರಾಮದ ಮಹದೇವು ಎಂಬುವರು ಕರೆ ಮಾಡಿ, ಗ್ರಾಮದ ನಿವೇಶನ ಸಂಖ್ಯೆ 102/ಬಿ ಮಾಲೀಕರಾದ ಎನ್.ಸ್ವಾಮಿ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆಂದು ಆರೋಪಿಸಿದ ಹಿನ್ನೆಲೆಯಲ್ಲಿ ಸರ್ವೆ ನಡೆಸಿ ಅಗತ್ಯ ಕ್ರಮ ವಹಿಸುವಂತೆ ಡಿಸಿ ಅವರು ಸೂಚಿಸಿದ್ದರು. ಸ್ವಾಮಿ ಎಂಬುವರು 18.35 ಮೀಟರ್ ಘಿ 2.35 ಮೀಟರ್ ವಿಸ್ತೀರ್ಣದ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾ ರೆಂದು ಭೂ ಮಾಪನಾ ಇಲಾಖೆ ನಿರ್ದೇಶಕರು ತಿಳಿಸಿರುವುದರಿಂದ ಪಾಲಿಕೆ ವಲಯ ಕಚೇರಿ-5ರ ವಲಯ ಆಯುಕ್ತರು `ತಿಂಗಳೊಳಗೆ ತೆರವುಗೊಳಿಸುವಂತೆ ಜುಲೈ 19ರಂದು ಅಂತಿಮ ತಿಳುವಳಿಕೆ ಪತ್ರ ನೀಡಿದ್ದಾರೆ ಎಂದು ದಾಖಲೆಗಳ ಸಮೇತ ದೂರುದಾರ ಮಹದೇವು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ್ದಾರೆ.

Translate »