ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಮಾಜಿ ಮೇಯರ್‍ಗಳ ಪ್ರತಿಭಟನೆ

March 1, 2020

ಮೈಸೂರು,ಫೆ.29(ಆರ್‍ಕೆ)- ದೇಶ ವಿರೋಧಿ ಹಾಗೂ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಅಮೂಲ್ಯ ಹಾಗೂ ಆದ್ರ್ರಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಮೇಯರ್‍ಗಳು ಮೈಸೂರಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮೈಸೂರು ಮಹಾನಗರಪಾಲಿಕೆ ಮಾಜಿ ಮೇಯರ್‍ಗಳ ಪರಿಷತ್ತಿನ ಆಶ್ರಯದಲ್ಲಿ ಗಾಂಧಿ ಚೌಕದ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಅವರು, ಬೆಂಗಳೂರಲ್ಲಿ ನಡೆದ ಸಿಎಎ ಪರ ಹಾಗೂ ವಿರುದ್ಧದ ಚಳುವಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಮೂಲ್ಯ ಮತ್ತು ಆದ್ರ್ರಾ, ದೇಶ ವಿರೋಧಿ ಹಾಗೂ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿದರು.

ದೇಶದ ಜನರ ಐಕ್ಯತೆ, ಭದ್ರತೆ ಹಾಗೂ ದೇಶಪ್ರೇಮ ಮೆರೆಯುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಆದರೆ ದೇಶದಲ್ಲೇ ಇದ್ದು ಶತ್ರು ರಾಷ್ಟ್ರದ ಪರ ಘೋಷಣೆ ಕೂಗುವವರನ್ನು ರಕ್ಷಿಸಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿರತ ಮಾಜಿ ಮೇಯರ್‍ಗಳು ತಿಳಿಸಿದ್ದಾರೆ. ಮಾಜಿ ಮೇಯರ್ ಗಳಾದ ಪುಷ್ಪಲತಾ ಜಗನ್ನಾಥ, ಬಿ.ಭಾಗ್ಯ, ಆರ್.ಲಿಂಗಪ್ಪ, ಸಂದೇಶ್‍ಸ್ವಾಮಿ, ನಾರಾಯಣ್, ಅನಂತ, ಹೆಚ್.ಎನ್. ಶ್ರೀಕಂಠಯ್ಯ, ಆರ್.ಜಿ.ನರಸಿಂಹ ಅಯ್ಯಂಗಾರ್, ಬಿ.ಕೆ.ಪ್ರಕಾಶ, ಅಯೂಬ್‍ಖಾನ್, ಆರಿಫ್ ಹುಸೇನ್, ಟಿ.ಬಿ.ಚಿಕ್ಕಣ್ಣ, ಪುಷ್ಪ ಲತಾ ಚಿಕ್ಕಣ್ಣ, ಮೋದಾಮಣಿ, ಬಿ.ಎಲ್.ಭೈರಪ್ಪ, ಪುರುಷೋ ತ್ತಮ, ರಾಜೇಶ್ವರಿ ಪುಟ್ಟಸ್ವಾಮಿ, ರಾಜೇಶ್ವರಿ ಸೋಮು ಸೇರಿ ದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »