ವಿಜಯನಗರದಲ್ಲಿ ವೇಶ್ಯಾವಾಟಿಕೆ; ಸಿಸಿಬಿ ದಾಳಿಯಲ್ಲಿ ನಾಲ್ವರು ಸೆರೆ
ಮೈಸೂರು

ವಿಜಯನಗರದಲ್ಲಿ ವೇಶ್ಯಾವಾಟಿಕೆ; ಸಿಸಿಬಿ ದಾಳಿಯಲ್ಲಿ ನಾಲ್ವರು ಸೆರೆ

March 1, 2020

ಮೈಸೂರು,ಫೆ.29(ವೈಡಿಎಸ್)-ವೇಶ್ಯಾವಾಟಿಕೆ ನಡೆಯುತ್ತಿದ್ದ ವಿಜಯನಗರದ 4ನೇ ಹಂತದ ಮನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ರಾಮಕೃಷ್ಣನಗರ ನಿವಾಸಿ ರಾಮಣ್ಣ(51), ಮೈಸೂರು ತಾಲೂಕು ಜಯಪುರ ಹೋಬಳಿ ಮಾವಿನಹಳ್ಳಿ ನಿವಾಸಿ ಗೀತಾ(38) ಮೇಟಗಳ್ಳಿ ನಿವಾಸಿ ರಾಧಾ(40) ಹಾಗೂ ಕ್ಯಾತಮಾರನಹಳ್ಳಿಯ ವೆಂಕಟೇಶ್(24) ಬಂಧಿತರು. ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಹಿಂದೆಯೂ ಇದೇ ದಂಧೆಯಲ್ಲಿ ತೊಡಗಿದ್ದ ಗೀತಾ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರದ ದಾಳಿ ಬಳಿಕ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ನಗರ ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಎ.ಎನ್.ಪ್ರಕಾಶಗೌಡ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣ, ಸಿಬ್ಬಂದಿಗಳಾದ ಕೆ.ಜಿ.ಶ್ರೀನಿವಾಸ, ಸೋಮಾರಾಧ್ಯ, ಶ್ರೀನಿವಾಸ ಮೂರ್ತಿ, ಅಕ್ಷತಾ ಪಾಲ್ಗೊಂಡಿದ್ದರು.

Translate »