ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ
ಮೈಸೂರು

ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಜಟಾಪಟಿ; ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ

March 1, 2020

ಮೈಸೂರು,ಫೆ.29(ಎಂಟಿವೈ)- ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಮೇಲಾಟ ಮುಂದುವರೆದಿದ್ದು, ಆಡಳಿ ತಾರೂಢ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ಧವೇ ಮತ್ತೊಮ್ಮೆ ಮುಗಿಬಿದ್ದು ಶನಿವಾರ ಸಾಮಾನ್ಯ ಸಭಾ ತ್ಯಾಗ ಮಾಡಿದರು.

ಮಿನಿ ವಿಧಾನಸೌಧದ ತಾಪಂ ಸಭಾಂ ಗಣದಲ್ಲಿ ಶುಕ್ರವಾರ ಬೆಳಿಗ್ಗೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆಡಳಿ ತಾರೂಢ ಜೆಡಿಎಸ್ ಮತ್ತು ಬಿಜೆಪಿ ಹಾಗೂ ವಿರೋಧಪಕ್ಷ ಕಾಂಗ್ರೆಸ್‍ನ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿದ್ದರು. ಸಭೆ ಆರಂಭವಾಗುತ್ತಿ ದ್ದಂತೆಯೇ ತಾಪಂ ಉಪಾಧ್ಯಕ್ಷ ಎನ್.ಬಿ. ಮಂಜು ಈ ಸಭೆ ನಡೆಸುವುದು ಔಚಿತ್ಯ ವಲ್ಲ. ಸ್ಥಾಯಿ ಸಮಿತಿಗಳ ಸಭೆ ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯದೇ ಸಾಮಾನ್ಯ ಸಭೆ ಕರೆದಿರುವುದು ನಿಯಮ ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಸದ ಸ್ಯರು ಧ್ವನಿಗೂಡಿಸಿದರು. ಇದರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಜೆಡಿಎಸ್, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ತಾ.ಪಂ ನಿಷ್ಕ್ರಿಯ: ಮೈಸೂರು ತಾಪಂ ನಿಷ್ಕ್ರಿಯಗೊಂಡಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಅಧ್ಯಕ್ಷರ ಏಕಪಕ್ಷೀಯ ನಿಲುವುಗಳೇ ಮಾರಕವಾಗಿ ಪರಿಣಮಿಸು ತ್ತಿವೆ. ಸದಸ್ಯರನ್ನು ವಿಶ್ವಾಸಕ್ಕೇ ತೆಗೆದುಕೊಳ್ಳು ತ್ತಿಲ್ಲ. ಏಕಪಕ್ಷೀಯ ನಿರ್ಧಾರ, ಏಕವ್ಯಕ್ತಿ ಆಳ್ವಿಕೆಯಂತಾಗಿದೆ ಎಂದು ತಾಪಂ ಉಪಾ ಧÀ್ಯಕ್ಷ ಬಿ.ಎನ್.ಮಂಜು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಅಧÀ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, 4 ವರ್ಷಗಳಿಂದ ಸದಸ್ಯ ರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಭೆ ಮತ್ತು ಆಡಳಿತ ನಡೆಸುತ್ತಿz್ದÉೀನೆ. ಪಂಚಾಯಿತಿ ಆಡಳಿತ ಉತ್ತಮವಾಗಿಯೇ ಇದೆ. ಉಪಾ ಧ್ಯಕ್ಷರ ಕುಮ್ಮಕ್ಕಿನಿಂದ ಇದೆಲ್ಲ ನಡೆಯು ತ್ತಿದೆ. ಅಭಿವೃದ್ಧಿಯಷ್ಟೇ ನನ್ನ ಉz್ದÉೀಶ. ಯಾವ ದುರುz್ದÉೀಶವಿಲ್ಲ. ಆದರೆ ಉಪಾ ಧ್ಯಕ್ಷರ ಕುಮ್ಮಕ್ಕಿನಿಂದಾಗಿ ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿನ ಪಿಡಿಒಗಳು ತಾಪಂ ಅಧ್ಯ ಕ್ಷರ ಮಾತನ್ನೇ ಕೇಳುತ್ತಿಲ್ಲ. ಪಿಡಿಒಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಜೆಂಡಾ ಇಲ್ಲ: ಯಾವುದೇ ಅಜೆಂಡಾ ಗಳಿಲ್ಲದೆ ಸಾಮಾನ್ಯ ಸಭೆ ಕರೆಯಲಾಗಿದೆ. ಸ್ಥಾಯಿ ಸಮಿತಿಗಳ ಸಭೆ ನಡೆಸಿ, ಅಲ್ಲಿ ಅನು ಮೋದನೆ ಪಡೆದುಕೊಂಡ ಬಳಿಕ ಸಾಮಾನ್ಯ ಸಭೆ ಕರೆಯುವುದು ಪದ್ಧತಿ. ಆದರೆ ಅಧ್ಯ ಕ್ಷರು ನಿಯಮ ಉಲ್ಲಂಘಿಸಿ ತಮಗಿಷ್ಟ ಬಂದಂತೆ ಸಭೆ ಕರೆÀದಿದ್ದಾರೆ ಎಂದು ಸದಸ್ಯ ಹನುಮಂತು ಆಕ್ಷೇಪಿಸಿದರು.

ಅಧ್ಯಕ್ಷರ ಸೂಚನೆ: ಇದಕ್ಕೆ ಪ್ರತಿಕ್ರಿಯಿ ಸಿದ ಇಒ ಸಿ.ಆರ್.ಕೃಷ್ಣಕುಮಾರ್, 3 ಸ್ಥಾಯಿ ಸಮಿತಿಗಳ ಸಭೆಯನ್ನು ಅಧÀ್ಯಕ್ಷರ ಸೂಚನೆ ಮೇರೆಗೆ ಕರೆಯಲಾಗಿತ್ತು. ಆದರೆ ಕೋರಂ ಕೊರತೆಯಿಂದ ಮುಂದೂಡಲಾಯಿತು. ಸ್ಥಾಯಿ ಸಮಿತಿಗಳ ಸಭೆ ನಡೆಯದಿದ್ದರೂ ಸಾಮಾನ್ಯ ಸಭೆ ನಡೆಸಲು ಅವಕಾಶವಿದೆ. ಹಾಗಾಗಿ ಅಧÀ್ಯಕ್ಷರ ಸೂಚನೆ ಮೇರೆಗೆ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಸುಕಿನ ಗುದ್ದಾಟ: ಬಿಜೆಪಿ ಬೆಂಬಲ ದೊಂದಿಗೆ ಮೈಸೂರು ತಾಪಂನಲ್ಲಿ ಅಧಿ ಕಾರ ಹಿಡಿದಿರುವ ಜೆಡಿಎಸ್ ಮೊದಲ 20 ತಿಂಗಳಿಗೆ ಮಾತ್ರ ಕಾಳಮ್ಮ ಕೆಂಪರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆ ಬಳಿಕವೂ ಅಧ್ಯಕ್ಷ ಸ್ಥಾನ ತ್ಯಜಿಸದ ಕಾರಣ ಒಂದು ವರ್ಷದಿಂದ ಅಧ್ಯಕ್ಷರು ಹಾಗೂ ಸ್ವಪಕ್ಷೀಯ ಸದಸ್ಯರ ನಡುವೆಯೇ ತಿಕ್ಕಾಟ ನಡೆದಿದೆ. ಸದಸ್ಯರು ಹಲವು ಬಾರಿ ಸಭೆ ಬಹಿಷ್ಕರಿಸಿದ್ದಾರೆ. ಸತತ 3 ಸಭೆಗೆ ಗೈರು ಹಾಜ ರಾದರೆ ಸದಸ್ಯರ ಸದಸ್ಯತ್ವ ರದ್ದುಗೊಳ್ಳುತ್ತ ದೆಂಬ ಕಾರಣಕ್ಕೆ 3ನೇ ಸಭೆಗೆ ಹಾಜರಾಗಿ, ಕೆಲ ಸಮಯದ ಬಳಿಕ ನಿರ್ಗಮಿಸುತ್ತಿದ್ದರು. ಇದರಿಂದ ತಾಲೂಕಿನ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗುತ್ತಿದೆ. ಅಧ್ಯಕ್ಷರ ವಿರುದ್ಧ ಜೆಡಿಎಸ್ ಮತ್ತು ಮಿತ್ರಪಕ್ಷ ಬಿಜೆಪಿ ಸದಸ್ಯರೂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರು ಮಾತ್ರ ಅಧ್ಯಕ್ಷರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಗುದ್ದಾಟ ಅವಧಿ ಪೂರ್ಣ ಗೊಳ್ಳುವವರೆಗೂ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿವೆ.

Translate »