ನ.18ರಂದು ಮೈಸೂರು ಸಾಹಿತ್ಯ ಉತ್ಸವ
ಮೈಸೂರು

ನ.18ರಂದು ಮೈಸೂರು ಸಾಹಿತ್ಯ ಉತ್ಸವ

November 16, 2018

ಮೈಸೂರು: `ಮೈಸೂರು ಸಾಹಿತ್ಯ ಉತ್ಸವ’ವನ್ನು ನ.18ರಂದು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಮಾಜಿ ಗವರ್ನರ್ ವೈ.ವಿ.ರೆಡ್ಡಿ ಉದ್ಘಾಟಿಸಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಲಿಟರರಿ ಫೋರಮ್ ಚಾರಿಟೆಬಲ್ ಟ್ರಸ್ಟ್ ಅಧ್ಯ ಕ್ಷರೂ ಆದ ಮೈಸೂರು ಬುಕ್ ಕ್ಲಬ್-2015ರ ಸಂಸ್ಥಾಪಕಿ ಶುಭ ಸಂಜಯ್ ಅರಸ್ ಈ ವಿಷಯ ತಿಳಿಸಿದರು.

ಟ್ರಸ್ಟ್ ಹಾಗೂ ಬುಕ್ ಕ್ಲಬ್ ವತಿಯಿಂದ ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗಿದ್ದು, ಮೈಸೂರು ನಜರ್‍ಬಾದಿನ ವಿಂಡ್ ಚೈಮ್ಸ್ ಹೋಟೆಲ್‍ನಲ್ಲಿ ನಡೆಯಲಿರುವ ಉತ್ಸವಕ್ಕೆ ಅಂದು ಬೆಳಿಗ್ಗೆ 9.30ಕ್ಕೆ 14ನೇ ಹಣಕಾಸು ಆಯೋಗದ ಅಧ್ಯಕ್ಷರೂ ಆದ ವೈ.ವಿ.ರೆಡ್ಡಿ ಚಾಲನೆ ನೀಡಲಿದ್ದಾರೆ ಎಂದರು. ಬಳಿಕ ದಿನಪೂರ್ತಿ ಸಾಹಿತ್ಯ ಉತ್ಸವದ ವಿಚಾರಗೋಷ್ಠಿಗಳು ನಡೆಯಲಿವೆ. ಖ್ಯಾತ ಸಾಹಿತಿಗಳು ಹಾಗೂ ಲೇಖಕರು ಸೇರಿದಂತೆ ಸುಮಾರು 25 ಮಂದಿ ದೇಶದ ವಿವಿಧ ಭಾಗ ಗಳಿಂದ ಆಗಮಿಸಿ ತಮ್ಮ ಅನುಭವ ಹಾಗೂ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯ ಬರಹ ಗಾರರು ಇರಲಿದ್ದಾರೆ. ಎರಡು ಕಡೆ ವಿಚಾರ ಗೋಷ್ಠಿಗಳು ನಡೆಯಲಿದ್ದು, ಹೊರಾವರ ಣಕ್ಕೆ `ತಂಗಾಳಿ’, ಒಳಾವರಣಕ್ಕೆ `ಅಂಗಣ’ ಎಂದು ಶೀರ್ಷಿಕೆ ನೀಡಲಾಗಿದೆ. ಜೊತೆಗೆ ಮಕ್ಕಳಿಗಾಗಿ ನಡೆಯುವ ವಿಚಾರ ಗೋಷ್ಠಿಯ ವೇದಿಕೆಗೆ `ಮಕ್ಕಳ ಪ್ರಪಂಚ’ ಎಂಬ ಹೆಸರು ನೀಡಲಾಗಿದೆ ಎಂದು ವಿವರಿಸಿದರು.

ತಂಗಾಳಿ ವೇದಿಕೆಯಲ್ಲಿ ಬೆಳಿಗ್ಗೆ 11ರಿಂದ ವಿಚಾರ ಗೋಷ್ಠಿಗಳು ಆರಂಭಗೊಳ್ಳಲಿವೆ. `ವೈ ಶುಡ್ ವಿ ವೇರ್ ಫ್ಯಾಬ್ರಿಕ್ ಆಫ್ ಫ್ರೀಡಂ’ ಕುರಿತಂತೆ ರತ್ ಕಪೂರ್ ಚಿಷ್ಟಿ, ಪ್ರಸಾದ್ ಬಿದ್ದಪ್ಪ, ಚಂದ್ರ ಜೈನ್, `ಪಿಗ್‍ಮೆಂಟ್ಸ ಆಫ್ ಇಮ್ಯಾಜಿನೇಷನ್ ಆಂಡ್ ಬೋಲ್ಡ್ ಕ್ಯಾನ್ವ ಸಸ್’ ಕುರಿತಂತೆ ಪ್ರೊ.ಚಂದನ್‍ಗೌಡ, ಡಾ. ಮಿನಿ ಕೃಷ್ಣನ್, ಸಂಹಿತ ಹರ್ನಿ, ಗುರುಪ್ರಸಾದ್, ಅರುಣ್ ರಾಮನ್ ಮಾತನಾಡುವರು. ಅಲ್ಲದೇ ಅನೇಕರು ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದರು. `ದ ಮಿಡ್ ನೈಟ್ ಮರ್ಡರ್ – ಎ ಟೇಲ್ ಫ್ರಮ್ ದ ಮಿಡಿ ವಲ್ ಇಂಡಿಯಾ’ ಕಥೆಯನ್ನು ಅರುಣ್ ರಾಮನ್ ಹೇಳಲಿದ್ದಾರೆ. `ನಿರ್ಭಯ ಸಮಾಜ – ಯಾರ ಜವಾಬ್ದಾರಿ? ಕುರಿತ ಚರ್ಚೆಯಲ್ಲಿ ಶಾಂತಾ ನಾಗರಾಜ್, ಡಾ.ಸುಧಾ, ಕಾಂತಿ ಜೋಶಿ, ಡಾ. ಪೃಥ್ವಿದತ್ತ ಚಂದ್ರ ಶೋಭಿ, ಪ್ರೊ.ಸಿ.ನಾಗಣ್ಣ ಪಾಲ್ಗೊಳ್ಳಲಿದ್ದಾರೆ. `ಜನಪದ ಸಾಹಿತ್ಯದಲ್ಲಿ ಹಾಸ್ಯ’ ಕುರಿತು ಪ್ರೊ.ಕೃಷ್ಣೇ ಗೌಡ, ಅಲಕಾ ಕಟ್ಟೆಮನೆ ಮಾತನಾಡ ಲಿದ್ದಾರೆ. `ಪುಟಾಣಿ ಪ್ರಪಂಚ’ ವೇದಿಕೆ ಯಲ್ಲಿ `ಒಂದಾನೊಂದು ಕಾಲದಲ್ಲಿ’, `ಅಜ್ಜಿಯ ಕಥೆಗಳು’ ಸೇರಿದಂತೆ ನಾನಾ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದರು. ಟ್ರಸ್ಟ್‍ನ ಉಪಾಧ್ಯಕ್ಷ ಸ್ಯಾಮ್ ಚೆರಿಯನ್ ಕುಂಬುಕಟ್ಟು, ಕಾರ್ಯದರ್ಶಿ ವಿನಯ ಪ್ರಭಾ ವತಿ, ಖಜಾಂಚಿ ಸುಚಿತಾ ಸಂಜಯ್, ಸದಸ್ಯ ರಾದ ಕಿಟ್ಟಿ ಮಂದಣ್ಣ ಗೋಷ್ಠಿಯಲ್ಲಿದ್ದರು.

Translate »