ಮೈಸೂರು ಪಾಲಿಕೆಗೆ ಪುನರಾಯ್ಕೆಗೊಂಡ 8 ಹಾಲಿ ಸದಸ್ಯರು
ಮೈಸೂರು

ಮೈಸೂರು ಪಾಲಿಕೆಗೆ ಪುನರಾಯ್ಕೆಗೊಂಡ 8 ಹಾಲಿ ಸದಸ್ಯರು

September 4, 2018

ಮೈಸೂರು: ಹಾಲಿ ಪಾಲಿಕೆ ಸದಸ್ಯರಲ್ಲಿ 8 ಮಂದಿ ಪುನ ರಾಯ್ಕೆಯಾಗಿದ್ದಾರೆ. ಮಾಜಿ ಮೇಯರ್ ಅಯೂಬ್ ಖಾನ್: ಕಾಂಗ್ರೆಸ್‍ನ ಮಾಜಿ ಮೇಯರ್ ಅಯೂಬ್ ಖಾನ್ 13ನೇ ವಾರ್ಡ್ (ಉದಯಗಿರಿ) ನಲ್ಲಿ ಸತತ 4ನೇ ಬಾರಿ ಪುನರಾಯ್ಕೆಯಾಗಿ ದ್ದಾರೆ. ಅವರು ಜೆಡಿಎಸ್‍ನ ಮೊಹಮ್ಮದ್ ಷರೀಫ್ ಅವರನ್ನು 1142 ಮತಗಳ ಅಂತರ ದಿಂದ ಸೋಲಿಸಿದ್ದಾರೆ.

ಎಸ್.ಬಿ.ಎಂ.ಮಂಜು: ಕಳೆದ ಉಪ ಚುನಾ ವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ (ಹಳೇ ವಾರ್ಡ್ 32- ಸಿ.ಮಹದೇಶ್ ಅವರ ಸದ ಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನ) ಪಾಲಿಕೆ ಪ್ರವೇಶಿಸಿದ್ದ ಎಸ್‍ಬಿಎಂ ಮಂಜು 6ನೇ ವಾರ್ಡ್ (ಗೋಕುಲಂ)ನಿಂದ ಪುನರಾಯ್ಕೆ ಯಾಗಿದ್ದಾರೆ. ಅವರು ಹಾಲಿ ಸದಸ್ಯ ಬಿಜೆಪಿಯ ಟಿ.ಗಿರೀಶ್‍ಪ್ರಸಾದ್, ಎಸ್.ಬಾಲಸುಬ್ರಹ್ಮಣ್ಯ (ಸ್ನೇಕ್‍ಶ್ಯಾಮ್) ಅವರನ್ನು ಸೋಲಿಸಿದ್ದಾರೆ.

ಪುಷ್ಪಲತಾ ಜಗನ್ನಾಥ್: ಕಾಂಗ್ರೆಸ್‍ನ ಪುಷ್ಪ ಲತಾ ಜಗನ್ನಾಥ್ 2ನೇ ಬಾರಿಗೆ ಗೆಲುವು ಸಾಧಿಸಿ ದ್ದಾರೆ. 11ನೇ ವಾರ್ಡ್ (ಶಾಂತಿ ನಗರ-ಮಹದೇವಪುರ ರಸ್ತೆ)ನಲ್ಲಿ ಅವರು ಎಸ್‍ಡಿಪಿಐ ಅಭ್ಯರ್ಥಿ ಎಸ್.ಸ್ಟ್ಯಾನ್ಲಿ ಅವರನ್ನು 2988 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸಿ.ರಮೇಶ್ (ರಮಣಿ): 24ನೇ ವಾರ್ಡ್ (ಮಂಡಿಮೊಹಲ್ಲಾ)ನಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ರಮೇಶ್ (ರಮಣಿ) ಅವರು ಸತತ 2ನೇ ಬಾರಿಗೆ ಆಯ್ಕೆಯಾಗಿದ್ದು, ಅವರು ಬಿಜೆಪಿಯ ಆರ್.ರವಿಕುಮಾರ್ ಅವರನ್ನು 887 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಸುಂದರ್ ಕುಮಾರ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಅಶ್ವಿನಿ ಅನಂತು: ಪತಿ ಅನಂತ್ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ (ಹಳೇ 58ನೇ ವಾರ್ಡ್) ಜೆಡಿಎಸ್‍ನ ಅಶ್ವಿನಿ ಅನಂತ್ ಅವರು 37ನೇ ವಾರ್ಡ್ (ರಾಘವೇಂದ್ರ ನಗರ) ನಿಂದ ಪುನರಾಯ್ಕೆಯಾಗಿದ್ದಾರೆ. ಅವರು ಬಿಜೆಪಿಯ ಎನ್.ಪೂರ್ಣಿಮಾ ಅವರನ್ನು 1355 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಶಿವಕುಮಾರ್: 47ನೇ ವಾರ್ಡ್ (ಕುವೆಂಪುನಗರ)ನಿಂದ ಹಾಲಿ ಸದಸ್ಯ ಬಿಜೆಪಿಯ ಶಿವಕುಮಾರ್ ಅವರು, ಪುನರಾಯ್ಕೆಯಾ ಗಿದ್ದು, ಅವರು 2356 ಮತಗಳನ್ನು ಪಡೆದರೆ, ಕಾಂಗ್ರೆಸ್‍ನ ಬಿ.ರಾಮಪ್ಪ ರಮೇಶ್-779, ಬಿಎಸ್‍ಪಿಯ ಡಾ.ಎಂ. ಬಸವರಾಜು-696 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.

ಬಿ.ವಿ.ಮಂಜುನಾಥ್: ಹಾಲಿ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಸತತ 2ನೇ ಬಾರಿಗೆ ಪಾಲಿಕೆ ಪ್ರವೇಶಿಸಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಜೆಡಿಎಸ್‍ನ ಎಂ.ಡಿ.ಪಾರ್ಥಸಾರಥಿ (616) ಹಾಗೂ ಕಾಂಗ್ರೆಸ್‍ನ ಜಿ.ಶ್ರೀನಾಥ್ ಬಾಬು (1910) ಪರಾಜಯ ಅನುಭವಿಸಿದ್ದಾರೆ.

ಆರ್.ನಾಗರಾಜ: ಹಾಲಿ ಪಾಲಿಕೆ ಸದಸ್ಯ ಜೆಡಿಎಸ್‍ನ ಆರ್.ನಾಗರಾಜು 41ನೇ ವಾರ್ಡ್ (ದೇವರಾಜ ಮೊಹಲ್ಲಾ)ನಿಂದ ಪುನರಾಯ್ಕೆ ಯಾಗಿದ್ದಾರೆ. ಹಾಲಿ ಸದಸ್ಯ ಕಾಂಗ್ರೆಸ್‍ನ ಪ್ರಶಾಂತ್ ಗೌಡರನ್ನು 380 ಮತಗಳಿಂದ ಸೋಲಿಸಿದ್ದಾರೆ.

Translate »