ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ‘ಅತಂತ್ರ’ ಮಾಜ್ಯಿಕ್ ಸಂಖ್ಯೆ 17 ತಲುಪದ ಪಕ್ಷಗಳು
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ‘ಅತಂತ್ರ’ ಮಾಜ್ಯಿಕ್ ಸಂಖ್ಯೆ 17 ತಲುಪದ ಪಕ್ಷಗಳು

September 4, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಈ ಎರಡು ನಗರಸಭೆಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ‘ಅತಂತ್ರ’ ಸ್ಥಿತಿ ನಿರ್ಮಾಣವಾಗಿದೆ.

ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ತಲಾ 31 ವಾರ್ಡ್‍ಗಳನ್ನು ಒಳಗೊಂಡಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಹೇರಲು 17 ಸದಸ್ಯರ ಬಲವನ್ನು ಹೊಂದಲೇಬೇಕು. ಆದರೆ, ಈ ಎರಡು ನಗರಸಭೆಗಳಲ್ಲಿ ಯಾವುದೇ ಪಕ್ಷ ಇಷ್ಟು ಸಂಖ್ಯೆಯ ಸದಸ್ಯ ರನ್ನು ಹೊಂದಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದ್ದು, ಯಾವ ಪಕ್ಷ ಅಧಿ ಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಚಾಮರಾಜನಗರ ನಗರಸಭೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್‍ಡಿಪಿಐ 6, ಬಿಎಸ್‍ಪಿ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಕೊಳ್ಳೇಗಾಲ ನಗರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಎಸ್‍ಪಿ 9, ಬಿಜೆಪಿ 6, ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಉಳಿದ 1 ಸ್ಥಾನಕ್ಕೆ ಅಭ್ಯರ್ಥಿ ಮೃತಪಟ್ಟ ಹಿನ್ನಲೆಯಲ್ಲಿ 9ನೇ ವಾರ್ಡ್‍ನ ಚುನಾವಣೆಯನ್ನು ಮುಂದೂಡಲಾಗಿದೆ.

ಚಾಮರಾಜನಗರ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ‘ಕೈ’ ಮತ್ತು ‘ಕಮಲ’ ಪಕ್ಷದಲ್ಲಿ ಪೈಪೋಟಿ ಏರ್ಪಟಿತ್ತು. ಆದರೆ, ಇದಕ್ಕಾಗಿ ಅಗತ್ಯವಾಗಿ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 17ನ್ನು ಈ ಎರಡು ಪಕ್ಷಗಳು ಗಳಿಸಿಲ್ಲ. ಹೀಗಾಗಿ ಅಧಿಕಾರ ಹಿಡಿಯಲು ಈ ಎರಡು ಪಕ್ಷಗಳು ಇತರ ಪಕ್ಷಗಳ ಹಾಗೂ ಪಕ್ಷೇತರ ಸದಸ್ಯರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯ ‘ಕಮಲ’ ನಗರಸಭೆಯಲ್ಲಿ ಅರಳಬೇಕಾದರೆ ತನ್ನ 15 ಸದಸ್ಯರ ಜೊತೆಗೆ ಇನ್ನಿಬ್ಬರು ಸದಸ್ಯರ ಬೆಂಬಲ ಬೇಕಾಗಿದೆ. ಇದಕ್ಕಾಗಿ ಪಕ್ಷದ ಮುಖಂಡರು ಎಸ್‍ಡಿಪಿಐ, ಬಿಎಸ್‍ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ 8 ಸ್ಥಾನಗಳಿಸಿದ್ದು, ಸಂಸದರು ಹಾಗೂ ಸ್ಥಳೀಯ ಶಾಸಕರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮತ ಹಾಕುವ ಹಕ್ಕು ಹೊಂದಿರುವುದರಿಂದ ಈ ಪಕ್ಷದ ಸ್ಥಾನ 10ಕ್ಕೆ ಏರಿಕೆಯಾಗಿದೆ. ಅಧಿಕಾರಕ್ಕಾಗಿ ಇನ್ನೂ 7 ಸದಸ್ಯರ ಅವಶ್ಯಕತೆ ಇದೆ. ಕಳೆದ ಬಾರಿಯಂತೆ ಎಸ್‍ಡಿಪಿಐನ 6 ಹಾಗೂ ಬಿಎಸ್‍ಪಿ ಅಭ್ಯರ್ಥಿಯ ಬೆಂಬಲದಿಂದ ಪಕ್ಷವನ್ನು ಅಧಿಕಾರಕ್ಕೇರಿಸಲು ‘ಕೈ’ ನಾಯಕರು ಪ್ರಯತ್ನದಲ್ಲಿ ಇದ್ದಾರೆ ಎಂದು ಆ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಬಾರಿಯ ಚುನಾವಣೆ ವೇಳೆಯಲ್ಲಿ ಬಿಜೆಪಿ ಒಡೆದ ಮನೆಯಂತಾಗಿತ್ತು. ಬಿಜೆಪಿ 5, ಕೆಜೆಪಿ 5, ಬಿಎಸ್‍ಆರ್ ಕಾಂಗ್ರೆಸ್ 2 ಸ್ಥಾನ (ಒಟ್ಟು 12 ಸ್ಥಾನ)ಗಳಿಸಿತ್ತು. ಈ ಬಾರಿ ಬಿಜೆಪಿ 15 ಸ್ಥಾನ ಗಳಿಸುವ ಮೂಲಕ 3 ಸ್ಥಾನವನ್ನು ಹೆಚ್ಚಿಗೆ ಗಳಿಸಿದೆ. ಕಾಂಗ್ರೆಸ್ ಕಳೆದ ಬಾರಿಯಂತೆ 8 ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದೆ. ಬಿಎಸ್‍ಪಿ ತನ್ನ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ 4 ಸ್ಥಾನಗಳಿಸಿದ್ದ ಎಸ್‍ಡಿಪಿಐ ಈ ಬಾರಿ 6 ಸ್ಥಾನಕ್ಕೆ ಏರಿಕೆಯಾಗಿದೆ. 1 ಸ್ಥಾನಗಳಿಸಿದ್ದ ಜೆಡಿಎಸ್ ಈ ಬಾರಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ವಾಟಾಳ್ ಪಕ್ಷ ಚುನಾವಣೆಗೆ ಸ್ಫರ್ಧಿಸಿರಲಿಲ್ಲ.

ಕೊಳ್ಳೇಗಾಲ ನಗರಸಭೆಯಲ್ಲಿ ಕಳೆದ ಚುನಾವಣೆಯಲ್ಲಿ 21 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಿತ್ತು. ಆದರೆ, ಈ ಬಾರಿ 11 ಸ್ಥಾನ ಗಳಿಸುವ ಮೂಲಕ 10 ಸ್ಥಾನ ವನ್ನು ಕಳೆದಕೊಂಡಿದೆ. ಕಳೆದ ಬಾರಿ 3 ಸ್ಥಾನ ಪಡೆದಿದ್ದ ಬಿಎಸ್‍ಪಿ ಈ ಬಾರಿ 9 ಸ್ಥಾನಗಳಿಸಿದೆ. ಬಿಜೆಪಿ ಕಳೆದ ಅವಧಿ ಯಲ್ಲಿ 3 ಸ್ಥಾನ ಗಳಿಸಿತ್ತು. ಈ ಬಾರಿ 6 ಸ್ಥಾನ ಗಳಿಸಿದೆ. ಜೆಡಿಎಸ್ ಖಾತೆ ತೆರೆಯು ವಲ್ಲಿ ಸಂಪೂರ್ಣ ವಿಫಲವಾಗಿದೆ.

ರಾಜ್ಯದಲ್ಲಿ ಜೆಡಿಎಸ್, ಬಿಎಸ್‍ಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅಧಿಕಾರದಲ್ಲಿ ಇರುವ ಕಾರಣದಿಂದ ಇಲ್ಲಿಯೂ ಎರಡು ಪಕ್ಷ ಒಂದಾಗಿ ‘ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಭವವಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದಿದ್ದರೂ ಸಹ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಚಾಮರಾಜನಗರದಲ್ಲಿ ಎಸ್‍ಡಿಪಿಐ, ಬಿಎಸ್‍ಪಿ ಮತ್ತು ಪಕ್ಷೇತರ ಸದಸ್ಯರ ಸಹಾಯದಿಂದ ಅಧಿಕಾರ ಹಿಡಿಯುತ್ತೇವೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಯೊಂದಿಗೆ ಮೈತ್ರಿ ಮಾಡಿಕೊಂಡು ‘ಕೈ’ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಆ ಪಕ್ಷದಿಂದಲೂ ಆಶ್ವಾಸನೆ   – ಆರ್.ಧ್ರುವನಾರಾಯಣ, ಸಂಸದ

ಚಾಮರಾಜನಗರದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ನಗರಸಭೆಯ ಅಧಿಕಾರವನ್ನು ಬಿಜೆಪಿ ನಡೆಸಬೇಕು ಎಂಬುದು ನಗರದ ಜನತೆಯ ಆಶಯವಾಗಿದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ. ಅಧಿಕಾರ ಹಿಡಿದು ಆಡಳಿತ ನಡೆಸುತ್ತೇವೆ. ಕೊಳ್ಳೇಗಾಲ ನಗರಸಭೆ ವಿಷಯದಲ್ಲಿ ಕಾದು ನೋಡಲಾಗುವುದು. – ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಅಧ್ಯಕ್ಷ ಬಿಜೆಪಿ

 

ಸೋಲಿಲ್ಲದ ಸರದಾರ ನಂಜುಂಡಸ್ವಾಮಿಗೆ ಮೊದಲ ಸೋಲು

ಚಾಮರಾಜನಗರ: ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಗರಸಭೆಯ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಇದೇ ಪ್ರಥಮ ಬಾರಿಗೆ ಸೋಲುಂಡಿದ್ದಾರೆ.

1969ರಲ್ಲಿ ಮೊದಲ ಬಾರಿಗೆ ಚಾಮರಾಜನಗರ ಪುರಸಭೆಗೆ ಸ್ಪರ್ಧಿಸಿ ಎಸ್. ನಂಜುಂಡಸ್ವಾಮಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ನಡೆದಿರುವ 9 ಪುರಸಭಾ ನಗರಸಭಾ ಹಾಗೂ ನಗರಸಭಾ ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿದ್ದರು. ಸೋಲನ್ನೇ ಅರಿಯದ ಇವರನ್ನು ಈ ಭಾಗದ ಮಲ್ಲಿಕಾರ್ಜುನ ಖರ್ಗೆ ಎಂದೇ ರಾಜಕೀಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ 10ನೇ ಬಾರಿಗೆ ಸ್ಪರ್ಧಿಸಿದ್ದರು. ಇವರು ತಮ್ಮ ಪ್ರತಿಸ್ಪರ್ಧಿ ಎಸ್‍ಡಿಪಿಐ ಅಭ್ಯರ್ಥಿ ಯುವಕ ಎಂ. ಮಹೇಶ್ ಅವರ ವಿರುದ್ಧ 109 ಮತಗಳ ಅಂತರದಿಂದ ಸೋತಿದ್ದಾರೆ.

ಕಳೆದ 45 ವರ್ಷಗಳಿಂದ ಪುರಸಭಾ, ನಗರಸಭಾ ಸದಸ್ಯರಾಗಿದ್ದ ಎಸ್. ನಂಜುಂಡ ಸ್ವಾಮಿ ಇದೇ ಪ್ರಥಮ ಬಾರಿಗೆ ಸೋಲು ಕಾಣುವ ಮೂಲಕ ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಎಸ್. ನಂಜುಂಡಸ್ವಾಮಿ, ನನ್ನ ವಾರ್ಡ್ ಬದಲಾವಣೆಗೊಂಡಿದ್ದೆ ಸೋಲಿಗೆ ಕಾರಣ. ನಾನು ಪ್ರತಿನಿಧಿಸುತ್ತಿದ್ದ 13 ಮತ್ತು 14ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಗೆದ್ದಿದೆ. ನನ್ನ ವಾರ್ಡ್ ಬದಲಾವಣೆ ಹಿಂದೆ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಕೈವಾಡ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ

ಜಿಲ್ಲೆಯ ಚಾಮರಾಜನಗರ ನಗರಸಭೆಗೆ ನಡೆದ ಚುನಾವಣೆ ಸಂಬಂಧ ಮತ ಎಣಿಕೆ ಕಾರ್ಯ ಸೋಮವಾರ ನಡೆದು ಫಲಿತಾಂಶ ಹೊರಬಿದ್ದಿದೆ. 31 ವಾರ್ಡ್‍ಗಳ ಫಲಿತಾಂಶ ವಿವರ ಇಂತಿದೆ.
ವಾರ್ಡ್ 1- ಎಸ್.ನೀಲಮ್ಮ (ಕಾಂಗ್ರೆಸ್)-767
ಪುಟ್ಟನಿಂಗಮ್ಮ (ಬಿಜೆಪಿ)- 590
ಮಹೇಶ್ವರಿ ಎಸ್.ಸಿದ್ದರಾಜು(ಬಿಎಸ್‍ಪಿ)- 89
ವಾರ್ಡ್ 2- ಗೌರಿ (ಬಿಜೆಪಿ)-435
ನೂರ್ ಆಯಿಷಾ (ಕಾಂಗ್ರೆಸ್)-375
ಮಲ್ಲಮ್ಮ (ಬಿಎಸ್‍ಪಿ)-8
ವಾರ್ಡ್ 3- ಮೊಹಮ್ಮದ್ ಅಮೀಕ್ (ಎಸ್‍ಡಿಪಿಐ)-547
ಬಿ.ಸತೀಶ್ (ಪಕ್ಷೇತರ)-507
ಅಹಮದ್ ಆಜಮ್ (ಕಾಂಗ್ರೆಸ್)-324
ವಾರ್ಡ್ 4- ಕಲೀಲ್‍ಉಲ್ಲಾ ಎನ್. (ಎಸ್‍ಡಿಪಿಐ)-687
ಸನಾವುಲ್ಲಾ (ಕಾಂಗ್ರೆಸ್)-405
ಅಕ್ರಂ ಪಾಷ (ಪಕ್ಷೇತರ)-214
ವಾರ್ಡ್ 5- ತೌಸೀಯ ಬಾನು (ಎಸ್‍ಡಿಪಿಐ)-763
ತಾರನುಮ್ (ಕಾಂಗ್ರೆಸ್)-646
ನಸೀಮ ಬಾನು (ಜೆಡಿಎಸ್)-142
ವಾರ್ಡ್ 6- ಸಮೀ ಉಲ್ಲಾ ಖಾನ್ (ಎಸ್‍ಡಿಪಿಐ)-634
ಅಯೂಬ್ ಉಲ್ಲಾ ಖಾನ್ (ಕಾಂಗ್ರೆಸ್)-486
ಜಾವೀದ್ ಜಬ್ಬಾರ್ (ಜೆಡಿಎಸ್)-141
ವಾರ್ಡ್ 7- ಸಿ.ಎಂ.ಆಶಾ (ಬಿಜೆಪಿ)-712
ಹೇಮ ಗಣೇಶ್ (ಕಾಂಗ್ರೆಸ್)-107
ನೋಟಾ-6
ವಾರ್ಡ್ 8- ರಾಘವೇಂದ್ರ.ಕೆ.(ಬಿಜೆಪಿ)-706
ಶ್ರೀಕಾಂತ್ ಸಿ.ಜಿ. (ಕಾಂಗ್ರೆಸ್)-311
ಹೆಚ್.ಬಿ.ವಿಶ್ವ ಕುಮಾರ್‍ಸ್ವಾಮಿ (ಜೆಡಿಎಸ್)-112
ವಾರ್ಡ್ 9- ಮಹೇಶ.ಎಂ (ಎಸ್‍ಡಿಪಿಐ)-372
ನಂಜುಂಡಸ್ವಾಮಿ (ಕಾಂಗ್ರೆಸ್)-263
ಆರ್.ಮಹದೇವಯ್ಯ (ಬಿಜೆಪಿ)-147
ವಾರ್ಡ್ 10- ಮನೋಜ್ ಪಟೇಲ್.ಎಂ (ಬಿಜೆಪಿ)-993
ಎಂ.ಸ್ವಾಮಿ (ಕಾಂಗ್ರೆಸ್)-290
ಚಿನ್ನಸ್ವಾಮಿ (ಬಿಎಸ್‍ಪಿ)-156
ವಾರ್ಡ್ 11- ಸಿ.ಎಂ.ಮಂಜುನಾಥ್ (ಬಿಜೆಪಿ)-508
ಪ್ರಶಾಂತ.ಬಿ (ಕಾಂಗ್ರೆಸ್)-265
ವಿಜಯಕುಮಾರ (ಬಿ.ಎಸ್.ಪಿ)-51
ವಾರ್ಡ್ 12- ಅಬ್ರಾರ್ ಅಹಮದ್ (ಎಸ್‍ಡಿಪಿಐ)-386
ಜುಬೇರುಲ್ಲಾ (ಕಾಂಗ್ರೆಸ್)-336
ಎನ್.ಮೋಹನ್ (ಬಿಜೆಪಿ)-241
ವಾರ್ಡ್ 13- ಎಂ.ಕಲಾವತಿ (ಕಾಂಗ್ರೆಸ್)-634
ರುಕಿಯಾ ಸುಲ್ತಾನ (ಜೆಡಿಎಸ್)-281
ಚೈತ್ರ ಎನ್. (ಬಿಎಸ್‍ಪಿ)-83
ವಾರ್ಡ್ 14- ಚಿನ್ನಮ್ಮ (ಕಾಂಗ್ರೆಸ್)-1075
ಸುಮ (ಎಸ್‍ಡಿಪಿಐ)-376
ಗೌರಿ (ಬಿಎಸ್‍ಪಿ)-114
ವಾರ್ಡ್ 15- ಆರ್.ಪಿ.ನಂಜುಂಡಸ್ವಾಮಿ (ಕಾಂಗ್ರೆಸ್)-334
ಹೇಮಂತ್‍ಕುಮಾರ್ ಎಂ. (ಬಿಜೆಪಿ)-330
ಪಿ.ಪಾಪಣ್ಣ (ಬಿಎಸ್‍ಪಿ)-160
ವಾರ್ಡ್ 16- ಚಂದ್ರಕಲಾ ಬಿ.ಎಸ್.(ಕಾಂಗ್ರೆಸ್)-1042
ಪುಷ್ಪಮಾಲಾ (ಬಿಜೆಪಿ)-400
ಪುಷ್ಪಲತಾ (ಪಕ್ಷೇತರ)-9
ವಾರ್ಡ್ 17- ಸಿ.ಎ.ಬಸವಣ್ಣ (ಪಕ್ಷೇತರ)-509
ನಾರಾಯಣಸ್ವಾಮಿ (ಕಾಂಗ್ರೆಸ್)-345
ಪಿ.ರಂಗಸ್ವಾಮಿ (ಬಿಜೆಪಿ)-266
ವಾರ್ಡ್ 18- ಎನ್.ಶಾಂತಿ (ಕಾಂಗ್ರೆಸ್)-532
ದಿವ್ಯಶ್ರೀ ಎನ್.ಎಸ್. (ಬಿಜೆಪಿ)-520
ಲಕ್ಷ್ಮಿ (ಜೆಡಿಎಸ್)-89
ವಾರ್ಡ್ 19- ಸಿ.ಎಂ.ಶಿವರಾಜು (ಬಿಜೆಪಿ)-687
ಸೈಯದ್ ನವೀದ್‍ಉಲ್ಲಾ (ಕಾಂಗ್ರೆಸ್)-465
ಮಹದೇವನಾಯಕ (ಪಕ್ಷೇತರ)-404
ವಾರ್ಡ್ 20- ಸಿ.ಜಿ.ಚಂದ್ರಶೇಖರ್ (ಬಿಜೆಪಿ)-836
ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)-304
ಮಂಜುನಾಥ (ಪಕ್ಷೇತರ)-28
ವಾರ್ಡ್ 21- ಸುದರ್ಶನಗೌಡ (ಬಿಜೆಪಿ)-596
ಎಸ್.ಕೋಮಲ್‍ಕುಮಾರ್ (ಕಾಂಗ್ರೆಸ್)-518
ನೋಟಾ-5
ವಾರ್ಡ್ 22- ಹೆಚ್.ಎಸ್.ಮಮತಾ (ಬಿಜೆಪಿ)-398
ಆಶಾ ಎಂ.(ಕಾಂಗ್ರೆಸ್)-325
ನೋಟಾ-1
ವಾರ್ಡ್ 23- ಗಾಯಿತ್ರಿ (ಬಿಜೆಪಿ)-541
ಎನ್.ಮಂಜುಳಾ (ಪಕ್ಷೇತರ)-352
ಶಾಂತಲಾ (ಕಾಂಗ್ರೆಸ್)-107
ವಾರ್ಡ್ 24- ಭಾಗ್ಯ (ಕಾಂಗ್ರೆಸ್)-684
ಲಕ್ಷ್ಮಿ (ಪಕ್ಷೇತರ)-508
ಶೋಭಾ (ಜೆಡಿಎಸ್)-208
ವಾರ್ಡ್ 25- ಎಂ.ಲೋಕೇಶ್ವರಿ (ಬಿಜೆಪಿ)-517
ಭಾಗ್ಯ (ಕಾಂಗ್ರೆಸ್)-421
ಎಂ.ಮಂಜುಳ (ಬಿಎಸ್‍ಪಿ)-87
ವಾರ್ಡ್ 26- ಕುಮುದ ಎಂ.ಎಸ್.(ಬಿಜೆಪಿ)-462
ನಾಗರತ್ನಮ್ಮ (ಕಾಂಗ್ರೆಸ್)-270
ಎನ್.ಮೋಹನಾಂಭ (ಪಕ್ಷೇತರ)-174
ವಾರ್ಡ್ 27- ವಿ.ಪ್ರಕಾಶ (ಬಿಎಸ್‍ಪಿ)-873
ಚೆÀಂಗುಮಣಿ (ಕಾಂಗ್ರೆಸ್)-308
ನಾಗೇಶನಾಯಕ (ಬಿಜೆಪಿ)-16
ವಾರ್ಡ್ 28- ಸುರೇಶ್ (ಬಿಜೆಪಿ)-979
ರಂಗಸ್ವಾಮಿ (ಕಾಂಗ್ರೆಸ್)-368
ಎಂ.ಮೂರ್ತಿ (ಬಿಎಸ್‍ಪಿ)-94
ವಾರ್ಡ್ 29-ಪಿ.ಸುಧಾ (ಬಿಜೆಪಿ)-726
ಶೋಭ (ಕಾಂಗ್ರೆಸ್)-238
ಬೇಬಿ (ಪಕ್ಷೇತರ)-154
ವಾರ್ಡ್ 30- ಮಹದೇವಯ್ಯ (ಬಿಜೆಪಿ)-551
ಎಂ.ಶಿವಮೂರ್ತಿ (ಕಾಂಗ್ರೆಸ್)-513
ಮಹದೇವಪ್ರಸಾದ್ (ಬಿಎಸ್‍ಪಿ)-310
ವಾರ್ಡ್ 31- ಆರ್.ಎಂ.ರಾಜಪ್ಪ (ಕಾಂಗ್ರೆಸ್)-523
ನಂಜುಂಡಸ್ವಾಮಿ (ಬಿಜೆಪಿ)-502
ಗುಜ್ಜಯ್ಯ (ಬಿಎಸ್‍ಪಿ)-15

ಕೊಳ್ಳೇಗಾಲ ನಗರಸಭೆ ಚುನಾವಣೆ ಫಲಿತಾಂಶ
ಕೊಳ್ಳೇಗಾಲ:  ಕೊಳ್ಳೇಗಾಲ ನಗರಸಭೆಯ 29 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. 6ನೇ ವಾರ್ಡಿ ನಿಂದ ಬಹುಜನ ಸಮಾಜ ಪಾರ್ಟಿಯ ಗಂಗಮ್ಮ ಅವಿರೋಧ ವಾಗಿ ಆಯ್ಕೆಯಾಗಿದ್ದರು. 9ನೇ ವಾರ್ಡಿನಲ್ಲಿ ಅಭ್ಯರ್ಥಿಯೊಬ್ಬರು ನಿಧನದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ. ಉಳಿದ 29 ವಾರ್ಡ್‍ಗಳ ಫಲಿತಾಂಶ ವಿವರ ಇಂತಿದೆ.

ವಾರ್ಡ್ 1- ಕವಿತಾ ಪಿ.ಎನ್. (ಪಕ್ಷೇತರ)-618, ಸುರಿಯಾ ಬಾನು (ಬಿಎಸ್‍ಪಿ)-600, ನೋಟಾ-8.
ವಾರ್ಡ್ 2- ಎಲ್. ನಾಗಮಣಿ (ಬಿ.ಎಸ್.ಪಿ)-348, ಭಾಗ್ಯ (ಕಾಂಗ್ರೆಸ್)-329, ಶೈಲಜ ಎಂ. (ಬಿಜೆಪಿ)-95.
ವಾರ್ಡ್ 3- ಸಿ.ಎನ್. ರೇಖಾ (ಕಾಂಗ್ರೆಸ್)-770, ಎಲ್. ವಾಣಿ (ಬಿ.ಎಸ್.ಪಿ)-631, ನೋಟಾ-2.
ವಾರ್ಡ್ 4- ಎಸ್. ಮಂಜುನಾಥ್ (ಕಾಂಗ್ರೆಸ್)-773, ಸುರೇಶ್ ಪಿ (ಬಿ.ಎಸ್.ಪಿ)-485, ನೋಟಾ-12.
ವಾರ್ಡ್ 5- ವಿ.ಧರಣೇಶ (ಬಿಜೆಪಿ)-599, ಎಂ. ನಟರಾಜು (ಬಿಎಸ್‍ಪಿ)-573, ಎಸ್.ವರದರಾಜು (ಕಾಂಗ್ರೆಸ್)-206.
ವಾರ್ಡ್ 6- ಗಂಗಮ್ಮ (ಬಿಎಸ್‍ಪಿ) ಅವಿರೋಧ ಆಯ್ಕೆಯಾಗಿದ್ದಾರೆ. ವಾರ್ಡ್ 7- ನಾಸೀರ್ ಷರೀಫ್ (ಬಿಎಸ್‍ಪಿ)-383, ಮಹಮ್ಮದ್ ಕೀಜರ್ (ಕಾಂಗ್ರೆಸ್)-296, ಡಿ. ಸುರೇಶ್ (ಬಿಜೆಪಿ).
ವಾರ್ಡ್ 8-ಎಂ.ಕವಿತ (ಬಿಜೆಪಿ)-368, ಎಸ್. ಸುಶೀಲ (ಬಿ.ಎಸ್.ಪಿ)-365, ಪೂರ್ಣಿಮ (ಕಾಂಗ್ರೆಸ್)-263, ವಾರ್ಡ್ 10-ಜಿ.ಪಿ.ಶಿವಕುಮಾರ್ (ಬಿಜೆಪಿ)-920, ಎಸ್. ಮಹದೇವಸ್ವಾಮಿ (ಕಾಂಗ್ರೆಸ್)-305, ಆನಂದ (ಬಿಎಸ್‍ಪಿ)-276.
ವಾರ್ಡ್ 11-ಮನೋಹರ ಎಸ್.ಆರ್. (ಪಕ್ಷೇ ತರ)-519, ಎನ್. ರವಿಬಾಬು (ಬಿಜೆಪಿ)-419, ಎಸ್. ಸುಬ್ರಮಣ್ಯ (ಕಾಂಗ್ರೆಸ್)-178.
ವಾರ್ಡ್ 12-ಸಿ.ಎಂ.ಪರಮೇಶ್ವರಯ್ಯ (ಬಿಜೆಪಿ)-484, ಪಿ.ಎಂ.ಕೃಷ್ಣಯ್ಯ (ಜೆಡಿಎಸ್)-294, ಆರ್.ರಾಜೇಶ್ (ಕಾಂಗ್ರೆಸ್)-27.
ವಾರ್ಡ್ 13-ಎನ್.ಪವಿತ್ರ (ಬಿಎಸ್‍ಪಿ)-290, ಎಸ್. ರೂಪ (ಕಾಂಗ್ರೆಸ್)-200, ಡಿ.ಕೆ.ಯಮುನ ಮಧು ಚಂದ್ರ (ಪಕ್ಷೇತರ)-166. ವಾರ್ಡ್ 14-ಎ.ಪಿ.ಶಂಕರ್ (ಪಕ್ಷೇತರ)-501, ಲಕ್ಷ್ಮಿಪತಿ (ಬಿಜೆಪಿ)-392, ಎಸ್.ವಿ. ಪರಮೇಶ್ವರಯ್ಯ(ಕಾಂಗ್ರೆಸ್)-291.
ವಾರ್ಡ್ 15-ಎಸ್.ರಾಘವೇಂದ್ರ (ಕಾಂಗ್ರೆಸ್)-627, ಮಹಮ್ಮದ್ ಶಫೀರ್ (ಬಿಎಸ್‍ಪಿ)-375, ನೋಟಾ-4. ವಾರ್ಡ್ 16- ಸಿರೀಶ ಸತೀಶ (ಬಿಜೆಪಿ)-312, ರಾಜೇಶ್ವರಿ ನಾರಾಯಣ್ (ಕಾಂಗ್ರೆಸ್)-261, ತಿರಸ್ಕøತ-1.
ವಾರ್ಡ್ 17- ಶಾಂತರಾಜು (ಕಾಂಗ್ರೆಸ್)-483, ಮಹೇಶ ಆರ್. (ಬಿಜೆಪಿ)-188, ರಾಜಪ್ಪ (ಬಿಎಸ್‍ಪಿ)-53. ವಾರ್ಡ್ 18- ಶಂಕರನಾರಾಯಣ ಗುಪ್ತ ಎಸ್. (ಪಕ್ಷೇತರ)-307, ಮಂಜುನಾಥ ಎನ್. (ಬಿಜೆಪಿ)-63, ಮಹೇಶ್ ಎಸ್.ಶ್ರೀನಿಧಿ (ಕಾಂಗ್ರೆಸ್)-239.
ವಾರ್ಡ್ 19- ಸುಧಾ ಬಿ. (ಕಾಂಗ್ರೆಸ್)-415, ನವ್ಯ ಜ್ಯೋತಿ ಬಿ.ಆರ್.(ಬಿಜೆಪಿ)-215, ಸರಸ್ವತಿ (ಬಿಎಸ್‍ಪಿ) -268. ವಾರ್ಡ್ 20- ಸುಮೇರಾ ಬೇಗಂ ಅಕ್ಮಲ್ ಪಾಷ (ಕಾಂಗ್ರೆಸ್)-1007, ರಿಜ್ವಾನ ಬಾನು (ಬಿಎಸ್‍ಪಿ)-334, ಆಶಾ (ಪಕ್ಷೇತರ)-68.
ವಾರ್ಡ್ 21- ಪ್ರಕಾಶ್ ಶಂಕನಪುರ(ಬಿಎಸ್‍ಪಿ)-591, ಜಯಪ್ರಕಾಶ್ ಡಿ. (ಬಿಜೆಪಿ)-27, ಮೂರ್ತಿ ಎಸ್. (ಕಾಂಗ್ರೆಸ್)-396. ವಾರ್ಡ್ 22- ಪ್ರಶಾಂತ್ ಎಸ್. (ಕಾಂಗ್ರೆಸ್)-622, ರಾಮಕೃಷ್ಣ ಆರ್ (ಬಿಎಸ್‍ಪಿ)-278, ನೋಟಾ-5. ವಾರ್ಡ್ 23- ಜಯಮರಿ ಜಿ. (ಬಿಎಸ್‍ಪಿ)-713, ಶೀಲಾ ಆರ್. (ಕಾಂಗ್ರೆಸ್)-365, ಶೋಭ ಎಂ. (ಪಕ್ಷೇತರ)-248.
ವಾರ್ಡ್ 24- ಜಯರಾಜು (ಬಿ.ಎಸ್.ಪಿ)-283, ಪುಟ್ಟಸ್ವಾಮಿ ಸಿ.(ಬಿಜೆಪಿ)-84, ಪ್ರಕಾಶ ಎಸ್. (ಕಾಂಗ್ರೆಸ್)-175.
ವಾರ್ಡ್ 25- ರಾಮಕೃಷ್ಣ ಎನ್. (ಬಿಎಸ್‍ಪಿ)-162, ಸೋಮಯ್ಯ (ಕಾಂಗ್ರೆಸ್)-60, ಲೋಕೇಶ್ ಎನ್. (ಬಿಜೆಪಿ)-144.
ವಾರ್ಡ್ 26- ನಾಗಸುಂದ್ರಮ್ಮ (ಬಿಎಸ್‍ಪಿ)-1019, ಶ್ವೇತಾ ವಿ. (ಕಾಂಗ್ರೆಸ್)-250, ಕೆ.ದಿವ್ಯಜ್ಯೋತಿ (ಬಿಜೆಪಿ) -15. ವಾರ್ಡ್ 27- ಪುಷ್ಪಲತಾ (ಕಾಂಗ್ರೆಸ್)-385, ಮಹದೇವಮ್ಮ (ಬಿಎಸ್‍ಪಿ)-194, ಚಂದ್ರಕಲಾ (ಬಿಜೆಪಿ)-22. ವಾರ್ಡ್ 28- ಚಿಕ್ಕತಾಯಮ್ಮ (ಕಾಂಗ್ರೆಸ್)-557, ನಾಗಶ್ರೀ (ಬಿಎಸ್‍ಪಿ)-223, ಆರ್.ಆಶಾರಾಣಿ(ಬಿಜೆಪಿ)-321.
ವಾರ್ಡ್ 29- ಜಿ.ರಮ್ಯ (ಬಿಜೆಪಿ)-693, ರಾಜೇಶ್ವರಿ ಸಿ. (ಕಾಂಗ್ರೆಸ್)-338, ಲತಾ (ಬಿಎಸ್‍ಪಿ)-120.
ವಾರ್ಡ್ 30- ಜಿ.ಎಂ.ಸುರೇಶ್ (ಕಾಂಗ್ರೆಸ್)-505, ಎಂ.ಮಾದೇಶ (ಬಿಎಸ್‍ಪಿ)-401, ನೋಟಾ-5. ವಾರ್ಡ್ 31- ಆರ್.ಸುಶೀಲಾ (ಕಾಂಗ್ರೆಸ್)-631, ಶಿವಲಿಂಗಮ್ಮ (ಬಿಎಸ್‍ಪಿ)-350, ಜ್ಯೋತಿ ಎ. (ಬಿಜೆಪಿ)-222.

Translate »