ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ
ಮಂಡ್ಯ

ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ

September 4, 2018

ಮಂಡ್ಯ: ವಿಧಾನಸಭಾ ಚುನಾವಣೆ ಯಲ್ಲಿ ಜಿಲ್ಲೆಯ 7 ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಮೆರೆದಿದ್ದ ಜೆಡಿಎಸ್, ನಗರ ಸ್ಥಳೀಯ ಸಂಸ್ಥೆ ಚುನಾ ವಣೆಯಲ್ಲಿಯೂ ತನ್ನ ಪಾರುಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಪೈಕಿ 1 ನಗರಸಭೆ, 3 ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜೆಡಿಎಸ್ 1 ಪಟ್ಟಣ ಪಂಚಾಯಿತಿಗಷ್ಟೇ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿದೆ.

ಮಂಡ್ಯ ನಗರಸಭೆ, ಪಾಂಡವಪುರ, ನಾಗ ಮಂಗಲ, ಮದ್ದೂರು ಪುರಸಭೆಗಳಲ್ಲಿ ಜೆಡಿಎಸ್ ತನ್ನ ಪಾರುಪತ್ಯ ಪ್ರತಿಷ್ಠಾಪಿಸಿದ್ದು, ಕಾಂಗ್ರೆಸ್ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ತನ್ನ ಪ್ರಾಬಲ್ಯ ಸೀಮಿತ ಗೊಳಿಸಿಕೊಂಡರೆ, ಬೆರಳೆಣಿಕೆ ಸ್ಥಾನಗಳಿಗಷ್ಟೇ ಬಿಜೆಪಿ ತೃಪ್ತಿಪಟ್ಟುಕೊಂಡಿದೆ.

ಮಂಡ್ಯ ನಗರಸಭೆಯ 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ ಪಕ್ಷೇತರ ಸದಸ್ಯರು 5 ಮಂದಿ ಆಯ್ಕೆಯಾಗಿದ್ದು ಜೆಡಿಎಸ್ ಸರಳ ಬಹುಮತದ ಮೂಲಕ ಅಧಿಕಾರದತ್ತ ಹೆಜ್ಜೆಯಿಟ್ಟಿದೆ.

ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ತವರು ಕ್ಷೇತ್ರ ಪಾಂಡವಪುರ ಪುರಸಭೆಯಲ್ಲಿ ತನ್ನ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಪುರಸಭೆಯ 23 ಸ್ಥಾನ ಗಳ ಪೈಕಿ 18 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. ಕಾಂಗ್ರೆಸ್-3 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ ಹಾಗೂ ರೈತಸಂಘದ ತಲಾ ಓರ್ವ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಸಿ.ಎಸ್.ಪುಟ್ಟರಾಜು ಅವರ ಜನಪ್ರಿಯತೆಗೆ ಪ್ರಮುಖ ವಿರೋಧ ಪಕ್ಷ ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರ ಶ್ರಮ ವ್ಯರ್ಥವಾಗಿದೆ. ಕಾಂಗ್ರೆಸ್ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸಿದರೂ ಜೆಡಿಎಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ವಿಫಲರಾಗಿದ್ದಾರೆ.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ತವರು ಕ್ಷೇತ್ರ ಮದ್ದೂರು ಪುರಸಭೆಯ ಅಧಿಕಾರ ಜೆಡಿಎಸ್‍ಗೆ ಒಲಿದಿದೆ. ಪುರಸಭೆಯ 23 ಸ್ಥಾನಗಳ ಪೈಕಿ ಅಧಿ ಕಾರ ಹಿಡಿಯಲು ಬೇಕಾದ ಅಗತ್ಯ ಸಂಖ್ಯಾಬಲ 12 ಸ್ಥಾನವನ್ನು ಜೆಡಿಎಸ್ ತನ್ನ ಬಗಲಿಗೆ ಹಾಕಿ ಕೊಂಡಿದೆ. ಕಾಂಗ್ರೆಸ್ – 4 ಸ್ಥಾನಗಳಲ್ಲಿ, ಬಿಜೆಪಿ-1 ಹಾಗೂ ಪಕ್ಷೇತರರು-6 ಮಂದಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.

ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ಸರಳ ಬಹುಮತದೊಂದಿಗೆ ಅಧಿಕಾರ ಪಡೆದಿದ್ದರೂ, ಕಾಂಗ್ರೆಸ್ ದೊಡ್ಡ ಹೋರಾಟವನ್ನೇ ಮಾಡಿದೆ. 23 ಸ್ಥಾನಗಳಲ್ಲಿ ಜೆಡಿಎಸ್ 12 ಹಾಗೂ ಕಾಂಗ್ರೆಸ್ 11 ಸ್ಥಾನಗಳನ್ನು ಪಡೆದಿದೆ. ಇಲ್ಲಿ ಜೆಡಿಎಸ್‍ಗೆ ಅಧಿಕಾರ ಸಿಕ್ಕಿದ್ದರೂ, ಕಾಂಗ್ರೆಸ್ ಸಮಬಲ ಹೋರಾಟ ನೀಡಿದೆ.

ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬ ಲಿಗರಿಗೆ ಮತದಾರರು ಮಣೆ ಹಾಕುವ ಮೂಲಕ ಹಾಲಿ ಶಾಸಕ ಸುರೇಶ್‍ಗೌಡರಿಗೆ ಮುಖಭಂಗ ವುಂಟು ಮಾಡುವ ಪ್ರಯತ್ನ ನಡೆದಿದೆÉಯಾದರೂ ಜೆಡಿಎಸ್ ಸರಳ ಬಹುಮತದ ಪಥದಲ್ಲಿರುವುದು ಸಮಾಧಾನಕರ ಸಂಗತಿಯಾಗಿದೆ.

ಬೆಳ್ಳೂರು ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಮತದಾರರು ಆಶೀರ್ವದಿಸಿದ್ದಾರೆ. ಕಾಂಗ್ರೆಸ್ – 7, ಜೆಡಿಎಸ್- 4 ಹಾಗೂ ಪಕ್ಷೇತರರು-2 ಸ್ಥಾನ ಗಳಲ್ಲಿ ವಿಜೇತರಾಗಿದ್ದಾರೆ. ನಾಗಮಂಗಲ ಜೆಡಿಎಸ್ ಕೋಟೆಯಲ್ಲಿ ಇತ್ತೀಚೆಗೆ ಉಂಟಾಗಿರುವ ಭಿನ್ನ ಮತವೇ ಪಕ್ಷದ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಂಡ್ಯ ನಗರಸಭೆ ವಿಜೇತ ಅಭ್ಯರ್ಥಿಗಳು:

ವಾರ್ಡ್ ನಂ.1: ನಾಗೇಶ್ (ಜೆಡಿಎಸ್) – 1131, ವಾರ್ಡ್: 2 ಮಂಜುಳಾ (ಪಕ್ಷೇ ತರ)- 997, ವಾರ್ಡ್ 3: ಜಾಕೀರ್‍ಪಾಷ (ಪಕ್ಷೇತರ)-949, ವಾರ್ಡ್ 4: ಪೂರ್ಣಿಮಾ ರವಿ (ಕಾಂಗ್ರೆಸ್)- 1582, ವಾರ್ಡ್ 5: ನಹೀಂ (ಕಾಂಗ್ರೆಸ್) -980, ವಾರ್ಡ್ 6: ಟಿ.ರವಿ (ಜೆಡಿಎಸ್) – 1362, ವಾರ್ಡ್ 7: ಶಿವ ಲಿಂಗು (ಜೆಡಿಎಸ್)- 862, ವಾರ್ಡ್ 8: ಕುಮಾರ್. ಎಂ. (ಜೆಡಿಎಸ್)- 1376, ವಾರ್ಡ್ 9: ಎಸ್. ಗೀತಾ (ಕಾಂಗ್ರೆಸ್)-662, ವಾರ್ಡ್ 10: ಎಂ.ಸಿ .ಶಿವ ಪ್ರಕಾಶ್ (ಕಾಂಗ್ರೆಸ್)-985, ವಾರ್ಡ್ 11: ಎಂ.ಪಿ. ಅರುಣ್‍ಕುಮಾರ್ (ಬಿಜೆಪಿ) – 749, ವಾರ್ಡ್ 12: ಭಾರತೀಶ್ (ಜೆಡಿಎಸ್)- 967, ವಾರ್ಡ್ 13: ಫಾತಿಮಾ (ಜೆಡಿಎಸ್), ವಾರ್ಡ್ 14: ಮಹದೇವು (ಜೆಡಿಎಸ್) – 506, ವಾರ್ಡ್ 15: ಮೀನಾಕ್ಷಿ (ಜೆಡಿಎಸ್) – 978. ವಾರ್ಡ್ 16: ಮಂಗಳಾ (ಜೆಡಿಎಸ್)- 694, ವಾರ್ಡ್ 17: ಎಂ.ಬಿ.ಶಶಿಕಲಾ (ಕಾಂಗ್ರೆಸ್) – 955, ವಾರ್ಡ್ 18: ಪವಿತ್ರ ಬೋರೇಗೌಡ (ಕಾಂಗ್ರೆಸ್) – 1099, ವಾರ್ಡ್ 19: ಮಂಜುಳಾ ಉದಯಶಂಕರ್ (ಜೆಡಿಎಸ್)- 1042, ವಾರ್ಡ್ 20: ಎಚ್.ಎಸ್.ಮಂಜು (ಜೆಡಿಎಸ್) – 1428, ವಾರ್ಡ್ 21: ಎಚ್.ಎನ್.ರವಿ (ಕಾಂಗ್ರೆಸ್) – 1207, ವಾರ್ಡ್-22 ನಾರಾಯಣ (ಜೆಡಿಎಸ್)- 1212. ವಾರ್ಡ್ 23: ಜಾಹೇದ್‍ಭಾನು (ಜೆಡಿಎಸ್) – 871, ವಾರ್ಡ್ 24: ಚಿಕ್ಕತಾಯಮ್ಮ (ಬಿಜೆಪಿ) – 742, ವಾರ್ಡ್ 25: ನಾಗೇಶ (ಜೆಡಿಎಸ್)- 958, ವಾರ್ಡ್ 26: ಶ್ರೀಧರ್ (ಕಾಂಗ್ರೆಸ್) – 835, ವಾರ್ಡ್ 27: ಟಿ.ಕೆ.ರಾಮಲಿಂಗಯ್ಯ (ಕಾಂಗ್ರೆಸ್)- 942, ವಾರ್ಡ್ 28: ಸೌಭಾಗ್ಯ (ಪಕ್ಷೇತರ) – 1199, ವಾರ್ಡ್ 29: ವಿಶಾಲಾಕ್ಷಿ ನಾಗರಾಜು (ಜೆಡಿಎಸ್)- 1102. ವಾರ್ಡ್ 30: ಜಿ.ಕೆ.ಶ್ರೀನಿವಾಸ್ (ಕಾಂಗ್ರೆಸ್) – 836, ವಾರ್ಡ್ 31: ವಸೀಂ (ಜೆಡಿಎಸ್)- 917, ವಾರ್ಡ್ 32: ಸಿ.ಕೆ.ರಜನಿ (ಜೆಡಿಎಸ್) – 1138, ವಾರ್ಡ್ 33: ವಿದ್ಯಾ (ಜೆಡಿಎಸ್) – 785, ವಾರ್ಡ್ 34: ಪೂರ್ಣಾನಂದ (ಪಕ್ಷೇತರ)- 751, ವಾರ್ಡ್ 35: ಲಲಿತಾ (ಪಕ್ಷೇತರ) – 454.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನೂ ರಾಜ್ಯ ಸರ್ಕಾರ ಪ್ರಕಟಿಸಿದೆ. ಮಂಡ್ಯ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆ, ಪಟ್ಟಣ ಪಂಚಾಯಿತಿಗಳಾದ ಮದ್ದೂರು ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಬಿಸಿಎ, ನಾಗಮಂಗಲ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ, ಪಾಂಡವಪುರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಬೆಳ್ಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ(ಎಸ್ಟಿ), ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Translate »