ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು
ಮೈಸೂರು

ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು

September 4, 2018

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ಮೂರು ವಾರ್ಡ್‍ಗಳಲ್ಲಿ ಬಿಜೆಪಿ 2 ಹಾಗೂ ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಿದ್ದರೆ, ಇಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ.

ವಾರ್ಡ್ 44ರಲ್ಲಿ (ಜನತಾನಗರ) ಜೆಡಿಎಸ್‍ನ ಸವಿತಾ ಸುರೇಶ್ ಜಯ ಗಳಿಸಿದ್ದರೆ, ವಾರ್ಡ್ 46ರಲ್ಲಿ (ದಟ್ಟಗಳ್ಳಿ) ಬಿಜೆಪಿಯ ಎಂ.ಲಕ್ಷ್ಮಿ ಹಾಗೂ ವಾರ್ಡ್ 58ರಲ್ಲಿ (ರಾಮಕೃಷ್ಣನಗರ) ಬಿಜೆಪಿಯ ಆರ್.ಕೆ.ಶರತ್‍ಕುಮಾರ್ ಗೆಲುವು ಸಾಧಿಸಿದ್ದಾರೆ.
ವಾರ್ಡ್ 44ರಲ್ಲಿ 2701 ಮತಗಳನ್ನು ಪಡೆದ ಜೆಡಿಎಸ್‍ನ ಸವಿತಾ ಸುರೇಶ್ 115 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನ ಹೇಮಾವತಿ ಸಿ.ಎಸ್.ರಘು 2586 ಹಾಗೂ ಬಿಜೆಪಿಯ ಆರ್.ಯಶೋಧಾ 1425 ಮತಗಳನ್ನು ಪಡೆದಿದ್ದಾರೆ. ಒಟ್ಟು ಐವರು ಅಭ್ಯರ್ಥಿಗಳಿದ್ದ ಈ ವಾರ್ಡಿನಲ್ಲಿ 85 ನೋಟಾ ಚಲಾವಣೆಗೊಂಡಿವೆ. ವಾರ್ಡ್ 46ರಲ್ಲಿ ಬಿಜೆಪಿಯ ಎಂ.ಲಕ್ಷ್ಮೀ 625 ಮತಗಳ ಅಂತರದಲ್ಲಿ ಜಯಶಾಲಿ ಯಾಗಿದ್ದಾರೆ. ಇವರು 1964 ಗಳಿಸಿದ್ದು, ಇವರಿಗೆ ಪೈಪೋಟಿ ನೀಡಿದ ಜೆಡಿಎಸ್‍ನ ಅನುಸೂಯ ರಮೇಶ್ ಕಳ್ಳಿಪಾಳ್ಯ 1339 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಕಾಂಗ್ರೆಸ್‍ನ ಜೆ.ಕಾವ್ಯ ಕೇವಲ 627 ಮತಗಳನ್ನಷ್ಟೇ ಪಡೆದು ಸೋಲುಂಡಿದ್ದಾರೆ. ಒಟ್ಟು 6 ಅಭ್ಯರ್ಥಿಗಳಿದ್ದ ಈ ವಾರ್ಡಿನಲ್ಲಿ 54 ನೋಟಾ ಮತಗಳು ಚಲಾವಣೆ ಆಗಿವೆ. ವಾರ್ಡ್ 58ರಲ್ಲಿ ಕೇವಲ 8 ಮತಗಳ ಅಂತರದಲ್ಲಿ ಬಿಜೆಪಿಯ ಆರ್.ಕೆ. ಶರತ್‍ಕುಮಾರ್ ಗೆಲುವು ಸಾಧಿಸಿದ್ದಾರೆ. 1778 ಮತಗಳನ್ನು ಗಳಿಸಿದ ಆರ್.ಕೆ. ಶರತ್‍ಕುಮಾರ್ ಅವರಿಗೆ ಕಾಂಗ್ರೆಸ್‍ನ ಹೆಚ್.ಸಿ.ಕೃಷ್ಣಕುಮಾರ್ ಸಾಗರ್ 1770 ಮತಗಳನ್ನು ಗಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದಾರೆ. ಜೆಡಿಎಸ್‍ನ ಬಿ.ಕೆ.ಮಹೇಶ್ 1357 ಮತಗಳನ್ನು ಗಳಿಸಿದ್ದು, ಒಟ್ಟು 12 ಅಭ್ಯರ್ಥಿಗಳಿದ್ದ ಈ ವಾರ್ಡಿನಲ್ಲಿ 66 ನೋಟಾ ಮತಗಳು ಚಲಾವಣೆಗೊಂಡಿವೆ.

Translate »