ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ
ಮೈಸೂರು

ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 13 ಸ್ಥಾನ ಗಳನ್ನು ಪಡೆಯುವ ಮೂಲಕ ಈ ಕ್ಷೇತ್ರ ದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಾಂಗ್ರೆಸ್ 13 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದರೆ, 6 ವಾರ್ಡ್‍ಗಳಲ್ಲಿ ಜಾತ್ಯತೀತ ಜನತಾದಳ, 3ರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಗೆಲುವು ದಾಖಲಿಸಿದ ವಾರ್ಡ್‍ಗಳೆಂದರೆ, 8ನೇ ವಾರ್ಡ್ (ಬನ್ನಿ ಮಂಟಪ ಹುಡ್ಕೋ ಕಾಲೋನಿ)- ಅಕ್ಮಲ್ ಪಾಷಾ, 10ನೇ ವಾರ್ಡ್ (ರಾಜೀವ್ ನಗರ)- ಅನ್ವರ್‍ಬೇಗ್, 11ನೇ ವಾರ್ಡ್ (ಶಾಂತಿನಗರ)- ಪುಷ್ಪಲತಾ ಜಗನ್ನಾಥ್, 12ನೇ ವಾರ್ಡ್ (ಶಾಂತಿನಗರ)- ಅಯಾಜ್ ಪಾಷಾ, 13ನೇ ವಾರ್ಡ್ (ಉದಯಗಿರಿ)- ಅಯೂಬ್ ಖಾನ್, 15ನೇ ವಾರ್ಡ್ (ರಾಜೇಂದ್ರನಗರ)- ಪ್ರದೀಪ್‍ಚಂದ್ರ, 16ನೇ ವಾರ್ಡ್ (ಸುಭಾಷ್ ನಗರ)- ಎ.ಅರೀಫ್ ಹುಸೇನ್, 29ನೇ ವಾರ್ಡ್ (ಎನ್.ಆರ್.ಮೊಹಲ್ಲಾ)- ಸೈಯ್ಯದ್ ಅಸ್ರತ್‍ಉಲ್ಲಾ, 32ನೇ ವಾರ್ಡ್ (ಗೌಸಿಯಾ ನಗರ ಎ ಬ್ಲಾಕ್)- ಹೆಚ್.ಎಂ.ಶಾಂತಕುಮಾರಿ, 33ನೇ ವಾರ್ಡ್ (ಅಜೀಜ್‍ಸೇಠ್‍ನಗರ)- ಬಷೀರ್ ಅಹಮದ್, 34ನೇ ವಾರ್ಡ್ (ಕಲ್ಯಾಣಗಿರಿ)- ಹಾಜಿರಾ ಬಾನು, 38ನೇ ವಾರ್ಡ್ (ಗಿರಿಯಾಬೋವಿಪಾಳ್ಯ)- ಸಿ.ಶ್ರೀಧರ್, 39ನೇ ವಾರ್ಡ್ (ಗಾಯಿತ್ರಿ ಪುರಂ)- ಜಿ.ಎಸ್.ಸತ್ಯರಾಜ್.

ಜಾತ್ಯತೀತ ಜನತಾದಳ ಗೆಲುವು ಸಾಧಿ ಸಿದ ವಾರ್ಡ್‍ಗಳೆಂದರೆ, 14ನೇ ವಾರ್ಡ್ (ಸತ್ಯನಗರ)- ಸವೂದ್ ಖಾನ್, 17ನೇ ವಾರ್ಡ್ (ಬನ್ನಿಮಂಟಪ)- ರೇಷ್ಮಾ ಬಾನು, 27ನೇ ವಾರ್ಡ್ (ವೀರನಗೆರೆ)- ಮಹಮ್ಮದ್ ರಫೀಕ್, 31ನೇ ವಾರ್ಡ್ (ಕೆ.ಎನ್.ಪುರ-ಗೌಸಿಯಾನಗರ)- ಶಫೀ ಅಹಮದ್, 36ನೇ ವಾರ್ಡ್ (ಯರಗನ ಹಳ್ಳಿ-ಅಂಬೇಡ್ಕರ್ ಕಾಲೋನಿ)- ರುಕ್ಮಿಣಿ ಮಾದೇಗೌಡ, 37ನೇ ವಾರ್ಡ್ (ರಾಘ ವೇಂದ್ರನಗರ)- ಅಶ್ವಿನಿ ಅನಂತು.

ಬಿಜೆಪಿ ಗೆಲುವು ಸಾಧಿಸಿದ ವಾರ್ಡ್ ಗಳಿವು: 28ನೇ ವಾರ್ಡ್ (ಗಾಂಧಿ ನಗರ)- ಡಾ.ಅಶ್ವಿನಿ ಶರತ್, 30ನೇ ವಾರ್ಡ್ (ಕ್ಯಾತ ಮಾರನಹಳ್ಳಿ)- ಉಷಾ ಎನ್.ನಾರಾ ಯಣ್ ಲೋಲಪ್ಪ, 35ನೇ ವಾರ್ಡ್ (ಸಾತಗಳ್ಳಿ ಬಡಾವಣೆ)- ಸಾತ್ವಿಕ್ ಸಂದೇಶ್‍ಸ್ವಾಮಿ,
ಗೆದ್ದ ಪಕ್ಷೇತರ ಅಭ್ಯರ್ಥಿ, 9ನೇ ವಾರ್ಡ್ (ಕೆಸರೆ)- ಸಮೀಉಲ್ಲಾ (ಅಜ್ಜು).ನರಸಿಂಹರಾಜ ಕ್ಷೇತ್ರದಲ್ಲಿ ಹಾಲಿ ಸದಸ್ಯರಾದ ಅಯೂಬ್ ಖಾನ್, ಅಶ್ವಿನಿ ಅನಂತು ಪುನರಾಯ್ಕೆಯಾಗಿದ್ದಾರೆ.

Translate »