ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು
ಮೈಸೂರು

ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾತಿ ನಿಗದಿ ಪಡಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಅತಂತ್ರ ಫಲಿತಾಂಶ ಹೊಂದಿರುವ ಮೈಸೂರು ನಗರಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ 7 ಹಾಗೂ ಜೆಡಿಎಸ್‍ನಲ್ಲಿ 11 ಮಹಿಳೆಯರು ಅರ್ಹರಾಗಿದ್ದು, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಹಾಗೂ ಜೆಡಿಎಸ್‍ನಲ್ಲಿ ಇಬ್ಬರು ಮಹಿಳೆಯರು ಸೇರಿ 5 ಮಂದಿ ಅರ್ಹರಾಗಿದ್ದಾರೆ.

ವಿಶೇಷವೆಂದರೆ ಉಪಮೇಯರ್ ಸ್ಥಾನಕ್ಕೆ ಅರ್ಹತೆ ಹೊಂದಿರುವ ಉಭಯ ಪಕ್ಷಗಳ ಪುರುಷರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಕುಂಬಾರಕೊಪ್ಪಲು 5ನೇ ವಾರ್ಡ್‍ನ ಉಷಾ, ಶಾಂತಿನಗರ ಮಹದೇವಪುರ ರಸ್ತೆ 11ನೇ ವಾರ್ಡ್‍ನ ಪುಷ್ಪಲತಾ ಜಗನ್ನಾಥ್, ಗೌಸಿಯಾನಗರ ‘ಎ’ ಬ್ಲಾಕ್ ಉಸ್ಮಾನಿಯಾ, 32ನೇ ವಾರ್ಡ್‍ನ ಹೆಚ್.ಎಂ.ಶಾಂತಕುಮಾರಿ, ಕಲ್ಯಾಣಗಿರಿ 34ನೇ ವಾರ್ಡ್‍ನ ಹಾಜೀರಾ ಸೀಮಾ, ಗುಂಡುರಾವ್ ನಗರ 54ನೇ ವಾರ್ಡ್‍ನ ಪುಟ್ಟನಿಂಗಮ್ಮ, ಅಶೋಕಪುರಂ 60ನೇ ವಾರ್ಡ್‍ನ ಬಿ.ಭುವನೇಶ್ವರಿ, ವಿದ್ಯಾರಣ್ಯಪುರಂ 61ನೇ ವಾರ್ಡ್‍ನ ಶೋಭಾ, ಜೆಡಿಎಸ್ ನಿಂದ ಹೆಬ್ಬಾಳು ಲಕ್ಷ್ಮಿಕಾಂತನಗರ 1ನೇ ವಾರ್ಡ್‍ನ ಲಕ್ಷ್ಮಿ, ಮಂಚೇಗೌಡನಕೊಪ್ಪಲು 2ನೇ ವಾರ್ಡ್‍ನ ಪ್ರೇಮಾಶಂಕರೇಗೌಡ, ಬನ್ನಿಮಂಟಪ 17ನೇ ವಾರ್ಡ್‍ನ ರೇಷ್ಮಾ ಭಾನು, ಜಯಲಕ್ಷ್ಮಿಪುರಂ, ವಿವಿಮೊಹಲ್ಲಾ 19ನೇ ವಾರ್ಡ್‍ನ ಭಾಗ್ಯ, ಪಡುವಾರಹಳ್ಳಿ 22ನೇ ವಾರ್ಡ್‍ನ ನಮ್ರತಾ ರಮೇಶ್, ಮೀನಾಬಜಾರ್ 26ನೇ ವಾರ್ಡ್‍ನ ತಸ್ಲೀಂ, ಯರಗನಹಳ್ಳಿ ಅಂಬೇಡ್ಕರ್ ಕಾಲೋನಿ 36ನೇ ವಾರ್ಡ್‍ನ ರುಕ್ಮಿಣಿ ಮಾದೇಗೌಡ, ರಾಜೇಂದ್ರನಗರ 37ನೇ ವಾರ್ಡ್‍ನ ಅಶ್ವಿನಿ ಅನಂತ್, ಜನತಾನಗರ 44ನೇ ವಾರ್ಡ್‍ನ ಶೋಭಾ, ಶಾರದಾದೇವಿನಗರ 45ನೇ ವಾರ್ಡ್‍ನ ಕೆ.ನಿರ್ಮಲಾ, ಜಯನಗರ 48ನೇ ವಾರ್ಡ್‍ನ ಎಂ.ಎಸ್.ಶೋಭಾ ಅರ್ಹರಾಗಿದ್ದಾರೆ.

ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ರಾಜೀವ್‍ನಗರ 10ನೇ ವಾರ್ಡ್‍ನ ಅನ್ವರ್ ಬೇಗ್, ಶಾಂತಿನಗರ ಇಂದಿರಾಗಾಂಧಿ ರಸ್ತೆ 12ನೇ ವಾರ್ಡ್‍ನ ಅಯಾಜ್ ಪಾಷಾ(ಪಂಡು), ಉದಯಗಿರಿ 13ನೇ ವಾರ್ಡ್‍ನ ಅಯೂಬ್ ಖಾನ್, ಸುಭಾಷ್‍ನಗರ 16ನೇ ವಾರ್ಡ್‍ನ ಆರೀಫ್ ಹುಸೇನ್, ಎನ್.ಆರ್.ಮೊಹಲ್ಲಾ 29ನೇ ವಾರ್ಡ್‍ನ ಸಯ್ಯದ್ ಹಸ್ರತ್‍ವುಲ್ಲಾ, ಕುಂಬಾರಕೊಪ್ಪಲು 5ನೇ ವಾರ್ಡ್‍ನ ಉಷಾ, ಜೆಡಿಎಸ್‍ನಿಂದ ಸತ್ಯನಗರ 14ನೇ ವಾರ್ಡ್‍ನ ಸಮಾದ್‍ಖಾನ್, ವೀರನಗೆರೆ 27ನೇ ವಾರ್ಡ್‍ನ ಮಹಮದ್ ರಫಿ, ಕೆ.ಎನ್.ಪುರ ಗೌಸಿಯಾನಗರ 31ನೇ ವಾರ್ಡ್‍ನ ಶಫಿ ಅಹಮದ್, ಪಡುವಾರಹಳ್ಳಿ 32ನೇ ವಾರ್ಡ್‍ನ ನಮ್ರತಾ ರಮೇಶ್, ಮೀನಾ ಬಜಾರ್ 26ನೇ ವಾರ್ಡ್‍ನ ತಸ್ಲೀಂ ಅರ್ಹರಾಗಿದ್ದಾರೆ.

Translate »