ಸ್ವಚ್ಛತೆ, ಉತ್ತಮ ಕೆಲಸದಿಂದ ನೆಮ್ಮದಿಯ ಬದುಕು
ಹಾಸನ

ಸ್ವಚ್ಛತೆ, ಉತ್ತಮ ಕೆಲಸದಿಂದ ನೆಮ್ಮದಿಯ ಬದುಕು

August 24, 2018

ರಾಮನಾಥಪುರ: ‘ದೇವಸ್ಥಾನ ಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಜೊತೆಗೆ, ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸ್ವಚ್ಛತಾ ಸಮಿತಿಯ ಸಂಚಾಲಕ ಎಸ್.ದಿವಾಕರ್ ಹೇಳಿದರು.

ಪಟ್ಟಣದ ಶ್ರೀ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಪಟ್ಟಾಭಿರಾಮಸ್ವಾಮಿ ದೇವಸ್ಥಾನ ಗಳ ಪಕ್ಕದ ಪುಷ್ಕರಣಿಯಲ್ಲಿರುವ ಕಾವೇರಿ ನದಿಗೆ ಇಳಿಯುವ ಮೆಟ್ಟಿಲುಗಳನ್ನು ಸ್ವಚ್ಛಗೊಳಿ ಸಿದ ಬಳಿಕ ಅವರು ಮಾತನಾಡಿದರು.

ಕೊಡಗಿನಲ್ಲಿ ಕಳೆದ ವಾರ ಸುರಿದ ಬಾರಿ ಮಳೆ ಹಾಗೂ ಕಾವೇರಿ ನದಿ ಪ್ರವಾಹದಿಂದ ಇಲ್ಲಿನ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ, ಪಟ್ಟಾಭಿರಾಮಸ್ವಾಮಿ ದೇವಸ್ಥಾನಗಳ ಸಮೀಪದ ಕಾವೇರಿ ನದಿಯ ಮೆಟ್ಟಿಲುಗಳಲ್ಲಿ ತ್ಯಾಜ್ಯಗಳು ಸಂಗ್ರಹಗೊಂಡು ಅನೈರ್ಮಲ್ಯ ಉಂಟಾ ಗಿತ್ತು. ಇದನ್ನು ಡಿಜಲ್ ಮೋಟರ್ ಮುಖಾಂತರ ನೀರು ಹಾಯಿಸಿಕೊಂಡು ಸ್ವಚ್ಛಗೊಳಿಸಲಾಗಿದೆ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಮಾತನಾಡಿದರು.

ಸ್ವಚ್ಛತಾ ಕಾರ್ಯದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾ ಕಾರ್ಯದರ್ಶಿ ರಘು, ಸಂಚಾಲಕ ಆರ್.ಆರ್. ಶ್ರೀನಿವಾಸ, ತಾಲೂಕು ಅಧ್ಯಕ್ಷ ಸಿದ್ದ ರಾಜು, ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ಕೇಶವ, ಸಮಿತಿಯ ಸದಸ್ಯರಾದ ಆರ್.ಶ್ರೀನಿವಾಸ್, ಗುರೂಜಿ, ಶ್ರೀನಾಥ್, ಶ್ರೀರಾಘವಭಟ್, ಶ್ರೀರಾಮು, ಅನಂತ್, ನಾಗೇಂದ್ರ, ಕಲೀಲ್, ಪ್ರಕಾಶ್, ಸುಬ್ಬರಾಯಿ, ಅಶ್ವನ್, ಭಾಗ್ಯಮ್ಮ ಪಾಲ್ಗೊಂಡಿದ್ದರು.

Translate »