ಚನ್ನಕೇಶವಸ್ವಾಮಿಗೆ ಚಿನ್ನ ಲೇಪಿತ ಕೀರಿಟ ಅರ್ಪಿಸಿದ ಗುತ್ತಿಗೆದಾರ
ಹಾಸನ

ಚನ್ನಕೇಶವಸ್ವಾಮಿಗೆ ಚಿನ್ನ ಲೇಪಿತ ಕೀರಿಟ ಅರ್ಪಿಸಿದ ಗುತ್ತಿಗೆದಾರ

August 24, 2018

ಬೇಲೂರು:  ವಿಶ್ವಪ್ರಸಿದ್ಧ ಹಾಗೂ ಐತಿಹಾಸಿಕ ತಾಣವಾದ ಬೇಲೂರು ಚನ್ನಕೇಶವ ಸ್ವಾಮಿಯ ದೇವಸ್ಥಾನದ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಗೆ ಬೇಲೂರಿನ ಗುತ್ತಿಗೆದಾರ ದೊಡ್ಡಮನೆ ಪ್ರಭಾಕರ್ ಅವರು ಚಿನ್ನ ಹಾಗೂ ಬೆಳ್ಳಿ ಲೇಪಿತ ಕಿರೀಟವನ್ನು ಗುರುವಾರ ಅರ್ಪಿಸಿದರು.

ಸುಮಾರು 5ಲಕ್ಷ ಮೌಲ್ಯದ ಕಿರೀಟವಾಗಿದ್ದು, ಬೆಳ್ಳಿಯಿಂದ ತಯಾರಿಸಿ ಚಿನ್ನದ ಲೇಪನ ಮಾಡಲಾಗಿದೆ. ಅಮೇರಿಕನ್ ಡೈಮಂಡ್ ವಿಶೇಷ ಹರಳುಗಳಿಂದ ಅಲಂಕಾರ ಮಾಡ ಲಾಗಿದೆ. ಈ ಕೀರಿಟವನ್ನು ತಮಿಳುನಾಡಿನ ಸೇಲ್ವಂ ಅವರು ತಯಾರಿಸಿದ್ದಾರೆ. ಈ ಉತ್ಸವ ಮೂರ್ತಿಗೆ ಕೀರಿಟಕ್ಕೆ ಬೇಲೂರಿನ ದೊಡ್ಡಮನೆ ಪ್ರಭಾಕರ್ ಅವರು ವಿಶೇಷ ಪೂಜೆ ನಡೆಸಿದ ಬಳಿಕ ಅರ್ಪಣೆ ಮಾಡಿದರು. ಪೂಜೆ ತರುವಾಯ ಉತ್ಸವ ಮೂರ್ತಿಗಳಾದ ಕೇಶವ ಹಾಗೂ ಪತ್ನಿರಾದ ಶ್ರೀದೇವಿ ಭೂದೇವಿಗೆ ಕೀರಿಟ ಧಾರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚನ್ನಕೇಶವ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್, ಶ್ರೀನಿವಾಸ್‍ಭಟ್ಟರ್, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೊದರ್, ಸಮಿತಿ ಸದಸ್ಯರು ಹಾಗೂ ದೊಡ್ಡಮನೆ ಕುಟುಂಬಸ್ಥರು ಹಾಜರಿದ್ದರು.

Translate »