ತ್ರಿವಳಿ ಕೆರೆಗಳ ಸೌಂದರ್ಯಭಿವೃದ್ಧಿಗೆ ಕ್ರಮ: ಕೆರೆಗಳ ಅಭಿವೃದ್ಧಿಗೆ 20 ಲಕ್ಷ ರೂ ಬಿಡುಗಡೆ, ಹುಣಸಿನಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಹಾಸನ

ತ್ರಿವಳಿ ಕೆರೆಗಳ ಸೌಂದರ್ಯಭಿವೃದ್ಧಿಗೆ ಕ್ರಮ: ಕೆರೆಗಳ ಅಭಿವೃದ್ಧಿಗೆ 20 ಲಕ್ಷ ರೂ ಬಿಡುಗಡೆ, ಹುಣಸಿನಕೆರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

August 24, 2018

ಹಾಸನ: ನಗರದ ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳ ಅಭಿವೃದ್ಧಿ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು.

ಲಭ್ಯವಿರುವ ಅನುದಾನ ಬಳಸಿ ಮೂರು ಕೆರೆಗಳಿಗೆ ನೀರು ತುಂಬಿಸಲು ಇರುವ ಯೊಜನೆ, ಹಣಕಾಸು ಜಲಮೂಲಗಳ ಹಾಗೂ ಮಳೆ ನೀರು ಸಂಗ್ರಹಕ್ಕಿರುವ ಅಡೆ ತಡೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಹೇಮಾ ವತಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ನೀರಿನ ಪೈಪ್‍ಲೈನ್‍ಗೆ ಸ್ವಲ್ಪ ಹೆಚ್ಚುವರಿ ವೆಚ್ಚ ನೀಡಿ ಚನ್ನಪಟ್ಟಣ ಕೆರೆಗೆ ನೀರು ತುಂಬಿಸಬಹುದಾಗಿದೆ. ಹಾಗಾಗಿ, ಆದಷ್ಟು ಶೀಘ್ರವಾಗಿ ಈ ಕಾರ್ಯ ನಡೆಯ ಬೇಕು ಎಂದು ನೀರಾವರಿ ಇಲಾಖೆಯ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.

ಈಗಾಗಲೇ 36 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಸದರಿ ಅನುದಾನ ವನ್ನು ಸಮರ್ಪಕವಾಗಿ ಬಳಸಿಕೊಂಡು ಚನ್ನ ಪಟ್ಟಣ ಕೆರೆಗಳಿಗೆ ನೀರು ತುಂಬಿಸಿ ಸೌಂದರ್ಯವೃದ್ಧಿ ಮಾಡಬೇಕಿದೆ. ಚನ್ನ ಪಟ್ಟಣ ಕೆರೆಯ ಹೂಳು ತೆಗೆಯುವ ಕಾರ್ಯದ ಜವಾಬ್ದಾರಿಯನ್ನು ಬೃಹತ್ ನೀರಾವರಿ ಇಲಾಖೆ ವಹಿಸಿಕೊಂಡಿದೆ. ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಿ ಹೇಮಾವತಿ ನದಿಯಿಂದ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸತ್ಯಮಂಗಲ ಮತ್ತು ಹುಣಸಿನಕೆರೆ ಗಳಿಗೆ ನೀರು ತುಂಬಿಸುವ ಹಾಗೂ ಅಭಿ ವೃದ್ಧಿಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಆದರೆ ಲಭ್ಯವಿರುವ ಅನುದಾನದಲ್ಲಿ ಎಲ್ಲಾ ಅಭಿವೃದ್ಧಿಯ ಕೆಲಸವನ್ನು ಏಕಕಾಲದಲ್ಲಿ ಕೈಗೊಳ್ಳುವುದು ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಬೇಕು ಎಂದರು.

ಹಸಿರು ಭೂಮಿ ಪ್ರತಿಷ್ಟಾನದ ಪ್ರಮುಖ ರಾದ ಆರ್.ಪಿ.ವೆಂಕಟೇಶ್‍ಮೂರ್ತಿ ಮಾತ ನಾಡಿ, ನಗರದ ಅಂತರ್ಜಲ ವೃದ್ಧಿಗೆ ಚನ್ನಪಟ್ಟಣ ಕೆರೆ ಜೊತೆಗೆ ಸತ್ಯಮಂಗಲ ಹುಣಸಿನ ಕೆರೆಗಳು ತುಂಬಬೇಕಿದೆ. ಯಗಚಿ ಜಲಾಶಯ ದಿಂದ ಹುಣಸಿನಕೆರೆ ಮೂಲಕ ಸತ್ಯಮಂಗಲ ಕೆರೆಯನ್ನು ತುಂಬಿಸಬಹುದು. ಇದೇ ರೀತಿ ನಗರ ಸಭೆಯ ಜಲಮೂಲದ ಮೂಲಕ ಹುಣಸಿನಕೆರೆ ತುಂಬಿಸಬೇಕು ಎಂದರು.

ಹುಣಸಿನಕೆರೆಗೆ ಕೊಳಚೆ ನೀರು ಸೇರ್ಪಡೆ ತಡೆ ಹಾಗೂ ಇತರೆ ಅಭಿವೃದ್ಧಿಗೆ 1 ಕೋಟಿ ರೂ. ಬಿಡುಗಡೆಯಾಗಿದ್ದು ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಕೈಗೊಳ್ಳಲಿದೆ ಎಂದರು.

ಚನ್ನಪಟಣ್ಣ ಕೆರೆಯಲ್ಲಿ ಉದ್ದೇಶ ಪ್ರವಾ ಸೋದ್ಯಮ ಅಭಿವದ್ಧಿ ಪ್ರದೇಶದ ಜೊತೆಗೆ ಪಕ್ಕದಲ್ಲಿ ಇರುವ 160 ಎಕರೆ ಖಾಲಿ ಜಾಗದ ವ್ಯಾಪ್ತಿಯೊಳಗಿರುವ ಮತ್ತು ಕೆರೆಯಲ್ಲಿ ನೀರು ತುಂಬುವ ಸುತ್ತಲ ಪ್ರದೇಶವನ್ನು ಸೌಂದರ್ಯಾಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರೋ.ಯೋಗೇಂದ್ರ ಮಾತನಾಡಿ, ನಗರದ ಮಳೆ ನೀರು ಹರಿವಿನ ಮಾರ್ಗ ಪಥ ಸರಿ ಪಡಿಸುವ ಮೂಲಕ ಹೇಗೆ ಸತ್ಯಮಂಗಲ ಕೆರೆಗೆ ನೈಸರ್ಗಿಕವಾಗಿ ನೀರು ತುಂಬಿಸಲು ಸಾಧ್ಯ ಎಂಬುದನ್ನು ವಿವರಿಸಿದರು.
ನಗರ ಸಭೆ ಆಯುಕ್ತರಾದ ಬಿ.ಎ.ಪರ ಮೇಶ್ ಅವರು ಹಾಲಿ ನಗರದ ನೀರು ಪೂರೈಕೆಗೆ ಅನುಷ್ಠಾನಗೊಳ್ಳುತ್ತಿರುವ ಆವೃತ ಯೋಜನೆಯಲ್ಲಿ ಸಣ್ಣ ಮಾರ್ಪಾಡು ಮಾಡುವ ಮೂಲಕ ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳಿಗೆ ನೀರು ತುಂಬಿಸಬ ಹುದಾಗಿದೆ. ಹೆಚ್ಚುವರಿ ವೆಚ್ಚವನ್ನು ನಗರ ಸಭೆ ಅಥವಾ ಇನ್ನಾವುದಾದರು ಲಭ್ಯ ಆರ್ಥಿಕ ಮೂಲದಿಂದ ಭರಿಸಬಹು ದಾಗಿದೆ ಎಂದು ತಿಳಿಸಿದರು.

ಎಲ್ಲಾರ ಅನಿಸಿಕೆ ಆಲಿಸಿದ ಜಿಲ್ಲಾಧಿಕಾರಿ ಯವರು ತ್ರಿವಳಿ ಕೆರೆಗಳ ಅಭಿವೃದ್ಧಿ ನಗರದ ಜನತೆಯ ಬಹುದಿನಗಳ ಬೇಡಿಕೆ. ಈಗ 20 ಲಕ್ಷ ರೂಪಾಯಿ ಕೆರೆಗಳ ಅಭಿವೃದ್ಧಿಗೆ ಹಣ ಒದಗಿಸಲಾಗಿದೆ. ಅಲ್ಲದೆ ಚನ್ನಪಟ್ಟಣ ಕೆರೆ ಸೌದರ್ಯಾಭಿವೃದ್ಧಿಗೆ ಪ್ರತ್ಯೇಕ ಅವಕಾಶ ಗಳಿವೆ. ಎಲ್ಲವನ್ನು ಬಳಸಿ ಆದಷ್ಟು ನಗರದ ಅಂರ್ತಜಲ ವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣ ಮೂರ್ತಿ, ನಗರಾಭಿ ವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಮೇಶ ಮತ್ತಿತರರು ಹಾಜರಿದ್ದರು.

ಹಂದಿನ ಕೆರೆ ಹಾಗೂ ಹುಣಸಿನಕೆರೆ ಪರಿಶೀಲನೆ:
ಯಗಚಿ ಜಲಾಶಯದ ನಾಲೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಅದು ಮುಗಿದ ಕೂಡಲೇ ಹಂದಿನ ಕೆರೆಗೆ ನೀರು ಪೂರೈಕೆಯಾಗಲಿದೆ. ಆ ಮೂಲಕ ಹಾಲುವಾಗಿಲು ಸತ್ಯಮಂಗಲ ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಈ ಬಗ್ಗೆ ಯಗಚಿ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.
ಹುಣಸಿನಕೆರೆಗೆ ಭೇಟಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳೊಂದಿಗೆ ಹುಣಸಿನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಆಯುಕ್ತರಾದ ಬಿ.ಎ.ಪರಮೇಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಹಾಜರಿದ್ದರು.

Translate »