ಹೆಬ್ಬಟ್ಟಗೇರಿಯಲ್ಲಿ ಮತ್ತೊಂದು ಮೃತದೇಹ ಪತ್ತೆ
ಕೊಡಗು

ಹೆಬ್ಬಟ್ಟಗೇರಿಯಲ್ಲಿ ಮತ್ತೊಂದು ಮೃತದೇಹ ಪತ್ತೆ

August 24, 2018

ಮಡಿಕೇರಿ: ಭಾರೀ ಮಳೆಗೆ ಮನೆಯ ಮೇಲೆ ಬೆಟ್ಟ ಕುಸಿದು ಮೃತಪಟ್ಟಿದ್ದ ವೃದ್ದ ಮಹಿಳೆಯೋರ್ವರ ಮೃತದೇಹವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹೊರತೆಗೆ ಯುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 17ರ ಬೆಳಿಗ್ಗೆ 7.30 ಗಂಟೆಗೆ ಹೆಬ್ಬೆಟ್ಟಗೇರಿಯ ಉಮ್ಮವ್ವ (80) ಎಂಬುವರ ಮನೆ ಮೇಲೆ ಭೂಮಿ ಕುಸಿದಿತ್ತು.

ಬರೆಯ ಮಣ್ಣು ಸಂಪೂರ್ಣ ಮನೆಯನ್ನೇ ಆಪೋಷನ ಪಡೆದಿತ್ತಲ್ಲದೆ, ಮನೆಯೊಳ ಗಿದ್ದವರು ಏನಾದರು ಎಂಬ ಮಾಹಿತಿಯೇ ತಿಳಿಯದಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಸ್ಟ್ 17ರಿಂದ ಉಮ್ಮವ್ವ ನಾಪತ್ತೆಯಾಗಿದ್ದಾರೆ ಎಂದು ಘೋಷಿಸ ಲಾಗಿತ್ತು. ಗುರುವಾರ ಬೆಳಿಗ್ಗೆ ಹೆಬ್ಬೆಟ್ಟಗೇರಿಯ ಕಡೆಗೆ ತೆರಳಿದ ಎನ್‍ಡಿಆರ್‍ಎಫ್ ತಂಡ ಸ್ಥಳೀಯರ ನೆರವಿನೊಂದಿಗೆ ಶೋಧ ಕಾರ್ಯ ಆರಂಭಿಸಿತು. ಗುಡ್ಡ ಕುಸಿದು ಮನೆ ಧ್ವಂಸಗೊಂಡ ಸ್ಥಳದಿಂದ 50 ಅಡಿ ದೂರದಲ್ಲಿ ಕೆಸರಿನ ನಡುವೆ ಸಿಲುಕಿಕೊಂಡ ಸ್ಥಿತಿಯಲ್ಲಿ ವೃದ್ಧೆ ಉಮ್ಮವ್ವ ಅವರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದವರ ಪತ್ತೆ ಕಾರ್ಯ ವನ್ನು ಶುಕ್ರವಾರವೂ ಮುಂದುವರಿಸಲಾಗುತ್ತಿದ್ದು, ನಾಪತ್ತೆಯಾದವರು ಬದುಕುಳಿದಿರುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

Translate »