ಸೆ. 2ರಂದು ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಹಾಸನ

ಸೆ. 2ರಂದು ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

August 24, 2018

ಹಾಸನ: ಜಿಲ್ಲಾ ಕಲಾವಿದರ ಹಿತಾರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಾವಿದರ ಮಕ್ಕಳಿಗಾಗಿ 2018ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆ. 2ರಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್‍ಎಸ್‍ಎಲ್‍ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಪಡೆಯಬಹುದಾಗಿದೆ.
ಮಾಹಿತಿಗಾಗಿ ಜಿಲ್ಲಾ ಕಲಾವಿದÀರ ಹಿತಾರಕ್ಷಣಾ ಸಮಿತಿಯ ಗೌರವಾಧ್ಯಕ್ಷ ರಂಗಪ್ಪದಾಸ್ ಮೊ. 95919 85483, ಅಧ್ಯಕ್ಷ ಯೆರಹಳ್ಳಿ ಮಂಜೇಗೌಡ ಮೊ. 97411 21925, ಉಪಾಧ್ಯಕ್ಷ ಗ್ಯಾರಂಟಿ ರಾಮಣ್ಣ ಮೊ. 99019 35186 ಹಾಗೂ ಕಾರ್ಯದರ್ಶಿ ಯಲಗುಂಡ ಶಾಂತಕುಮಾರ್ ಮೊ. 94821 06493 ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Translate »