ಹೋಟೆಲ್ ಉದ್ಯಮಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು

ಹೋಟೆಲ್ ಉದ್ಯಮಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

August 2, 2018

ಮೈಸೂರು:ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 17 ಮಂದಿ ವಿದ್ಯಾರ್ಥಿಗಳಿಗೆ ಹೋಟೆಲ್ ಮಾಲೀಕರ ಸಂಘ ಹಾಗೂ ಧರ್ಮದತ್ತಿ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಹೋಟೆಲ್ ದಿ ಪ್ರೆಸಿಡೆಂಟ್ ಸಭಾಂಗಣದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಧರ್ಮದತ್ತಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಧರ್ಮದತ್ತಿ ಸಂಘದ ಅಧ್ಯಕ್ಷ ರವಿಶಾಸ್ತ್ರಿ ಸನ್ಮಾನಿಸಿದರು.

ನಂತರ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಹೋಟೆಲ್ ಉದ್ಯಮಿಗಳ ಮಕ್ಕಳು ಸಹ ಎಂಬಿಬಿಎಸ್, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್‍ಗಳು ಹಾಗೂ ಐಎಎಸ್-ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಅಧ್ಯಯನ ನಡೆಸುತ್ತಿದ್ದಾರೆ. ಈ ಮುಖೇನ ಎಲ್ಲಾ ರಂಗದಲ್ಲೂ ಹೋಟೆಲ್ ಮಾಲೀಕರ ಸಂಘದ ಸದಸ್ಯರ ಮಕ್ಕಳು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರಲ್ಲದೆ, ಇಂದು ನಮ್ಮ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಿ, ದೇಶ ಸೇವೆಗೆ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಗ್ರೀಷ್ಮಾ ರಾಘವನ್, ಎಂ.ಕೆ.ದರ್ಶನ್, ಎಸ್.ಮನೋಜ್, ಎಸ್.ಶರತ್‍ಚಂದ್ರ, ಎನ್.ರೋಹನ್ ಗೋಯಲ್ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕೆ.ಪ್ರಜ್ವಲ್, ಹೆಚ್.ಎಸ್.ಗಗನ್, ಎಂ.ಎಸ್.ನಿತ್ಯಾ, ಆರ್.ತುಷಾರ್, ಎನ್.ಚೇತನ್‍ಗೋಯಲ್, ಎಸ್.ಪ್ರೇರಣಾ, ಸುಹಾಸ್ ದಾಸ್, ಆರ್.ಪ್ರಥಮ್, ಅನನ್ಯ ವಿ.ಶಾಸ್ತ್ರಿ, ಆರ್.ಯಶಸ್ವಿನಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನರಸಿಂಹರಾಜ ಸ್ಪೋಟ್ಸ್ ಕ್ಲಬ್ 2 ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಉದಯ್‍ಶಂಕರ್ ಅವರನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್.ತಂತ್ರಿ, ಜಿ.ಅಶೋಕ್, ಉಗ್ರಯ್ಯ(ಸುರೇಶ್), ಕುಮಾರ್, ಎ.ಎಸ್.ಸತೀಶ್, ಎ.ಆರ್.ರವೀಂದ್ರ ಭಟ್, ಎನ್.ಎಸ್.ಗೋಪಾಲಕೃಷ್ಣ, ಅನಿಲ್‍ಕುಮಾರ್, ಕಿರಣ್ ತಂತ್ರಿ, ಕೆ.ಭಾಸ್ಕರ್‍ಶೆಟ್ಟಿ ಸೇರಿದಂತೆ ಇತರರಿದ್ದರು.

Translate »