ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ

August 2, 2018

ಮೈಸೂರು: ಇಬ್ಬರು ಖದೀಮರನ್ನು ಬಂಧಿಸಿರುವ ಮೈಸೂರಿನ ಮೇಟಗಳ್ಳಿ ಪೊಲೀಸರು 3 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿ ದ್ದಾರೆ. ಮೈಸೂರು ತಾಲೂಕು ಶ್ಯಾದನಹಳ್ಳಿ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಿದ್ದ ಎಂ.ಗಿರೀಶ್ ಅಲಿಯಾಸ್ ಪುಟ್ಟ (22) ಮತ್ತು ಬೆಂಗಳೂರಿನ ದೊಡ್ಡಗೊಲ್ಲರಹಟ್ಟಿಯ ಮುನೇಶ್ವರ ಬಡಾವಣೆ ನಿವಾಸಿ ಜಿ.ಗಿರೀಶ್ (19) ಬಂಧಿತ ಖದೀಮರಾಗಿದ್ದು, ರಿಂಗ್ ರಸ್ತೆಯ ಅಕ್ಷಯ ಪ್ಯಾಲೆಸ್ ಹೋಟೆಲ್ ಬಳಿ 2 ದ್ವಿಚಕ್ರ ವಾಹನಗಳೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಇವರು ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಹಾಗು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಕಳವು ಮಾಡಿರುವುದು ಪತ್ತೆಯಾಗಿದೆ.

ಇವರಿಬ್ಬರನ್ನು ಬಂಧಿಸಿದ ಪೊಲೀಸರು ಅವರಿಂದ ಯಮಹಾ ಎಫ್‍ಜೆಡ್, ಬಜಾಜ್ ಪಲ್ಸರ್ 220ಸಿಸಿ ಮತ್ತು ಬಜಾಜ್ ಕೆಟಿಎಂ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ.ಅಮಟಿ ಮಾರ್ಗ ದರ್ಶನದಲ್ಲಿ ಎಸ್‍ಆರ್ ವಿಭಾಗ ಎಸಿಪಿ ಗೋಪಾಲ್ ನೇತೃತ್ವದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಟಿ.ಸುನೀಲ್‍ಕುಮಾರ್, ಸಬ್ ಇನ್ಸ್‍ಪೆಕ್ಟರ್ ವಿಶ್ವನಾಥ್, ಎಎಸ್‍ಐ ಶಿವಶಂಕರ್, ಸಿಬ್ಬಂದಿಗಳಾದ ಲಿಂಗರಾಜಪ್ಪ, ಗಣೇಶ್, ಮಹದೇವಪ್ಪ, ಸುರೇಶ್, ಹರೀಶ್, ಅಶೋಕ್, ಜೀವನ್, ಚಂದ್ರಕಾಂತ ತಳವಾರ್, ರವೀಂದ್ರ ಮತ್ತು ಆಶಾ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜೂಜುಕೋರರ ಬಂಧನ: ಮೈಸೂರಿನ ದೇವೇಗೌಡ ವೃತ್ತದ ಬಳಿಯಿರುವ ಗುಜುರಿ ಹಿಂಭಾಗ ಜೂಜಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ ಆಲನಹಳ್ಳಿ ಪೊಲೀಸರು 2,540 ರೂ. ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸ್, ಕಾಂತರಾಜು, ಜೈರಾಮ್, ಕಿರಣ್, ಶ್ರೀನಿವಾಸ್, ನವೀನ್, ಸಂತೋಷ್ ಬಂಧಿತರಾಗಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕೆ.ಎಂ.ಮಂಜು, ಸಿಬ್ಬಂದಿಗಳಾದ ಶಿವಪ್ರಸಾದ್, ಮಾಣಿಕ್, ರಂಗನಾಥ್, ಮಹೇಶ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »