ಗರುಡಾ ಮಾಲ್‍ನಲ್ಲಿ ಪಿವಿಆರ್ ಪ್ರಾರಂಭ
ಮೈಸೂರು

ಗರುಡಾ ಮಾಲ್‍ನಲ್ಲಿ ಪಿವಿಆರ್ ಪ್ರಾರಂಭ

August 2, 2018

ಮೈಸೂರು:  ದೇಶದ ಅತಿದೊಡ್ಡ ಚಿತ್ರಮಂದಿರ ಜಾಲವಾದ ಪಿವಿಆರ್ ಸಿನಿಮಾಸ್ ತನ್ನ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಕೆ.ಆರ್. ಸರ್ಕಲ್ ಸಮೀಪವಿರುವ ಗರುಡಾಮಾಲ್‍ನಲ್ಲಿ ಸೋಮವಾರ ಪ್ರಾರಂಭಿಸಿದೆ.

ಪಿವಿಆರ್ ಸಿನಿಮಾಸ್ ವ್ಯವಸ್ಥಾಪಕ ರಘುನಾಥ್ ಅವರು ನಾಲ್ಕು ಪರದೆಗಳನ್ನೊಳಗೊಂಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನಾಲ್ಕು ಆಡಿಟೋರಿಯಂಗಳು 911 ಆಸನಗಳ ಸಾಮಥ್ರ್ಯವನ್ನು ಹೊಂದಿದ್ದು ವಿಶ್ವ ದರ್ಜೆಯ ಸಿನಿಮಾ ಫೀಚರ್‍ಗಳಾದ 4ಕೆ ಪ್ರೊಜೆಕ್ಷನ್, ಡಾಲ್ಬಿ 7.1 ಸರೌಂಡ್ ಸೌಂಡ್ ಹಾಗೂ ಮುಂದಿನ ಪೀಳಿಗೆಯ 3ಅಡಿ ತಂತ್ರಜ್ಞಾನದೊಂದಿಗೆ ಉತ್ಕøಷ್ಟ ದೃಶ್ಯ ಮತ್ತು ಶ್ರವಣ ಗುಣ ಮಟ್ಟವನ್ನು ಹೊಂದಿದೆ ಎಂದು ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದ ಸಿನಿಮಾ ಪ್ರೊಜೆಕ್ಷನ್ ಮತ್ತು ಆಡಿಯೋ ತಂತ್ರಜ್ಞಾನವುಳ್ಳ 4 ಪರದೆಗಳ ಮಲ್ಟಿಪ್ಲೆಕ್ಸ್‍ನ ಎರಡು ಸ್ಕ್ರೀನ್‍ಗಳು ಗರಿಷ್ಟ 265 ಆಸನಗಳು, ಉಳಿದೆರೆಡು ಸ್ಕ್ರೀನ್‍ನಲ್ಲಿ ಕನಿಷ್ಟ 190 ಆಸನಗಳ ಸಾಮಥ್ರ್ಯ ಹೊಂದಿರುತ್ತದೆ. ವಾರದ ದಿನಗಳಲ್ಲಿ ಎಲ್ಲಾ ಭಾಷೆಯ ಸಿನಿಮಾಗಳಿಗೆ 100 ರೂ. ದರ ನಿಗದಿಪಡಿಸಲಾಗಿದ್ದು ವಾರಾಂತ್ಯದಲ್ಲಿ ರೂ.150 ಆಗಲಿದೆ. 3ಡಿ ಸಿನಿಮಾಗಳಿಗೆ ಸ್ವಲ್ಪ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಚೀಫ್ ಇಂಜಿನಿಯರ್ ಭರತ್, ಸಿನಿಮಾ ವ್ಯವಸ್ಥಾಪಕ ಸಂಜಯ್‍ರಾವತ್ ಉಪಸ್ಥಿತರಿದ್ದರು.

Translate »