ಮೈಸೂರು: ದೇಶದ ಅತಿದೊಡ್ಡ ಚಿತ್ರಮಂದಿರ ಜಾಲವಾದ ಪಿವಿಆರ್ ಸಿನಿಮಾಸ್ ತನ್ನ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಕೆ.ಆರ್. ಸರ್ಕಲ್ ಸಮೀಪವಿರುವ ಗರುಡಾಮಾಲ್‍ನಲ್ಲಿ ಸೋಮವಾರ ಪ್ರಾರಂಭಿಸಿದೆ. ಪಿವಿಆರ್ ಸಿನಿಮಾಸ್ ವ್ಯವಸ್ಥಾಪಕ ರಘುನಾಥ್ ಅವರು ನಾಲ್ಕು ಪರದೆಗಳನ್ನೊಳಗೊಂಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನಾಲ್ಕು ಆಡಿಟೋರಿಯಂಗಳು 911 ಆಸನಗಳ ಸಾಮಥ್ರ್ಯವನ್ನು ಹೊಂದಿದ್ದು ವಿಶ್ವ ದರ್ಜೆಯ ಸಿನಿಮಾ ಫೀಚರ್‍ಗಳಾದ 4ಕೆ ಪ್ರೊಜೆಕ್ಷನ್, ಡಾಲ್ಬಿ 7.1 ಸರೌಂಡ್ ಸೌಂಡ್ ಹಾಗೂ ಮುಂದಿನ ಪೀಳಿಗೆಯ 3ಅಡಿ ತಂತ್ರಜ್ಞಾನದೊಂದಿಗೆ ಉತ್ಕøಷ್ಟ ದೃಶ್ಯ ಮತ್ತು…