ಗಾಂಜಾ ಮಾರುತ್ತಿದ್ದ ಖದೀಮನ ಬಂಧನ: 1 ಕೆ.ಜಿ 223 ಗ್ರಾಂ ಗಾಂಜಾ ವಶ
ಮೈಸೂರು

ಗಾಂಜಾ ಮಾರುತ್ತಿದ್ದ ಖದೀಮನ ಬಂಧನ: 1 ಕೆ.ಜಿ 223 ಗ್ರಾಂ ಗಾಂಜಾ ವಶ

January 31, 2020

ಮೈಸೂರು: ಗಾಂಜಾ ಮಾರಾಟ ಮಾಡು ತ್ತಿದ್ದ ಖದೀಮನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು 1 ಕೆ.ಜಿ 223 ಗ್ರಾಂ ಗಾಂಜಾ, 2750 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಡಿಮೊಹಲ್ಲಾದ ಸೈಯ್ಯದ್ ಇರ್ಫಾನ್ (33) ಬಂಧಿತ ಆರೋಪಿ. ಈತ ಜನವರಿ 29ರಂದು ಮಧ್ಯಾಹ್ನ ಕೆ.ಟಿ. ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 1 ಕೆ.ಜಿ 223 ಗ್ರಾಂ ಗಾಂಜಾ, 2750 ರೂ. ಹಣವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಂಡಿ ಠಾಣೆ ಇನ್ಸ್‍ಸ್ಪೆಕ್ಟರ್ ನಾರಾಯಣಸ್ವಾಮಿ ತಿಳಿಸಿದ್ದಾರೆ.

Translate »