ಮೈಸೂರು ಜಿಲ್ಲಾ ಪೊಲೀಸರಿಂದ ‘ಸುಭಾಹು’ ಇ-ಬೀಟ್ ವ್ಯವಸ್ಥೆ ಜಾರಿ
ಮೈಸೂರು

ಮೈಸೂರು ಜಿಲ್ಲಾ ಪೊಲೀಸರಿಂದ ‘ಸುಭಾಹು’ ಇ-ಬೀಟ್ ವ್ಯವಸ್ಥೆ ಜಾರಿ

January 28, 2020

ಮೈಸೂರು: ಇದೇ ಪ್ರಥಮ ಬಾರಿ ಮೈಸೂರು ಜಿಲ್ಲಾ ಪೊಲೀಸರು ‘ಸುಭಾಹು’ ನೂತನ ಇ-ಬೀಟ್ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ.

ರಾತ್ರಿ ಗಸ್ತು ಚುರುಕುಗೊಳಿಸಿ ಮನೆ ಕಳವು, ದೇವಸ್ಥಾನ ಕಳವು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ತಾವು ಬಾಗಲ ಕೋಟೆಯಲ್ಲಿದ್ದಾಗ ಅನುಷ್ಠಾನಗೊಳಿಸಿದ ಇ-ಬೀಟ್ ಸುಭಾಹುವನ್ನು ಇದೀಗ ಮೈಸೂರು ಜಿಲ್ಲೆಯಲ್ಲೂ ಜಾರಿಗೊಳಿಸಿದ್ದಾರೆ.

ಭಾನುವಾರ ಮೈಸೂರಿನ ಬನ್ನಿ ಮಂಟಪದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನೂತನ ಇ-ಬೀಟ್ ಸಿಸ್ಟಂ ಅನ್ನು ಉದ್ಘಾಟಿ ಸಿದರು. ಬೆಂಗಳೂರು ಮೂಲದ ಸುಭಾಹು ಕಂಪನಿಯು ಈ ಸಾಫ್ಟ್‍ವೇರ್ ಆ್ಯಪ್ (ಅಪ್ಲಿ ಕೇಷನ್) ಅನ್ನು ಸಿದ್ಧಗೊಳಿಸಿರುವುದ ರಿಂದ ಅದಕ್ಕೆ `ಸುಭಾಹು’ ಇ -ಬೀಟ್ ಎಂದೇ ಕರೆಯಲಾಗಿದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

ಮೈಸೂರು ಗ್ರಾಮಾಂತರ ಉಪ ವಿಭಾಗ ದಲ್ಲಿ 182, ಹುಣಸೂರು ಉಪವಿಭಾಗ ದಲ್ಲಿ 240 ಹಾಗೂ ನಂಜನಗೂಡು ಉಪ ವಿಭಾಗದಲ್ಲಿ 137 ಸೇರಿದಂತೆ ಜಿಲ್ಲೆಯಾ ದ್ಯಂತ ಒಟ್ಟು 559 ಬೀಟ್ ಪಾಯಿಂಟ್ ಗಳಲ್ಲಿ ಈ ಕ್ಯೂ-ಆರ್ ಆ್ಯಪ್ ಅನ್ನು ಅಳ ವಡಿಸಲಾಗಿದ್ದು, ಒಂದು ಪಾಯಿಂಟ್‍ನಿಂದ ಮತ್ತೊಂದು ಪಾಯಿಂಟ್‍ಗೆ 20 ನಿಮಿಷ ಗಳ ಅಂತರದ ಅವಧಿಯನ್ನು ನಿಗದಿಗೊಳಿಸ ಲಾಗಿದೆ. ನಿಯೋಜಿತ ಬೀಟ್ ಪೊಲೀಸ್ ಕಾನ್‍ಸ್ಟೇಬಲ್ ಒಂದು ಪಾಯಿಂಟ್‍ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಾಫ್ಟ್‍ವೇರ್ ಆಪ್ ನಿಂದ ಕ್ಯೂ ಆರ್ ಆಪ್‍ನಲ್ಲಿ ಸ್ಕ್ಯಾನ್ ಮಾಡಿದ ತಕ್ಷಣ ಮತ್ತೊಂದು ಪಾಯಿಂಟ್‍ಗೆ ಹೋಗಿ ಸ್ಕ್ಯಾನ್ ಮಾಡಿದರೆ ಅದು ತಿರಸ್ಕರಿಸುತ್ತದೆ. 20 ನಿಮಿಷದ ನಂತರ ವಷ್ಟೇ ಸ್ಕ್ಯಾನ್ ಮಾಡಬೇಕು.

ಅಂದರೆ ಬೀಟ್ ಕಾನ್‍ಸ್ಟೇಬಲ್‍ಗಳು ತಮ್ಮ ವ್ಯಾಪ್ತಿಯಲ್ಲೇ ಗಸ್ತು ತಿರುಗುತ್ತಿರಬೇಕು, ತಮಗೆ ಹಂಚಿಕೆಯಾಗಿರುವ ಮಾರ್ಗ ದಲ್ಲೇ ಖುದ್ದು ಹಾಜರಿರಬೇಕು. ಪೊಲೀ ಸರ ಹಾಜರಾತಿ ಇದ್ದರೆ ಸರಹದ್ದಿನಲ್ಲಿ ಯಾವುದೇ ಅಪರಾಧಗಳು ನಡೆಯುವುದಿಲ್ಲ ಎಂಬುದೇ ನೂತನ ಇ -ಬೀಟ್ ಸಿಸ್ಟಂ ಅಳವಡಿಸಿರುವ ಮೂಲ ಉದ್ದೇಶವಾಗಿದೆ.

ಸ್ಕ್ಯಾನ್ ಮಾಡಿದ ತಕ್ಷಣ ಕ್ಯೂ ಆರ್ ಕೋಡ್‍ನಿಂದ ಮಾಹಿತಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ವೈರ್‍ಲೆಸ್ ಕಂಟ್ರೋಲ್ ರೂಂಗೆ ಲಭ್ಯವಾಗುತ್ತದೆ. ಸದರಿ ಬೀಟ್ ಕಾನ್‍ಸ್ಟೇಬಲ್ ಇರುವ ಹಾಗೂ ಹೋಗು ತ್ತಿರುವ ಸ್ಥಳದ ಟ್ರ್ಯಾಕ್ ಸಹ ತಿಳಿಯುತ್ತದೆ. ಈ ಪದ್ಧತಿಯಿಂದ ಬೀಟ್ ಪೊಲೀಸರು ತಮ್ಮ ಸರಹದ್ದಿನ ರೂಟ್‍ನಲ್ಲಿ ಖುದ್ದು ಹಾಜ ರಿರಲೇಬೇಕಾಗುತ್ತದೆ. ಸಬೂಬು ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಇದರಿಂದ ಕರ್ತವ್ಯ ಸಾಮಥ್ರ್ಯ ಹೆಚ್ಚಾಗಿ ಪರಿಣಾಮಕಾರಿಯಾಗಿ ಬೀಟ್ ಪೆಟ್ರೋಲಿಂಗ್ ಮಾಡಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ವಾಗುತ್ತದೆ ಎಂಬುದು ಎಸ್ಪಿ ರಿಷ್ಯಂತ್ ಅವರ ಉದ್ದೇಶವಾಗಿದೆ. ಜಿಪಿಎಸ್ ಆಧಾ ರದ ಇಮೇಜ್ ಶೇರಿಂಗ್ ಅಪ್ಲಿಕೇಷನ್ ಇದಾಗಿದ್ದು, ಬೀಟ್ ಕರ್ತವ್ಯದ ಬಗ್ಗೆ ಆಗಿಂದಾಗ್ಗೆ ಮಾಹಿತಿ, ಸಂದೇಶ, ನೋಟಿ ಫಿಕೇಷನ್‍ಗಳನ್ನು ವೈರ್‍ಲೆಸ್ ಕಂಟ್ರೋಲ್ ರೂಂಗೆ ಪೂರೈಸುತ್ತದೆ. ಬಾಗಲಕೋಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲ್ಲಿ ಜಾರಿಯಲ್ಲಿರುವ ಸುಭಾಹು ಇ-ಬೀಟ್ ಸಿಸ್ಟಂ ಅನ್ನು ಮೈಸೂರು ಜಿಲ್ಲೆಗೂ ಪರಿಚಯಿಸಲಾಗಿದೆ.

Translate »