ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆಗೀಡಾಗಿದ್ದ ವಾಲೆ ಮಹೇಶ ಸಾವು
ಮೈಸೂರು

ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆಗೀಡಾಗಿದ್ದ ವಾಲೆ ಮಹೇಶ ಸಾವು

January 28, 2020

ಆತನ ಕೋರಿಕೆಯಂತೆ ಪುತ್ರಿಗೆ ಪಾರ್ಥಿವ ಶರೀರ ದರ್ಶನ

ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆಕೆಗೆ ಹೆಣ್ಣು ಮಗು ಜನನಕ್ಕೆ ಕಾರಣನಾಗಿ ಪೋಕ್ಸೋ ಪ್ರಕರಣದಡಿ ಜೀವಾ ವಧಿ ಶಿಕ್ಷೆಗೊಳಗಾಗಿದ್ದ ಮೈಸೂರಿನ ವಾಲೆ ಮಹೇಶ (36) ಸೋಮವಾರ ಮುಂಜಾನೆ ಅಸುನೀಗಿದ್ದಾನೆ.

2017ರ ಡಿಸೆಂಬರ್ 21ರಂದು ಮೈಸೂರು ನ್ಯಾಯಾಲಯವು ಆರೋಪಿ ಮಹೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲುವಾಸ ಅನುಭವಿಸುತ್ತಿದ್ದ ಆತ ಕರುಳು ಬೇನೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಗೆಂದು ಪೆರೋಲ್ ಮೇಲೆ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ.

ಫೆಬ್ರವರಿ ಮೊದಲ ವಾರ ಮತ್ತೆ ಜೈಲಿಗೆ ಹೋಗಬೇಕಿದ್ದ ಮಹೇಶ, ಚಿಕಿತ್ಸೆ ಫಲಕಾರಿ ಯಾಗದೆ ಇಂದು ಮುಂಜಾನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮನೆಯವರು ಇಂದು ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಮಹೇಶನ ಅಂತ್ಯಕ್ರಿಯೆ ನೆರವೇರಿಸಿದರು. ಆತನ ಕೋರಿಕೆ ಯಂತೆ ಸಂತ್ರಸ್ತ ಅಪ್ರಾಪ್ತೆಗೆ ಜನಿಸಿದ್ದ 5 ವರ್ಷದ ಪುತ್ರಿಗೆ ಮಹೇಶನ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿಸಿ, ಬಾಲಕಿಯ ಅಜ್ಜಿ ಮಾನವೀಯತೆ ಮೆರೆದಿದ್ದಾರೆ. ಪೆರೋಲ್ ಮೇಲೆ ಹೊರ ಬಂದು ಪಿಕೆಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ತಾನು ಸತ್ತರೆ ಬಾಲಕಿ ಕರೆ ತಂದು ನನ್ನ ಮುಖದರ್ಶನ ಮಾಡಿಸಿದ ನಂತರವೇ ಅಂತ್ಯಕ್ರಿಯೆ ಮಾಡಿ ಎಂದು ವಾಲೆ ಮಹೇಶ ತನ್ನ ತಂದೆ ಮತ್ತು ತಂಗಿಯಲ್ಲಿ ಕೇಳಿಕೊಂಡಿದ್ದನಂತೆ

ಅದರಂತೆ ತಂದೆ ಮತ್ತು ತಂಗಿ, ಬಾಲಕಿಯ ಅಜ್ಜಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ಬಾಲಕಿ ಕರೆತರುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಆಕೆ ತನ್ನ ಮೊಮ್ಮಗಳನ್ನು ಕರೆದೊಯ್ದು ಮಹೇಶನ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿಸಿ, ಕರೆದೊಯ್ದ ರಂತೆ. ಮಾಡಿದ ತಪ್ಪಿಗೆ ಮರುಗಿದ್ದ ಮಹೇಶ್, ಕನಿಷ್ಠ ತನ್ನ ಮಗುವಿಗೆ ತಂದೆಯ ಅಸ್ತಿತ್ವ ದರ್ಶನ ಮಾಡಿಸುವ ಕೊನೆ ಆಸೆ ಈಡೇರಿಸಿಕೊಂಡಿದ್ದಾನೆ. ಆದರೆ ತನ್ನನ್ನು ಶಾಶ್ವತ ಶಿಕ್ಷೆಗೆ ಗುರಿ ಮಾಡಿದ ಮಹೇಶನ ದರ್ಶನಕ್ಕೆ ಬಾಲಕಿ ತಾಯಿ ಮುಂದಾಗಲಿಲ್ಲ. ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದ ಸಂತ್ರಸ್ತೆ (ಈಗ ಪ್ರಾಪ್ತಳಾಗಿದ್ದಾರೆ) ಶಿಕ್ಷಣ ಮುಂದುವರಿ ಸಿದ್ದು, ಎಲ್‍ಎಲ್‍ಬಿ ಓದುತ್ತಿದ್ದಾರೆ. ತಾನು ನ್ಯಾಯಾಧೀಶೆಯಾಗಬೇಕು, ಅನ್ಯಾಯಕ್ಕೊಳ ಗಾದವರಿಗೆ ನ್ಯಾಯ ಒದಗಿಸಬೇಕೆಂಬ ಛಲ ತೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »