ಮೈಸೂರು: ಇದೇ ಪ್ರಥಮ ಬಾರಿ ಮೈಸೂರು ಜಿಲ್ಲಾ ಪೊಲೀಸರು ‘ಸುಭಾಹು’ ನೂತನ ಇ-ಬೀಟ್ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ. ರಾತ್ರಿ ಗಸ್ತು ಚುರುಕುಗೊಳಿಸಿ ಮನೆ ಕಳವು, ದೇವಸ್ಥಾನ ಕಳವು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ತಾವು ಬಾಗಲ ಕೋಟೆಯಲ್ಲಿದ್ದಾಗ ಅನುಷ್ಠಾನಗೊಳಿಸಿದ ಇ-ಬೀಟ್ ಸುಭಾಹುವನ್ನು ಇದೀಗ ಮೈಸೂರು ಜಿಲ್ಲೆಯಲ್ಲೂ ಜಾರಿಗೊಳಿಸಿದ್ದಾರೆ. ಭಾನುವಾರ ಮೈಸೂರಿನ ಬನ್ನಿ ಮಂಟಪದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನೂತನ…