ಕರೋನಾ ವೈರಸ್ ಆತಂಕ: ಆಸ್ಪತ್ರೆಗೆ ದಾಖಲಾದ ಇಬ್ಬರು ಬೆಂಗಳೂರಿಗರು
ಮೈಸೂರು

ಕರೋನಾ ವೈರಸ್ ಆತಂಕ: ಆಸ್ಪತ್ರೆಗೆ ದಾಖಲಾದ ಇಬ್ಬರು ಬೆಂಗಳೂರಿಗರು

January 28, 2020

ಬೆಂಗಳೂರು: ಚೀನಾ ಪ್ರವಾಸ ಹೋಗಿದ್ದ ಇಬ್ಬರು ಭಾರತೀಯರನ್ನು ಕರೋನಾ ವೈರಸ್ ಸೋಂಕು ತಗಲಿದ ಶಂಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಕಾರಿ ಆಸ್ಪತ್ರೆ ಯೊಂದಕ್ಕೆ ದಾಖಲಿಸಲಾಗಿದೆ. ಚೀನಾಕ್ಕೆ ಪ್ರವಾಸಕ್ಕೆ ತೆರಳಿದ್ದ ಈ ಇಬ್ಬರು ಜ.18ರಂದು ನಗರಕ್ಕೆ ಮರಳಿದ್ದರು. ಭಾನುವಾರ ರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ) ಸಂಸ್ಥೆಗೆ ಕಳುಹಿಸಿದ್ದು, ವರದಿಗೆ ಕಾಯಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚೀನಾದಿಂದ ರಾಜ್ಯಕ್ಕೆ ಬರುತ್ತಿರುವವರ ಮೇಲೆ ನಿಗಾ ಇರಿಸಿದೆ. ಇತ್ತೀಚೆಗೆ ಚೀನಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ಮಾಡಲಾಗಿತ್ತು. ಅವರಿಗೆ ಕರೋನಾ ಸೋಂಕು ಇಲ್ಲ ಎಂದು ತಿಳಿದು ಬಂದಿರುವುದ ರಿಂದ ಆತಂಕ ದೂರವಾಗಿದೆ. ಇನ್ನೂ 4 ಚೀನಾ ನಾಗರಿಕರು ರಾಜ್ಯಕ್ಕೆ ಬಂದು ನೆಲೆಸಿದ್ದಾರೆ. ಚೀನಾ ಪ್ರವಾಸ ಹೋಗಿದ್ದ ಇಬ್ಬರು ಭಾರತೀಯರು ರಾಜ್ಯಕ್ಕೆ ಮರಳಿದ್ದಾರೆ. ಈ ಆರು ಮಂದಿಯೊಂದಿಗೆ ಆರೋಗ್ಯ ಇಲಾಖೆಯು ನಿರಂತರ ಸಂಪರ್ಕದಲ್ಲಿದ್ದು, 28 ದಿನಗಳವರೆಗೆ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ.

ಸಹಾಯ ಕೇಂದ್ರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸಹಾಯ ಕೇಂದ್ರ ಆರಂಭಿಸಿದ್ದು, ಜ.21 ರಿಂದ ಈವರೆಗೆ ಚೀನಾದಿಂದ ಬಂದ 2,572 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್‍ಗೆ ಒಳಪಡಿಸಿ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ವಿದೇಶಗಳಿಂದ ಬರುವ ಪ್ರಯಾಣಿಕರು ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆಗೆ ಒಳಗಾ ದರೆ ಸಹಾಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗು ತ್ತಿದೆ. ಚೀನಾದಿಂದ ಬರುವ ಪ್ರಯಾಣಿಕರನ್ನು ಅಧಿಕಾರಿಗಳೇ ತಪಾಸಣೆಗೆ ಒಳ ಪಡಿಸುತ್ತಿದ್ದಾರೆ. ಚೀನಾದಿಂದ ಬಂದ ಪ್ರಯಾಣಿಕರೊಂದಿಗೆ 28 ದಿನಗಳವರೆಗೆ ನಿರಂತರ ಸಂಪರ್ಕದಲ್ಲಿ ಇರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »