ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ
ಹಾಸನ

ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ

August 17, 2018

ಸಕಲೇಶಪುರ: ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬೆಂಗಳೂರು-ಮಂಗಳೂರು (ಎನ್‍ಎಚ್-75) ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ರಸ್ತೆ ಬದಿಯ ಪ್ರಪಾತಕ್ಕೆ ಮಗುಚಿ ಕ್ಲೀನರ್ ಸಾವನ್ನಪ್ಪಿದ್ದು, ಚಾಲಕನಿಗಾಗಿ ಶೋಧ ನಡೆದಿದೆ.

ರಾಯಚೂರು ಮೂಲದ ಕ್ಲೀನರ್ ವೆಂಕಟೇಶ್ ಮೃತರು. ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಆನೆಗೊಳ ಮೂಲದ ಟ್ಯಾಂಕರ್ ಚಾಲಕ ಸಂತೋಷ್(32) ಗಾಗಿ ಶೋಧ ನಡೆದಿದೆ. ರಾತ್ರಿ 9ರ ಸಮಯದಲ್ಲಿ ದೊಡ್ಡತಪ್ಪಲೆ ಗ್ರಾಮದಲ್ಲಿ ಕಾಫಿ ತೋಟ ವೊಂದರಿಂದ ಭಾರಿ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಜಾರಿ ಬಂದ ಪರಿಣಾಮ, ಮಂಗಳೂರು ಕಡೆಯಿಂದ ಬರು ತ್ತಿದ್ದ ಗ್ಯಾಸ್ ಟ್ಯಾಂಕರ್ ಸುಮಾರು 200 ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದೆ. ತಳಭಾಗದಲ್ಲಿ ಹಾಸನ-ಮಂಗಳೂರು ರೈಲು ಮಾರ್ಗವಿದ್ದು, ಪಕ್ಕದ ಆಳದ ನೀರು ತುಂಬಿದ ಗುಂಡಿಯೊಳಗೆ ಬಿದ್ದ ಟ್ಯಾಂಕರ್‍ನ ಎಂಜಿನ್ ಮುಳುಗಿದೆ.

ನೀರು ಮತ್ತು ಮಣ್ಣಿನೊಳಗೆ ಹುದುಗಿ ರುವ ಸಂತೋಷ್ ಹಾಗೂ ಲಾರಿ ಎಂಜಿನ್‍ಗೆ ಶೋಧ ನಡೆಸಲಾಗಿದ್ದು, ಮಣ್ಣು ಹಾಗೂ ನೀರು ತುಂಬಿರುವ ಗುಂಡಿಯನ್ನು ಖಾಲಿ ಮಾಡಲು ಪ್ರಯತ್ನ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ

Translate »