ಜಮೀನು ವಿವಾದ: ಮಚ್ಚಿನಿಂದ ಹಲ್ಲೆ
ಮೈಸೂರು

ಜಮೀನು ವಿವಾದ: ಮಚ್ಚಿನಿಂದ ಹಲ್ಲೆ

September 20, 2018

ಸಕಲೇಶಪುರ:  ಜಮೀನು ಒತ್ತುವರಿ ಹಿನ್ನೆಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಸಿಂಗೋಡನಹಳ್ಳಿಯಲ್ಲಿ ನಡೆದಿದೆ.ಗ್ರಾಮದ ರಂಗೇಗೌಡ ಎಂಬುವರ ಮೇಲೆ ಮಂಜೇಗೌಡ ಎಂಬುವವರು ಹಲ್ಲೆ ಮಾಡಿದ್ದಾರೆ. ಜಮೀನು ಒತ್ತುವರಿ ಕುರಿತು ಕೆಲ ದಿನಗಳ ಹಿಂದೆ ರಂಗೇ ಗೌಡ ಹಾಗೂ ಮಂಜೇಗೌಡರ ಮಧ್ಯೆ ಜಗಳ ನಡೆದಿತ್ತು. ಮಂಗಳವಾರ ಸಂಜೆ ರಂಗೇಗೌಡ ದನ ಮೇಯಿಸಿ ಹಿಂದಿರು ಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿದ ಮಂಜೇ ಗೌಡ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ರಂಗೇ ಗೌಡರ ಬಲ ಕಿವಿಗೆ ಏಟಾಗಿದೆ. ಗಾಯಗೊಂಡ ರಂಗೇ ಗೌಡರನ್ನು ಪಟ್ಟಣದ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಪಟ್ಟಣ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Translate »