ಸಕಲೇಶಪುರ ಬಳಿ ರಸ್ತೆ, ಗುಡ್ಡ ಕುಸಿತ
ಹಾಸನ

ಸಕಲೇಶಪುರ ಬಳಿ ರಸ್ತೆ, ಗುಡ್ಡ ಕುಸಿತ

August 19, 2018

ಸಕಲೇಶಪುರ:  ವಾರದಿಂದ ಸುರಿ ಯುತ್ತಿರುವ ಮಳೆಯಿಂದ ತಾಲೂಕಿನ ಬಳಿ ರಸ್ತೆ, ಗುಡ್ಡ ಕುಸಿದಿರುವ ಪರಿಣಾಮ ರೈಲು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ವರುಣನ ಆರ್ಭಟ ಮತ್ತು ನೀರಿನ ರಭಸಕ್ಕೆ ಮಣ್ಣಿನ ಸವಕಳಿ ಉಂಟಾಗಿದ್ದು ಹಲವೆಡೆ ರೈಲ್ವೇ ಸೇತುವೆಗಳು ಕೊಚ್ಚಿ ಹೋಗಿವೆ. ಅಷ್ಟೇ ಅಲ್ಲದೇ ಜಿಲ್ಲಾ ಗಡಿ ಭಾಗಗಳಲ್ಲಿ ಮತ್ತೆ ಭೂ ಕುಸಿತ ಉಂಟಾ ಗಿದ್ದು, ಸಕಲೇಶಪುರದ ಮಾಗೇರಿ ರಸ್ತೆ ಕುಸಿದು, ಪರಿಣಾಮ ಬಸ್ಸೊವೊಂದು ಸಿಲುಕಿಕೊಂಡಿದೆ. ಇದರಿಂದ ಮಾಗೇರಿ, ಹಾಸನ, ಕೊಡಗು ಗಡಿ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ ಯಡಕುಮಾರಿ ಮತ್ತು ಸುಬ್ರಹ್ಮಣ್ಯ ನಡುವಿನ ರೈಲ್ವೆ ಹಳಿ ಭಾರಿ ಗ್ರಾಮ ಗುಡ್ಡ ಕುಸಿದಿದ್ದು, ರೈಲ್ವೇ ಸಂಚಾರ ಸ್ಥಗಿತಗೊಳಿ ಸಲಾಗಿದೆ. ಹಳಿ ಮೇಲಿನ ಅವಶೇಷಗಳ ತೆರವಿಗೆ ಇನ್ನೂ ತಿಂಗಳ ಕಾಲ ಇಡಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Translate »