Tag: Sakleshpur

ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು
ಮೈಸೂರು

ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು

December 1, 2018

ಸಕಲೇಶಪುರ: ವಾಟ್ಸಪ್ ಸಂದೇಶದಿಂದ ಮದುವೆಯೊಂದು ಮುರಿದು ಬಿದ್ದಿದ್ದು, ವಧುವಿನ ಜೊತೆ ಇದ್ದ ಫೋಟೋಗಳನ್ನು ವರನಿಗೆ ವಾಟ್ಸಪ್ ಮಾಡಿದ್ದ ಪ್ರಿಯಕರನೇ ಆಕೆಯನ್ನು ಮದುವೆಯಾದ ಘಟನೆ ಸಕಲೇಶಪುರದ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದ ಶ್ರುತಿ ಮತ್ತು ಬೈಕೆರೆ ಗ್ರಾಮದ ಯೋಧ ತಾರೇಶ್ ವಿವಾಹ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿತ್ತು. ಮಾಂಗಲ್ಯ ಧಾರಣೆಗೆ ಕೆಲ ಗಂಟೆಗಳ ಮುನ್ನ ಮಧುಮಗ ತಾರೇಶ್ ಮೊಬೈಲ್‍ಗೆ ವಾಟ್ಸಪ್ ಸಂದೇಶ ಬಂದಿದೆ. ಅದರಲ್ಲಿ ಕೆಲವೇ ಗಂಟೆಗಳಲ್ಲಿ ತಾನು ವಿವಾಹವಾಗಬೇಕಾಗಿದ್ದ ವಧು…

ಜಮೀನು ವಿವಾದ: ಮಚ್ಚಿನಿಂದ ಹಲ್ಲೆ
ಮೈಸೂರು

ಜಮೀನು ವಿವಾದ: ಮಚ್ಚಿನಿಂದ ಹಲ್ಲೆ

September 20, 2018

ಸಕಲೇಶಪುರ:  ಜಮೀನು ಒತ್ತುವರಿ ಹಿನ್ನೆಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಸಿಂಗೋಡನಹಳ್ಳಿಯಲ್ಲಿ ನಡೆದಿದೆ.ಗ್ರಾಮದ ರಂಗೇಗೌಡ ಎಂಬುವರ ಮೇಲೆ ಮಂಜೇಗೌಡ ಎಂಬುವವರು ಹಲ್ಲೆ ಮಾಡಿದ್ದಾರೆ. ಜಮೀನು ಒತ್ತುವರಿ ಕುರಿತು ಕೆಲ ದಿನಗಳ ಹಿಂದೆ ರಂಗೇ ಗೌಡ ಹಾಗೂ ಮಂಜೇಗೌಡರ ಮಧ್ಯೆ ಜಗಳ ನಡೆದಿತ್ತು. ಮಂಗಳವಾರ ಸಂಜೆ ರಂಗೇಗೌಡ ದನ ಮೇಯಿಸಿ ಹಿಂದಿರು ಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿದ ಮಂಜೇ ಗೌಡ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ರಂಗೇ ಗೌಡರ ಬಲ ಕಿವಿಗೆ ಏಟಾಗಿದೆ. ಗಾಯಗೊಂಡ ರಂಗೇ ಗೌಡರನ್ನು…

ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸೂಕ್ತ ನೆರವು ಕಲ್ಪಿಸಿ: ಹೆಚ್‍ಡಿಡಿ
ಹಾಸನ

ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸೂಕ್ತ ನೆರವು ಕಲ್ಪಿಸಿ: ಹೆಚ್‍ಡಿಡಿ

August 22, 2018

ಸಕಲೇಶಪುರ:  ಸತತ ಮಳೆಯಿಂದಾಗಿ ಹಾನಿಗೀಡಾಗಿರುವ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ವಿವಿಧ ಇಲಾಖಾಧಿಕಾರಿಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೂಚನೆ ನೀಡಿದರು. ಮಹಾ ಮಳೆಯಿಂದಾಗಿ ಹಾನಿಗೀಡಾಗಿರುವ ತಾಲೂಕಿನ ಉಚ್ಚಂಗಿ, ಹಿಜ್ಜನಹಳ್ಳಿ, ಮಾಗೇರಿ, ಬಿಸಲೆ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರಲ್ಲದೆ, ವಿಕೋಪದಿಂದ ಹಾನಿಗೀಡಾಗಿರುವ ಪ್ರದೇಶಗಳ ಗಂಭೀರತೆಗೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕಳವಳ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ತಾಲೂಕಿನ ವಿವಿಧೆಡೆ ಗುಡ್ಡಗಳು ಕುಸಿ ದಿದ್ದು, ರಸ್ತೆಗಳು ಹಾನಿಗೀಡಾಗಿವೆ. ಜನರು…

ಸಕಲೇಶಪುರ ಬಳಿ ರಸ್ತೆ, ಗುಡ್ಡ ಕುಸಿತ
ಹಾಸನ

ಸಕಲೇಶಪುರ ಬಳಿ ರಸ್ತೆ, ಗುಡ್ಡ ಕುಸಿತ

August 19, 2018

ಸಕಲೇಶಪುರ:  ವಾರದಿಂದ ಸುರಿ ಯುತ್ತಿರುವ ಮಳೆಯಿಂದ ತಾಲೂಕಿನ ಬಳಿ ರಸ್ತೆ, ಗುಡ್ಡ ಕುಸಿದಿರುವ ಪರಿಣಾಮ ರೈಲು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ವರುಣನ ಆರ್ಭಟ ಮತ್ತು ನೀರಿನ ರಭಸಕ್ಕೆ ಮಣ್ಣಿನ ಸವಕಳಿ ಉಂಟಾಗಿದ್ದು ಹಲವೆಡೆ ರೈಲ್ವೇ ಸೇತುವೆಗಳು ಕೊಚ್ಚಿ ಹೋಗಿವೆ. ಅಷ್ಟೇ ಅಲ್ಲದೇ ಜಿಲ್ಲಾ ಗಡಿ ಭಾಗಗಳಲ್ಲಿ ಮತ್ತೆ ಭೂ ಕುಸಿತ ಉಂಟಾ ಗಿದ್ದು, ಸಕಲೇಶಪುರದ ಮಾಗೇರಿ ರಸ್ತೆ ಕುಸಿದು, ಪರಿಣಾಮ ಬಸ್ಸೊವೊಂದು ಸಿಲುಕಿಕೊಂಡಿದೆ. ಇದರಿಂದ ಮಾಗೇರಿ, ಹಾಸನ, ಕೊಡಗು ಗಡಿ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ…

ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ
ಹಾಸನ

ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ

August 17, 2018

ಸಕಲೇಶಪುರ: ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬೆಂಗಳೂರು-ಮಂಗಳೂರು (ಎನ್‍ಎಚ್-75) ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ರಸ್ತೆ ಬದಿಯ ಪ್ರಪಾತಕ್ಕೆ ಮಗುಚಿ ಕ್ಲೀನರ್ ಸಾವನ್ನಪ್ಪಿದ್ದು, ಚಾಲಕನಿಗಾಗಿ ಶೋಧ ನಡೆದಿದೆ. ರಾಯಚೂರು ಮೂಲದ ಕ್ಲೀನರ್ ವೆಂಕಟೇಶ್ ಮೃತರು. ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಆನೆಗೊಳ ಮೂಲದ ಟ್ಯಾಂಕರ್ ಚಾಲಕ ಸಂತೋಷ್(32) ಗಾಗಿ ಶೋಧ ನಡೆದಿದೆ. ರಾತ್ರಿ 9ರ ಸಮಯದಲ್ಲಿ ದೊಡ್ಡತಪ್ಪಲೆ ಗ್ರಾಮದಲ್ಲಿ ಕಾಫಿ ತೋಟ ವೊಂದರಿಂದ ಭಾರಿ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಜಾರಿ ಬಂದ ಪರಿಣಾಮ, ಮಂಗಳೂರು…

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ
ಹಾಸನ

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ

July 25, 2018

ಸಕಲೇಶಪುರ:  ಕಾಡಾನೆ ಹಿಂಡು, ಇಂದು ಬೆಳ್ಳಂಬೆಳಿಗ್ಗೆಯೇ ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಕಾಡಾನೆಗಳ ದಾಳಿಯಿಂದ ತಾಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ಅಚ್ಚನ ಹಳ್ಳಿ, ಬಿಳಿಸಾರೆ, ಅಗನಿ ಗ್ರಾಮಗಳಲ್ಲಿ ಕಾಫಿ, ಬಾಳೆ ತೋಟ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅಚ್ಚನಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಬಗಾನೆ ಮರವನ್ನ ಆನೆಗಳು ಉರುಳಿಸಿವೆ. ಆನೆಗಳು ತೋಟದಲ್ಲಿ ಅಡ್ಡಾದಿಡ್ಡಿ ಓಡಾಟಕ್ಕೆ ನೂರಾರು ಕಾಫಿ ಗಿಡಗಳು ನೆಲಸಮವಾಗಿವೆ. ಸ್ಪ್ರೇ ಮಾಡಲು ಇಟ್ಟಿದ್ದ ಪ್ಲಾಸ್ಟಿಕ್ ಬ್ಯಾರಲ್ ಗಳು ಆನೆ…

ಜಿಪಂ ಉಪಾಧ್ಯಕ್ಷರಾಗಿ ಸುಪ್ರದೀಪ್ ಯಜಮಾನ ಅವಿರೋಧ ಆಯ್ಕೆ
ಹಾಸನ

ಜಿಪಂ ಉಪಾಧ್ಯಕ್ಷರಾಗಿ ಸುಪ್ರದೀಪ್ ಯಜಮಾನ ಅವಿರೋಧ ಆಯ್ಕೆ

July 21, 2018

ಹಾಸನ:  ಜಿಲ್ಲಾ ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಸಕಲೇಶಪುರ ತಾಲೂಕಿನ ಹಾನುಬಾಳು ಕ್ಷೇತ್ರದ ಸುಪ್ರದೀಪ್ ಯಜಮಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಆಯ್ಕೆಯಾದರು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಅವರು ಮೂರು ನಾಮ ಪುತ್ರ ಸಲ್ಲಿಸಿ ದರು. ಕಾಂಗ್ರೆಸ್‍ನ ಶ್ರೇಯಸ್ ಪಟೇಲ್ ಹಾಗೂ ಎಸ್.ಡಿ.ರೇವಣ್ಣ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದರು….

ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ
ಮೈಸೂರು

ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ

July 16, 2018

ಮೈಸೂರು: ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ರಸ್ತೆಯನ್ನು ಇಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ರಾಜಧಾನಿ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಲೋಕಾರ್ಪಣೆ ಮಾಡಿದರು. ತೀವ್ರ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ 12.38 ಕಿ.ಮೀ. ಉದ್ದದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಕಳೆದ ಜನವರಿ 20ರಂದು ಕೈಗೆತ್ತಿಕೊಳ್ಳಲಾಗಿತ್ತು….

ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ
ಹಾಸನ

ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ

July 16, 2018

ಸಕಲೇಶಪುರದ: ಮಲೆನಾಡಿನಲ್ಲಿ ಪುನರ್ವಸು ಮಳೆಯ ಅಬ್ಬರದಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಇಂದು ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದ ಮುಂಭಾಗ ಬಾಗಿನ ಅರ್ಪಿಸಿದರು. ವರುಣನ ಅಬ್ಬರದಿಂದ ಮಲೆನಾಡಿನ ಹಲವೆಡೆ ಕೆರೆ-ಕಟ್ಟೆಗಳು ತುಂಬಿಹರಿಯು ತ್ತಿರುವುದರಿಂದ ಹೇಮಾವತಿ ನದಿಯಲ್ಲೂ ನೀರು ಹೆಚ್ಚಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇಗುಲದ ಮುಂಭಾಗ ಹರಿ ಯುವ ನದಿಯಲ್ಲಿ ಬಾಗಿನ ಸಲ್ಲಿಸಿದರು. ಈಶ್ವರ ದೇವಾಲಯ ಮುಳುಗಡೆ: ನದಿ…

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ
ಹಾಸನ

ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಿ: ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ

July 9, 2018

ಹಾಸನ:  ಹಾಸನ ಜಿಲ್ಲೆ ಸೇರಿದಂತೆ ಬಯಲುಸೀಮೆಯ ವಿವಿಧ ಭಾಗಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಎತ್ತಿನಹೊಳೆಗೆ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಕಲೇಶಪುರದ ಎತ್ತಿನಹೊಳೆಯಲ್ಲಿ ಸುರಿವ ಮಳೆಯ ನಡುವೆಯೂ ಈವರೆಗೆ ಆಗಿರುವ ಕಾಮಗಾರಿಗಳು ಹಾಗೂ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಸಚಿವರು, ತ್ವರಿತವಾಗಿ ಯೋಜನೆಯ ಲಾಭ ಬಯಲು ಸೀಮೆಯ ಜನರಿಗೆ ತಲುಪುವಂತೆ ಕಾಲ ಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು. ಪರಿಶೀಲನೆ…

1 2
Translate »