ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ
ಹಾಸನ

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ

July 25, 2018

ಸಕಲೇಶಪುರ:  ಕಾಡಾನೆ ಹಿಂಡು, ಇಂದು ಬೆಳ್ಳಂಬೆಳಿಗ್ಗೆಯೇ ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಕಾಡಾನೆಗಳ ದಾಳಿಯಿಂದ ತಾಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ಅಚ್ಚನ ಹಳ್ಳಿ, ಬಿಳಿಸಾರೆ, ಅಗನಿ ಗ್ರಾಮಗಳಲ್ಲಿ ಕಾಫಿ, ಬಾಳೆ ತೋಟ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅಚ್ಚನಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಬಗಾನೆ ಮರವನ್ನ ಆನೆಗಳು ಉರುಳಿಸಿವೆ. ಆನೆಗಳು ತೋಟದಲ್ಲಿ ಅಡ್ಡಾದಿಡ್ಡಿ ಓಡಾಟಕ್ಕೆ ನೂರಾರು ಕಾಫಿ ಗಿಡಗಳು ನೆಲಸಮವಾಗಿವೆ. ಸ್ಪ್ರೇ ಮಾಡಲು ಇಟ್ಟಿದ್ದ ಪ್ಲಾಸ್ಟಿಕ್ ಬ್ಯಾರಲ್ ಗಳು ಆನೆ ತುಳಿತಕ್ಕೆ ಸಿಕ್ಕಿ ನಾಶವಾಗಿವೆ. ಇದೇ ಗ್ರಾಮದ ಸಚ್ಚಿದೇವ್, ವಿಜಯ್, ವಿವೇಕಾನಂದ, ಶಾಂತಕುಮಾರ್, ಪ್ರೇಮ್ ಕುಮಾರ್, ಸೋಮೇಶ್ ಸೇರಿದಂತೆ ಬಿಳಿಸಾರೆ ಗ್ರಾಮದ ಅನೇಕ ರೈತರ ಕಾಫಿ ತೋಟ, ಭತ್ತದ ಸಸಿಮಡಿ ಹಾಗೂ ಆಸ್ತಿಪಾಸ್ತಿಗೆ ಹಾನಿ ಮಾಡಿವೆ.

Translate »