ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ
ಹಾಸನ

ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ

July 25, 2018

ಹಾಸನ:  ನಗರದ ತಣ್ಣೀರುಹಳ್ಳದ ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಹಳೆಬಸ್‍ನಿಲ್ದಾಣ ಬಳಿಯ ಮುಖ್ಯ ಅಂಚೆ ಕಚೇರಿ ಎದುರು ಕರ್ನಾಟಕ ವೀರಕನ್ನಡಿಗರ ಸೇನೆಯಿಂದ ಪ್ರತಿಭಟಿಸಲಾಯಿತು.

ತಣ್ಣೀರುಹಳ್ಳದ ಅಂಚೆ ಕಚೇರಿ ಪೋಸ್ಟ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮೋಹನ್ ಎಂಬಾತ ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ದಂತಹ ಸರ್ಕಾರದಿಂದ ಬರುವ ಇತರೆ ಯೋಜನೆಯ ಹಣ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸದೆ ಫಲಾನುಭವಿಗಳು ತೊಂದರೆ ಅನುಭವಿ ಸುವಂತಾಗಿದೆ ಎಂದು ದೂರಿದರು.

ಸರ್ಕಾರ ನೀಡುತ್ತಿರುವ ಪಿಂಚಿಣಿ ಹಣವನ್ನೇ ಫಲಾನು ಭವಿಗಳು ನಂಬಿ ಜೀವನ ನಡೆಸುತ್ತಿದ್ದು, ಅವಶ್ಯವಿರುವ ಔಷಧಿ, ಆಹಾರ ಪದಾರ್ಥಗಳನ್ನು ಇದೇ ಹಣ ದಿಂದಲೇ ಖರೀದಿಸಬೇಕಾಗಿದೆ. ಆದರೆ ಸದರಿ ಅಂಚೆ ಪೇದೆಯು ಇವರ ಹಣವನ್ನು ಸರಿಯಾದ ಸಮಯಕ್ಕೆ ತಲುಪಿಸದೆ 2 ತಿಂಗಳಿಗೆ ಒಮ್ಮೆ ಇಲ್ಲವೇ 3 ತಿಂಗಳಿ ಗೊಮ್ಮೆ ಒಂದು ಸಲ ತಲುಪಿಸುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಮೋಹನ್ ರನ್ನು ಬದಲಾಯಿಸಿ ಬೇರೊಬ್ಬ ನಿಷ್ಠಾ ವಂತನನ್ನು ಅಂಚೆ ಪೇದೆಯಾಗಿ ಸ್ಥಳಕ್ಕೆ ನೇಮಿಸು ವಂತೆ ಆಗ್ರಹಿಸಿದರು. ಇದೇ ವೇಳೆ ಕರ್ನಾಟಕ ವೀರಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಜಮೀರ್, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ, ಸೂಫಿ ಇತರರಿದ್ದರು.

Translate »