ಕಾಡಾನೆಗಳ ಪುಂಡಾಟ: ಬೆಳೆ ನಾಶ
ಹಾಸನ

ಕಾಡಾನೆಗಳ ಪುಂಡಾಟ: ಬೆಳೆ ನಾಶ

September 5, 2018

ಸಕಲೇಶಪುರ:  ತಾಲೂಕಿನ ವಿವಿದ ಗ್ರಾಮಗಳಲ್ಲಿ ಕಾಡಾನೆಗಳ ಪುಂಡಾಟ ದಿಂದ ಬೆಳೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ತಾಲೂಕು ಸುಳ್ಳಕ್ಕಿ ಗ್ರಾಮದ ಬೈರಯ್ಯ ಹಾಗೂ ಕಾಳಯ್ಯ ಅವರ ಕಾಫಿ ತೋಟದಲ್ಲಿ ಎರಡು ದಿನದಿಂದ ಬೀಡು ಬಿಟ್ಟಿರುವ ಸುಮಾರು 30 ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇದರಿಂದ ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ, ತೆಂಗಿನ ಮರಗಳನ್ನು ನಾಶವಾಗಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿ ರೈತರ ಭತ್ತದ ಗದ್ದೆಗಳಲ್ಲಿ ಬೆಳೆ ನಾಶ ಮಾಡಿವೆ. ಸುಳ್ಳಕ್ಕಿ, ಕೊಣ್ಣೂರು, ಇಬ್ಬಡಿ, ಕುದುರಂಗಿ, ಸತ್ತಗಾಲ್, ಜಾನೆಕೆರೆ ಈ ಭಾಗದಲ್ಲಿ ಹಗಲು ಹೊತ್ತಿನಲ್ಲೇ ಕಾಡಾನೆಗಳು ಅಡ್ಡಾಡುತ್ತಿದ್ದು, ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ರೈತರು ಪ್ರಾಣ ಭಯದಲ್ಲಿ ಬದುಕುವಂತಾಗಿದೆ.. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »