ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸೆ.7 ರಂದು ಸರಳ ಕೈಲ್‍ಪೊಳ್ದ್
ಕೊಡಗು

ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸೆ.7 ರಂದು ಸರಳ ಕೈಲ್‍ಪೊಳ್ದ್

September 5, 2018

ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರಿಗೆ ಸಾರ್ವಜನಿಕ ಶ್ರದ್ದಾಂಜಲಿ
ಶ್ರೀಮಂಗಲ: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಾರ್ವ ಜನಿಕ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಟಿ.ಶೆಟ್ಟಿಗೇರಿ ಹಾಗೂ ಸಂಭ್ರಮ ಮಹಿಳಾ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡª ಸಮಾಜದಲ್ಲಿ ಸೆ.7 ರಂದು ಪೂರ್ವಾಹ್ನ 10 ಗಂಟೆಗೆ ಕೈಲ್‍ಪೊಳ್ದ್ ಆಚರಣೆಯನ್ನು ನಡೆಸಲಾಗುವುದು.

ಪ್ರಕೃತಿ ವಿಕೋಪದಿಂದ ಉತ್ತರ ಕೊಡಗಿನ ಜನರು ಸಂತ್ರಸ್ಥರಾಗಿದ್ದು ಹಲವರು ಪ್ರಾಣ ಹಾಗೂ ಆಸ್ತಿ ಪಾಸ್ತಿ ಕಳೆದುಕೊಂಡಿರುವುದರಿಂದ ಇಡೀ ಕೊಡಗು ಶೋಕ ಸಾಗರದಲ್ಲಿ ಮುಳುಗಿದೆ. ಈ ಹಿನ್ನೆಲೆಯಲ್ಲಿ ವರ್ಷಂಪ್ರತಿ ಕ್ರೀಡಾಕೂಟಗಳೊಂದಿಗೆ ನಡೆಸುವ ವಿಜೃಂಭಣೆಯ ಹಬ್ಬದ ಆಚರಣೆಯನ್ನು ಈ ವರ್ಷ ರದ್ದುಗೊಳಿಸಿದ್ದು ಅತ್ಯಂತ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಕೇವಲ ಆಯುಧ ಪೂಜೆ ಮಾಡಿ ಸಾಂಕೇತಿಕವಾಗಿ ಹಬ್ಬವನ್ನು ಆಚರಿಸಲಾಗು ವುದು. ನಂತರ ಸಭೆ ಸೇರಿ ಉತ್ತರ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಮೃತಪಟ್ಟವರ ಆತ್ಮಕ್ಕೆ ಸಂತಾಪ ಕೋರಿ ಸಾರ್ವಜನಿಕವಾಗಿ ಶ್ರದ್ದಾಂಜಲಿ ಅರ್ಪಿಸಲಾಗುವುದು. ನಾಡಿನ ಸಮಸ್ಥ ಬಾಂಧವರು ಈ ಕಾರ್ಯದಲ್ಲಿ ಭಾಗವಹಿಸಬೇಕಾಗಿ ಮೂರು ಸಂಸ್ಥೆಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Translate »